ಕಿನ್ನಿಗೋಳಿ : ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ 13 ವಿಧ್ಯಾರ್ಥಿಗಳಿಗೆ ಸನ್ಮಾನ
.jpg)
ಕಿನ್ನಿಗೋಳಿ, ಫೆ.12: ಹರಿಪಾದೆ ಶ್ರೀ ಜಾರಂತಾಯ ದೈವಸ್ಥಾನದ ವಷಾವಧಿ ನೇಮೋತ್ಸವದ ಪ್ರಯುಕ್ತ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ 13 ವಿಧ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಳೆದ ವರ್ಷ ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಸ್ಥಳೀಯ ವಿಧ್ಯಾರ್ಥಿಗಳಾದ ವಿನುತಾ, ಸನ್ನಿಧಿ, ಚೈತ್ರಾ ಶೆಟ್ಟಿ , ದೀಪಾ ಶೆಟ್ಟಿ ಯವರನ್ನು ಪಂಜ ವಾಸುದೇವ ಭಟ್ ವಿಶೇಷವಾಗಿ ಸನ್ಮಾನಿಸಿ ಗೌರವಿಸಿ ಬಳಿಕ ಅಶೀರ್ವಚನ ಗೈದರು.
ದೈವಸ್ಥಾನದ ಆಡಳಿತ ಮ್ತೊೇಸರ ನಲ್ಯಗುತ್ತು ಗುತ್ತಿನಾರ್ ಭೋಜ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪಂಜದಗುತ್ತು ವಿಶ್ವನಾಥ ಶೆಟ್ಟಿ , ನಲ್ಯಗುತ್ತು ದಾಮೋದರ ಶೆಟ್ಟಿ , ನಲ್ಯಗುತ್ತು ಪ್ರಕಾಶ್ ಶೆಟ್ಟಿ, ಭಾಸ್ಕರ ಕೊಯ್ಕುಡೆ ಮತ್ತಿತರರು ಉಪಸ್ಥಿತರಿದ್ದರು.
Next Story





