Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಸಮನ್ವಯತೆಯ ಕೊರತೆಯಿಂದ ವಿವಾದಕ್ಕೆ...

ಸಮನ್ವಯತೆಯ ಕೊರತೆಯಿಂದ ವಿವಾದಕ್ಕೆ ಬಲಿಯಾಗುತ್ತಿರುವ ಸಂಘಟನೆಗಳು....

ವಾರ್ತಾಭಾರತಿವಾರ್ತಾಭಾರತಿ12 Feb 2016 7:22 PM IST
share

ಇತ್ತೀಚೆಗೆ ಮುಸ್ಲಿಂ ಧಾರ್ಮಿಕ ಸಂಘಟನೆಯೊಂದು ಮದ್ರಸಾದ ಬಗ್ಗೆ ಸಮಾಜಕ್ಕೆ ಮನವರಿಕೆ ಮಾಡುವ ಉದ್ದೇಶದಿಂದ ಹಮ್ಮಿಕೊಂಡಿದ್ದ ವಿಚಾರಗೋಷ್ಟಿಯು ಬಹಳಷ್ಟು ಚರ್ಚಾಸ್ಪದವಾಗುತ್ತಿದೆ, ಹಾಗೂ ಅದರ ಸಾಧಕ-ಭಾದಕಗಳನ್ನು ನಾನಾ ರೀತಿಯಲ್ಲಿ ಸಾಮಾಜಿಕ ತಾಣದ ಮೂಲಕ ತೂಗಲಾಗುತ್ತಿದೆ.

ಇತ್ತೀಚೆಗೆ ಮುಸ್ಲಿಂ ಸಂಘಟನೆಗಳ ಪ್ರತಿಯೊಂದು ಕಾರ್ಯಕ್ರಮಗಳು ಸಮುದಾಯದೊಳಗೆ ಅಪಸ್ವರಕ್ಕೆ ಎಡೆಮಾಡಿಕೊಡುತ್ತಿದೆ. ಸಂಘಟನಾ ವೈರುಧ್ಯವಿರುವವರು ಪರಸ್ಪರ ಧೂಷಣೆ ಮಾಡುತ್ತಾ, ಪಾಲ್ಗೊಳ್ಳುವ ಗಣ್ಯ ಅತಿಥಿಗಳ ಸಿಧ್ದಾಂತವನ್ನು ಬೊಟ್ಟುಮಾಡಿ ಕಚ್ಚಾಡಿಕೊಳ್ಳುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಸಂಘಟನೆಗಳ ನೈಜ ದ್ಯೇಯವನ್ನೇ ದಾರಿ ತಪ್ಪಿಸುವ ಹಂತಕ್ಕೂ ಇಂತಹ ಅನಾವಶ್ಯಕ ಚರ್ಚೆಗಳು ಎಡೆ ಮಾಡಿಕೊಡುತ್ತಿವೆ. ಇದರಿಂದಾಗಿ ಉದಾತ್ತ ಸಂದೇಶವೊಂದು ಕಳಂಕಪೂರಿತವಾಗಿ ಸಮಾಜದಲ್ಲಿ ಸಂಘರ್ಷಾವಸ್ಥೆ ಉಂಟು ಮಾಡುತ್ತಿದೆಯೇ ಹೊರತು, ಕಾರ್ಯಕ್ರಮಗಳಿಂದ ನಿರೀಕ್ಷಿತ ಫಲಿತಾಂಶವನ್ನು ಗಳಿಸುವಲ್ಲಿ ಸಂಘಟಕರು ವಿಫಲರಾಗುತ್ತಿರುವುದು ಎದ್ದು ಕಾಣುತ್ತಿದೆ.

ಮುಸ್ಲಿಂ ಸಂಘಟನೆಗಳಲ್ಲಿ ಪರಸ್ಪರ ಸಹಮತ ಮತ್ತು ಸಮನ್ವಯತೆಯ ಕೊರತೆಯಿಂದಾಗಿ ಇಂತಹ ವಿವಾದಗಳು ಹುಟ್ಟಿಕೊಳ್ಳುತ್ತಿವೆ. ಇದರಿಂದಾಗಿ ಸಮುದಾಯವು ಗಳಿಸಿಕೊಳ್ಳುವುದಕ್ಕಿಂತ ಕಳೆದು ಕೊಳ್ಳುವ ಸಾದ್ಯತೆಗಳೇ ಹೆಚ್ಚಿರುವುದರಿಂದ ಪರಸ್ಪರ ಕೆಸರೆರಚಿಕೊಳ್ಳುವ ಪರಂಪರೆಗೆ ಅನುವು ಮಾಡಿಕೊಡದಿರುವುದೇ ಅತ್ಯಂತ ಸೂಕ್ತವಾದ ಮತ್ತು ಸಮಂಜಸವಾದ ನಡೆಯಾಗಿರಬಹುದು. ಹಾಗೆಯೇ ಸಂಘಟನೆಗಳು ತಮ್ಮ ಕಾರ್ಯಕ್ರಮದ ಮೂಲಕ ತೋರ್ಪಡಿಸಿ ಕೊಡಬೇಕಾಗಿರುವುದು ಇದನ್ನೇ ಆಗಿದೆ.

ಸಂಘಟನೆಗಳು ಸಮುದಾಯವನ್ನು ಸಂಘಟಿಸಬೇಕೇ ವಿನಃ ಇಂದು ಕಾಣುತ್ತಿರುವಂತೆ ಸಮುದಾಯವನ್ನು ಒಡೆಯುವ ತಂತ್ರ ರೂಪಿಸಬಾರದು.

