ಕಟ್ಟಕಡೆಯ ವ್ಯಕ್ತಿ ಉದ್ಧಾರವಾದರೆ ಸಮಾಜ ಅಭಿವೃದ್ದಿ: ಬಿಂದೇಶ್ವರ್ ಪತಕ್

ಮಂಗಳೂರು, ಫೆ.12: ಸಮಾಜದ ಕಟ್ಟಕಡೆಯ ವ್ಯಕ್ತಿಯ ಉದ್ಧಾರವಾದಾಗ ಮಾತ್ರ ಸಮಾಜದ ಅಭಿವೃದ್ಧಿ ಎನ್ನಬಹುದು. ಸಮಾಜಕ್ಕೆ ಅಂಟಿಕೊಂಡಿರುವ ಅಸಮಾನತೆ, ಜಾತಿ ವ್ಯವಸ್ಥೆ ದೂರವಾಗಬೇಕು. ಶೋಷಿತ ಸಮುದಾಯದ ಸಮಗ್ರ ಅಭಿವೃದ್ಧಿಯಾಗಬೇಕು. ಆಗ ಮಾತ್ರ ಅಭಿವೃದ್ಧಿ ಎಂಬ ಪದಕ್ಕ ನಿಜವಾದ ಅರ್ಥ ಬರಲು ಸಾಧ್ಯ ಎಂದು ನವದೆಹಲಿಯ ಸುಲಭ್ ಅಂತಾರಾಷ್ಟ್ರೀಯ ಸಮಾಜ ಸೇವಾ ಸಂಸ್ಥೆಯ ಸಂಸ್ಥಾಪಕ, ಸಮಾಜಶಾಸಜ್ಞ ಬಿಂದೇಶ್ವರ್ ಪತಕ್ ಅಭಿಪ್ರಾಯಿಸಿದ್ದಾರೆ.
ಅವರು ಇಂದು ಮಂಗಳೂರು ಸಮಾಜಶಾಸ ಸಂಘ ತನ್ನ ರಜತೋತ್ಸವದ ಅಂಗವಾಗಿ ಸಂತ ಅಲೋಶಿಯಸ್ ಕಾಲೇಜಿನ ಸಹಭಾಗಿತ್ವದಲ್ಲಿ ಶುಕ್ರವಾರ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಯುಜಿಸಿ ಪ್ರಾಯೋಜಿತ ‘ಸಮಾಜ ವಿಜ್ಞಾನ ಮತ್ತು ಸಮಾಜ ಅಭಿವೃದ್ಧಿ’ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ದೇಶದ ಅನೇಕ ಭಾಗಗಳಲ್ಲಿ ಇಂದಿಗೂ ಅಸಮಾನತೆ ಶೋಷಿತರನ್ನು ಕಾಡುತ್ತಿದೆ. ಸಮಗ್ರ ಶಿಕ್ಷಣದ ಮೂಲಕ ಮಾತ್ರ ಹೊಸ ಬದಲಾವಣೆ ಸಾಧ್ಯ. ಪ್ರತಿಯೊಬ್ಬರ ಮನಃಪರಿವರ್ತನೆಯಾಗಬೇಕು. ವಿದ್ಯಾರ್ಥಿಗಳು ಇಂತಹ ಕ್ರಾಂತಿಕಾರಿ ಬದಲಾವಣೆಗೆ ಮುಂದಾಬೇಕು ಎಂದು ಅವರು ಹೇಳಿದರು.
ಬೆಂಗಳೂರಿನ ಐಎಸ್‌ಇಸಿ ಸಂಸ್ಥೆಯ ನಿವೃತ್ತ ಪ್ರೊಘಿ.ಜಿ.ಕೆ.ಕಾರಂತ್ ದಿಕ್ಸೂಚಿ ಭಾಷಣ ಮಾಡಿದರು.
ಸಮಾಜಶಾಸಜ್ಞ ಪಾಟ್ನಾದ ಪ್ರೊಘಿ.ನೀಲ್ ರತನ್ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದರು. ಸಂತ ಅಲೋಶಿಯಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಫಾ.ಡೆನ್ಜಿಲ್ ಲೋಬೊ ಅಧ್ಯಕ್ಷತೆ ವಹಿಸಿತ್ತರು.
ಮಂಗಳೂರು ಸಮಾಜ ಶಾಸ ಸಂಘದ ಅಧ್ಯಕ್ಷ ಡಾ.ವಿನಯ್ ರಜತ್, ಕಾರ್ಯದರ್ಶಿ ವಿಜಯ ಆಳ್ವ, ಫಾ.ಆಲ್ಪೋನ್ಸ್ ಫೆರ್ನಾಂಡಿಸ್, ಡಾ.ರಿಚರ್ಡ್ ಪಯಾಸ್, ಡಾ.ಆಲ್ವಿನ್ ಡೇಸಾ ವೇದಿಕೆಯಲ್ಲಿದ್ದರು.
ಕಾಲೇಜಿನ ಪ್ರಾಂಶುಪಾಲ ಫಾ.ಸ್ವೀಬರ್ಟ್ ಡಿಸಿಲ್ವಾ ಸ್ವಾಗತಿಸಿದರು.







