ಧನಾತ್ಮಕ ಚಿಂತನೆಯಿಂದ ಜೀವನದಲ್ಲಿ ಯಶಸ್ಸು :ದಿನೇಶ್ ಆಳ್ವ

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಶುಕ್ರವಾರ ವಿವಿ ವ್ಯಾಪ್ತಿಯ ಅಂತರ್ ಕಾಲೇಜು ಮಟ್ಟದ
ಬಯೋಸಿನರ್ಜಿ -2016ಉತ್ಸವದ ಉದ್ಘಾಟನೆಯನ್ನು ದಿನೇಶ್ ಆಳ್ವ ನೆರವೇರಿಸಿದರು.
ಕೊಣಾಜೆ: ವಿದ್ಯಾರ್ಥಿಗಳು ಧನಾತ್ಮಕ ಚಿಂತನೆಯನ್ನು ಬೆಳೆಸಿಕೊಂಡು ಮುನ್ನಡದರೆ ಜೀವನದಲ್ಲಿ ಯಶಸ್ಸನ್ನು ಗಳಿಸುವುದರೊಂದಿಗೆ ಉತ್ತಮ ಭವಿಷ್ಯವನ್ನು ಕಂಡುಕೊಳ್ಳಬಹುದು. ಪಠ್ಯ ಚಟುವಟಿಕೊಂದಿಗೆ ತಮಗೆ ಪೂರಕವಾಗಿರುವ ಪಠ್ಯೇತರ ಚಟುವಟಿಕೆಯಲ್ಲೂ ತೊಡಗಿಸಿಕೊಳ್ಳಬೇಕು ಎಂದು ಕರ್ನಾಟಕ ಸರಕಾರ ಅಪಿಲೇಯೇಟ್ ಅಥಾರಟಿ ಎನ್ವಯರ್‌ಮೆಂಟ್‌ನ ಸದಸ್ಯ ಹಾಗೂ ವಿವಿ ಹಳೆ ವಿದ್ಯಾರ್ಥಿ ದಿನೇಶ್ ಕುಮಾರ್ ಆಳ್ವ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಅವರು ಮಂಗಳೂರು ವಿಶ್ವವಿದ್ಯಾನಿಲಯದ ಜೀವವಿಜ್ಞಾನ ವಿಭಾಗದ ಆಶ್ರಯದಲ್ಲಿ ವಿಶ್ವವಿದ್ಯಾನಿಲಯ ವ್ಯಾಪ್ತಿಯ ಅಂತರ್ ಕಾಲೇಜು ಮಟ್ಟದ ಬಯೋಸಿನರ್ಜಿ -2016ಉತ್ಸವದ ಉದ್ಘಾಟನೆಯನ್ನು ಶುಕ್ರವಾರ ಮಂಗಳೂರು ವಿವಿಯ ಹಳೆಸೆನೆಟ್ ಸಭಾಂಗಣದಲ್ಲಿ ನೆರವೇರಿಸಿ ಮಾತನಾಡಿದರು. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಉತ್ತಮ ಅನುಭವವನ್ನು ನೀಡುವುದರೊಂದಿಗೆ ಅವರಲ್ಲಿ ನಾಯಕತ್ವ ಗುಣವನ್ನು ಬೆಳೆಸುವಲ್ಲಿ ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಜೀವವಿಜ್ಞಾನ ವಿಭಾಗವು ವಿವಿಧ ಕಾಲೇಜುಗಳ ಜೀವಶಾಸ್ತ್ರ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕಾಗಿ ಪ್ರಥಮ ಭಾರಿಗೆ ಈ ಅರ್ಥಪೂರ್ಣ ಶೈಕ್ಷಣಿಕ ಕಾರ್ಯಕ್ರಮವನ್ನು ಆಯೋಜಿಸಿರುವುದು ಶ್ಲಾಘನೀಯ
ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ವಿವಿಯ ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ ಡೀನ್ ಪ್ರೊ. ಟಿ.ಪಿ. ಎಂ. ಪಕ್ಕಳ ಅವರು ವಹಿಸಿದ್ದರು..
ವಿಭಾಗಅದ್ಯಕ್ಷರಾಗಿರುವ ಪ್ರೊ. ಚಂದ್ರಕಲಾ ಶೆಣೈ ಕೆ ಸ್ವಾಗತಿಸಿದರು. ಡಾಫ್ನೆನಾರ್ಮಕ್ರಾಸ್ಟ ವಿದ್ಯಾರ್ಥಿ ಸಂಯೋಜಕಿ ಪ್ರಾಸ್ತವಿಕವಾಗಿ ಮಾತಾನಾಡಿದರು. ಅಭಿಶೇಕ್ ಶೆಟ್ಟಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಡಾ. ಚಂದ್ರ .ಎಮ್ ವಂದಿಸಿದರು.