ಸಂಘಟನೆಗಳು ಪರಸ್ಪರ ಪೈಪೋಟಿ ನಡೆಸಿ, ಅಹಂಕಾರ, ಅಧಿಕಾರಮೋಹ ಮೈಗೂಡಿಸಿಕೊಂಡಾಗ ಮಾತ್ರ ಇಂತಹ ಸಮಸ್ಯೆಗಳು ಉದ್ಭವಿಸುತ್ತದೆ. ಅದರ ವ್ಯತಿರಿಕ್ತ ಪರಿಣಾಮವಾಗಿ ಪರಸ್ಪರ ಮುಖ ತಿರುಗಿಸಿಕೊಂಡು ಸಂಘಟಿತ ಶಕ್ತಿ ನಶಿಸಿ, ವಿದೂರರಾಗಿ ದುರ್ಬಲರಾಗುತ್ತಿದ್ದೇವೆ.

ಪ್ರಯೋಜನಗಳನ್ನು ನಿರೀಕ್ಷಿಸಿಕೊಂಡು ಯಾವುದೇ ಕಾರ್ಯಕ್ರಮಗಳನ್ನು ನಡೆಸುವುದಾದರೆ, ಮೊದಲು ಸಮುದಾಯದ ಇತರ ಸಂಘಟನೆಗಳೊಂದಿಗೆ ಚರ್ಚೆ ನಡೆಸಿ(ಶೂರ), ಅವರ ಬಾಹ್ಯ ಬೆಂಬಲವನ್ನು ಪಡೆದು, ಪರಸ್ಪರ ಸೌಹಾರ್ದ ಮತ್ತು ಸಹಕಾರದ ಮನೋಭಾವನೆಯಿಂದ ಮುಂದಡಿಯಿಟ್ಟಲ್ಲಿ, ಅದರ ವಿರುದ್ದ ಅಪಸ್ವರ ಬರಲು ಸಾಧ್ಯವಿಲ್ಲ ಮತ್ತು ಕಾರ್ಯಕ್ರಮದ ಯಶಸ್ವು ಸಂಘಟಕರ ನಿರೀಕ್ಷೆಯನ್ನೂ ಮೀರಿ ಪರಿಣಾಮ ಬೀರಿ ಫಲಪ್ರದವಾಗಬಹುದು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಇಂತಹದೊಂದು ಪ್ರಜ್ಞಾವಂತಿಕೆಯನ್ನು ಪ್ರಾಯೋಗಿಕವಾಗಿ ಬಳಸಿಕೊಳ್ಳಲು ಸಂಘಟನೆಗಳು ಸಿದ್ದರಾಗಬಹುದೇ ಎಂಬುದು ಈ ಸಮುದಾಯದ ಪ್ರಶ್ನೆ.

ಕೆಲವು ಸಂಘಟನೆಗಳು ಇನ್ನೂ ಪುರಾತನ ಕಟ್ಟುಪಾಡುಗಳನ್ನೇ ಪರಿಪಾಠವಾಗಿಸಿ ಕೊಂಡಿರುವುದರಿಂದ, ಹಾಗೇ ಕೆಲವರು ನಾವು-ನಮ್ಮದು ಎಂಬ ಮಧ ತಲೆಗೆ ಅಡರಿಸಿಕೊಂಡಿರುವ ಕಾರಣ ಸಮನ್ವಯತೆಯನ್ನು ನಿರೀಕ್ಷೆ ಮಾಡುವಂತೆಯೂ ಇಲ್ಲ. ಕೆಲವರಿಗೆ ಸಮನ್ವತೆಯಿಂದಾಗಿ ಅವರವರ ಆರ್ಥಿಕತೆಯ ಮೇಲೆ ಹೊಡೆತ ಬೀಳಬಹುದೋ ಎಂಬ ಚಿಂತೆಯೂ ಇರಬಹುದು. ನಿಜಾರ್ಥದಲ್ಲಿ ಇಂತಹ ಒಂದು ದಿಟ್ಟತನಕ್ಕೆ ಸಮುದಾಯದಲ್ಲಿರುವ ಸಂಘಟನೆಗಳು ಮುಂದಾದರೆ, ಖಂಡಿತವಾಗಿಯೂ ಅದರಿಂದಾಗಿ ಸಂಘಟನೆಗಳ ಬೆಳವಣಿಗೆಯೊಂದಿಗೆ ಅದರ ಪರಿಣಿತ ಫಲಗಳು ಸಮುದಾಯಕ್ಕೆ ಯಥೇಚ್ಛವಾಗಿ ದೊರೆಯಲಿದೆ..

ಸಂಘಟನೆಗಳಲ್ಲಿ ನಾಯಕತ್ವ ಪಡೆದುಕೊಂಡು, ಸಮಾಜದಲ್ಲಿ ಉನ್ನತ ಸ್ಥಾನಮಾನದಲ್ಲಿರುವವರು ಇಂತಹದೊಂದು ಪ್ರಜ್ಞಾವಂತಿಕೆಯನ್ನು ಅಳವಡಿಸಿಕೊಳ್ಳಲು ಮುಂದಾಗುವರೋ, ಅಥವಾ ಪರಸ್ಪರ ಕಾಲೆಳೆದುಕೊಂಡು, ಕಿತ್ತಾಟವನ್ನೇ ನೆಚ್ಚಿಕೊಂಡಿರುವರೋ ಕಾಲವೇ ಉತ್ತರಿಸಲಿದೆ.

✍ಶಮೀಮ್ ವಾಮಂಜೂರು...

¶¶¶ ನಂದಾದೀಪ ¶¶¶...

share
ವಾರ್ತಾಭಾರತಿ
ವಾರ್ತಾಭಾರತಿ
Next Story
X