ನಾನು ಖುಷಿಯಾಗಿದ್ದೇನೆ, ಸುಸೈಡ್ ನೋಟ್‌ನ್ನು ಪೂರ್ತಿ ಓದಬೇಡಿ ಹೀಗೊಂದು ಕಾರಣ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಯುವಕ!

ವಡೋದರಾ: ಗುಜರಾತ್‌ನ ವಡೋದರದಲ್ಲಿ ಇಪ್ಪತ್ತೊಂದು ವರ್ಷದ ಯುವಕ ಭಾವಿನ್ ಎಂಬಾತ ಬುಧವಾರ ಮಧ್ಯಾಹ್ನ ನಾಲ್ಕು ಸಾಲುಗಳ ಆತ್ಮಹತ್ಯೆ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅದನ್ನು ಓದಿದರೆ ಪ್ರೇಮ ಪ್ರಸಂಗ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದನ್ನಿಸುತ್ತದೆ. ಭಾವಿನ್‌ನಿಗೆ ಏಕ್ತು ಎಂಬ ಯುವತಿಯೊಂದಿಗೆ ಪ್ರೇಮವಿತ್ತು. ಭಾವಿನ್‌ನ ತಂದೆಗೆ ಇದು ಇಷ್ಟವಿರಲಿಲ್ಲ. ಆದರೆ ಭಾವಿನ್ ಏಕ್ತುಳಿಗೆ ಮದುವೆಯಾಗುವುದಾಗಿ ಮಾತು ಕೊಟ್ಟಿದ್ದ. ಕುಟುಂಬ ಸಿದ್ಧವಿರಲಿಲ್ಲ. ಅವನು ಆತ್ಮಹತ್ಯೆ ಪತ್ರದಲ್ಲಿ ಎಲ್ಲರೊಂದಿಗೂ ಕ್ಷಮೆ ಯಾಚಿಸಿದ್ದಾನೆ. ಆ ಪತ್ರದಲ್ಲಿ ತುಂಬಿರುವ ನೋವು ಹೀಗಿದೆ-
- ಮಮ್ಮಿ, ಡ್ಯಾಡಿಯವರಲ್ಲಿ ನನ್ನಿಂದೇನಾದರೂ ತಪ್ಪಾಗಿದ್ದರೆ ಕ್ಷಮಿಸಲು ಹೇಳಿ.
- ಮಮ್ಮಿ ನನ್ನನ್ನು ಕ್ಷಮಿಸಿ. ನಾನು ತುಂಬ ಬಳಲಿದ್ದೇನೆ. ನಾನೀಗ ನಿದ್ರಿಸಲು ಬಯಸುತ್ತಿದ್ದೇನೆ.ಇದರಲ್ಲಿ ಪಾಪ(ತಂದೆ) ರ ಯಾವ ತಪ್ಪೂ ಇಲ್ಲ. -ಪಾಪ, ಪ್ಲೀಸ್ ನಿಮ್ಮಿಂದಾದರೆ ಏಕ್ತು(ಪ್ರೇಯಸಿ ಹೆಸರು)ಳಿಗೆ ಸ್ವಲ್ಪ ಹಣ ಕಳಿಸಿರಿ.
- ಸಾರಿ, ಏಕ್ತು ನಾನು ನಿನ್ನಲ್ಲಿ ಹೇಳಿದ್ದೆ ಈ ವ್ಯಾಲೆಂಟೈನ್ ದಿನ ನೀನು ನನ್ನವಳಾಗುವೆ ಎಂದು. ನಮ್ಮ ಮನೆಯನ್ನು ಮಾಡಿಕೊಳ್ಳೋಣ ಎಂದು
-ಒಂದು ವೇಳೆ ಹಾಗೆ ಆಗುವುದಿಲ್ಲವಾದರೆ ನಾನು ಈ ಜಗತ್ತಿನಲ್ಲಿ ಉಳಿಯಲಾರೆ.
-ಗೆಳೆಯರೇ, ನನ್ನ ಕನಸು ಎಂದೂ ಈಡೇರುವುದಿಲ್ಲವೆಂದು ನನಗೆ ಗೊತ್ತಿದೆ. ಆದ್ದರಿಂದ ಈಗ ನಾನು ಹೋಗುತ್ತಿದ್ದೇನೆ/.
- ಸಾರಿ, ಗೆಳೆಯರೇ ಇನ್ನು ನಾವೆಂದೂ ಭೇಟಿಯಾಗಲಾರೆವು.ನನ್ನಿಂದೇನಾದರೂ ತಪ್ಪಾಗಿದ್ದರೆ ಕ್ಷಮಿಸಿ ಬಿಡಿ.
ಮಾತ್ರವಲ್ಲ ತನ್ನ ಆತ್ಮಹತ್ಯೆ ಪತ್ರದಲ್ಲಿ ಒಂದು ಕವನವನ್ನು ಬರೆದು ಭಾವಿನ್ ಈಲೋಕಕ್ಕೆ ವಿದಾಯ ಹೇಳಿದ್ದಾನೆ.







