ಪೆಬ್ರವರಿ 14 ರಂದು ಮುಲ್ಕಿ ಬಂಟರ ಸಂಘದ ಮಹಿಳಾ ಘಟಕದ ಅಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
ಮುಲ್ಕಿ, ಫೆ.12: ಮುಲ್ಕಿ ಬಂಟರ ಸಂಘದ ಮಹಿಳಾ ಘಟಕದ ಅಶ್ರಯದಲ್ಲಿ ದೇರಳಕಟ್ಟೆ ಜಸ್ವೀಸ್ ಕೆ. ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಪೆಬ್ರವರಿ 14 ರಂದು ಅದಿತ್ಯವಾರ ಬೆಳಗ್ಗೆ 9 ರಿಂದ ಮದ್ಯಾಹ್ನ 1 ರ ವರೆಗೆ ಕಾರ್ನಾಡು ಗಾಂಧೀ ಮೈದಾನದ ಹಿಂಭಾಗದ ಬಂಟರ ಸಂಘದ ಸಭಾಭವನದಲ್ಲಿ ನಡೆಯಲಿದೆ.
ಶಿಬಿರದಲ್ಲಿ ತಜ್ಞ ವೈದ್ಯರಿಂದ ಕಿವಿ, ಗಂಟು, ನೋವು, ಎಲುಬು ನೋವು, ಮಕ್ಕಳ ತಪಾಸನೆ ಸ್ತ್ರೀರೋಗ ತಪಾಸನೆಗಳು ನಡೆಯಲಿದ್ದು, ಸಾರ್ವಜನಿಕರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಸಂಘದ ಪ್ರಕಟನೆ ತಿಳಿಸಿದೆ.
Next Story





