ಯುಪಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಇಲ್ಲ: ಆಮ್‌ಆದ್ಮಿ ಪಾರ್ಟಿ

ಪಂಜಾಬ್ ಚುನಾವಣೆಯಲ್ಲಿ ನಿತೀಶ್‌ಕುಮಾರ್ ನೆರೆವು ಪಡೆಯಲಿರುವ ಆಮ್‌ಆದ್ಮಿ ಪಾರ್ಟಿ
ಹೊಸದಿಲ್ಲಿ: ದಿಲ್ಲಿಯ ನಂತರ ಪಂಜಾಬ್. ಆಮ್ ಆದ್ಮಿ ಪಾರ್ಟಿಯ ನಾಯಕ ದಿಲ್ಲಿ ಮುಖ್ಯಮಂತ್ರಿ ಅರವಿಂಧ್ ಕೇಜ್ರಿವಾಲ್ ಪಂಜಾಬ್ ವಿಧಾನಸಭಾ ಚುನಾವಣೆ ಕುರಿತು ಭಾರೀ ಉತ್ಸಾಹದಲ್ಲಿದ್ದಾರೆ. ಅಲ್ಲಿಯ ಜನರಿಗೆ ತನ್ನ ಪಾರ್ಟಿಯ ಮೇಲೆ ಬಹಳ ನಿರೀಕ್ಷೆ ಇದೆ ಎಂದು ಅವರು ಹೇಳಿಕೊಂಡಿದ್ದಾರೆ.
ಪಂಜಾಬ್‌ನಲ್ಲಿ ಆಪ್ ಕಾಂಗ್ರೆಸ್‌ನೊಂದಿಗೆ ಸಂಘರ್ಷ ನಡೆಸಲಿದೆ ಎಂದು ಕೇಜ್ರಿ ಹೇಳಿದ್ದಾರೆ. ಅವರ ಪ್ರಕಾರ ಬಿಜೆಪಿ ಮತ್ತು ಅಕಾಲಿದಳ ಮೈತ್ರಿ ಸರಕಾರದಿಂದ ಪಂಜಾಬ್ ಮತದಾರರು ಬೇಸತ್ತಿದ್ದಾರೆ. ನೀವು ಕೇವಲ ಪಂಜಾಬ್‌ಗೆ ಮಾತ್ರ ಯಾಕೆ ಗಮನ ಕೊಟ್ಟಿದ್ದೀರಿ. ಉತ್ತರ ಪ್ರದೇಶದಲ್ಲಿಯೂ ಮುಂದಿನ ವರ್ಷ ಚುನಾವಣೆ ಇದೆಯಲ್ಲ ಎಂದು ಪ್ರಶ್ನಿಸಿದಾಗ ನಮ್ಮಲ್ಲಿ ಅಲ್ಲಿ ಅಷ್ಟು ಕಾರ್ಯಕರ್ತ ಬಲ ಇಲ್ಲ ಎಂದು ಕೇಜ್ರಿವಾಲ್ ಪ್ರತಿಕ್ರಿಯಿಸಿದ್ದಾರೆ.
ಒಂದುವೇಳೆ ಹೋರಾಡುವುದಿದ್ದರೆ ಅದು ಗೆಲುವಿಗಾಗಿ ಆಗಿರಬೇಕು .ಐದ್ಹತ್ತು ಶಾಸಕರು ಗೆದ್ದರೆ ಪಕ್ಷಕ್ಕೆ ಏನು ಪ್ರಯೋಜನ. ಪಂಜಾಬ್‌ನಲ್ಲಿ ಭಾರೀ ಹಿಂದಿನಿಂದಲೇ ಸಿದ್ಧತೆ ನಡೆಸಲಾಗಿದೆ. ಬೂತ್ ಲೆವೆಲ್‌ನಲ್ಲಿ ಕಾರ್ಯಕರ್ತರು ಇದ್ದಾರೆ. ಮನೆಮನೆ ಸಂಪರ್ಕಿಸುವ ಕೆಲಸ ಆರಂಭವಾಗಿದೆ. ದೊಡ್ಡ ಪಕ್ಷಗಳು ಪ್ರಚಾರಕ್ಕೆ ಸಿದ್ಧವಾಗುವಷ್ಟರಲ್ಲಿ ಆಪ್ ಬಹಳ ಮುಂದೆ ಸಾಗಿರುತ್ತದೆ ಎಂದು ಅವರು ಹೇಳಿದ್ದಾರೆ. ಮತದಾರರು ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಬಿಜೆಪಿಗೆ ಮತ ಹಾಕುತ್ತಿದ್ದರು. ಬಿಜೆಪಿ ಸರಕಾರದಲ್ಲಿದ್ದರೆ ಕಾಂಗ್ರೆಸ್‌ನ್ನು ಗೆಲ್ಲಿಸುತ್ತಿದ್ದರು. ಆದರೆ ಅವರು ಅವೆರಡೂ ಪಕ್ಷಗಳಿಂದ ಕಷ್ಟ ಅನುಭವಿಸುತ್ತಿದ್ದರು ಎಂದ ಕೇಜ್ರಿವಾಲ್ ಪಂಜಾಬ್ ಚುನಾವಣೆಯಲ್ಲಿ ಪಕ್ಷ ನಿತೀಶ್ ಕುಮಾರ್‌ರ ಸಹಾಯವನ್ನು ಪಡೆದುಕೊಳ್ಳಲಿದೆ ಎಂದು ಹೇಳಿದ್ದಾರೆ.







