ಬಿಹಾರ: ಬಿಜೆಪಿ ಉಪಾಧ್ಯಕ್ಷ ಗುಂಡಿಗೆ ಬಲಿ

ಪಾಟ್ನಾ , ಫೆ. 12 : ಬಿಹಾರ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ವಿಶ್ವೇಶ್ವರ್ ಒಜ್ಹಾ ಅವರನ್ನು ಇಲ್ಲಿನ ಅರ್ರಾ ಎಂಬಲ್ಲಿ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ. 2015 ರಲ್ಲಿ ಬಿಹಾರ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದ ಒಜ್ಹಾ ವಿರುದ್ಧ ಕೊಲೆ ಸಹಿತ ಹಲವು ಪೊಲೀಸ್ ಪ್ರಕರಣಗಳಿವೆ. ಇನ್ನೊಬ್ಬ ಬಿಜೆಪಿ ನಾಯಕ ಕೇದಾರ್ ಸಿಂಗ್ ಕೂಡ ಚಾಪ್ರಾ ಜಿಲ್ಲೆಯಲ್ಲಿ ಗುರುವಾರ ರಾತ್ರಿ ಅಪರಿಚಿತರ ಗುಂಡಿನ ದಾಳಿಯಲ್ಲಿ ಹತರಾಗಿದ್ದರು.
Next Story





