ದ್ವಿತೀಯ ಟ್ವೆಂಟಿ-20:ಭಾರತಕ್ಕೆ ಭರ್ಜರಿ ಜಯ - ಧವನ್ ಅರ್ಧಶತಕ, ಪೆರೇರಾ ಹ್ಯಾಟ್ರಿಕ್ ವ್ಯರ್ಥ

ರಾಂಚಿ, ಫೆ.12: ಆಲ್‌ರೌಂಡ್ ಪ್ರದರ್ಶನ ನೀಡಿದ ಭಾರತ ತಂಡ ಶ್ರೀಲಂಕಾ ವಿರುದ್ಧದ ಎರಡನೆ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯವನ್ನು 69 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ. ಈ ಗೆಲುವಿನ ಮೂಲಕ ಧೋನಿ ಪಡೆ ಮೂರು ಪಂದ್ಯಗಳ ಸರಣಿಯಲ್ಲಿ 1-1 ರಿಂದ ಸಮಬಲ ಸಾಧಿಸಿದೆ.
ಉಭಯ ತಂಡಗಳು ರವಿವಾರ ನಡೆಯಲಿರುವ ಮೂರನೆ ಹಾಗೂ ಕೊನೆಯ ಪಂದ್ಯದಲ್ಲಿ ಸರಣಿಗಾಗಿ ಹೋರಾಟ ನಡೆಸಲಿವೆ.
ಶುಕ್ರವಾರ ಇಲ್ಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 197 ರನ್ ಗುರಿ ಪಡೆದ ಶ್ರೀಲಂಕಾ ತಂಡ ಭಾರತದ ಸ್ಪಿನ್ನರ್‌ಗಳಾದ ಆರ್.ಅಶ್ವಿನ್(3-14), ಆರ್, ಜಡೇಜ(2-24), ವೇಗಿ ಆಶೀಷ್ ನೆಹ್ರಾ(2-26) ಹಾಗೂ ಜಸ್ಪ್ರೀತ್ ಬುಮ್ರಾ(2-17) ದಾಳಿಗೆ ತತ್ತರಿಸಿ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 127 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಭಾರತ ಟ್ವೆಂಟಿ-20 ಪಂದ್ಯದಲ್ಲಿ ಭಾರೀ ಅಂತರದ ರನ್‌ಗಳಿಂದ ಗೆಲುವು ಸಾಧಿಸಿತು. ಲಂಕೆಯ ಪರ ಕಪುಗಡೆರಾ(32 ರನ್) ಅಗ್ರ ಸ್ಕೋರರ್ ಎನಿಸಿಕೊಂಡರು. ಕಪುಗಡೆರಾ ಹಾಗೂ ದಿನೇಶ್ ಚಾಂಡಿಮಾಲ್ 4ನೆ ವಿಕೆಟ್‌ಗೆ 52 ರನ್ ಸೇರಿಸಿದರು. ಇದು ಲಂಕಾ ಇನಿಂಗ್ಸ್‌ನ ಗರಿಷ್ಠ ಜೊತೆಯಾಟವಾಗಿತ್ತು.
ಭಾರತ 196/6: ಇದಕ್ಕೆ ಮೊದಲು ಇನಿಂಗ್ಸ್ ಅಂತ್ಯದಲ್ಲಿ ತಿಸ್ಸಾರ ಪೆರೇರಾ ಹ್ಯಾಟ್ರಿಕ್ ವಿಕೆಟ್ ಪಡೆದ ಹೊರತಾಗಿಯೂ ಭಾರತ ತಂಡ 2ನೆ ಟ್ವೆಂಟಿ-20 ಪಂದ್ಯದಲ್ಲಿ ಶ್ರೀಲಂಕಾದ ಗೆಲುವಿಗೆ 197 ರನ್ ಗುರಿ ನೀಡಿತು.
ಆರಂಭಿಕ ದಾಂಡಿಗರಾದ ಶಿಖರ್ ಧವನ್(51) ಹಾಗೂ ರೋಹಿತ್ ಶರ್ಮ(43) ಅವರ ಅತ್ಯುತ್ತಮ ಆರಂಭದ ನೆರವಿನಂದ ಭಾರತ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 196 ರನ್ ಕಲೆ ಹಾಕಿತು.
ಟಾಸ್ ಜಯಿಸಿದ ಶ್ರೀಲಂಕಾ ತಂಡ ಭಾರತವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು.
ಮೊದಲ ವಿಕೆಟ್‌ಗೆ 7 ಓವರ್‌ಗಳಲ್ಲಿ 75 ರನ್ ಸೇರಿಸಿದ ಧವನ್(51 ರನ್, 25 ಎಸೆತ, 7 ಬೌಂಡರಿ, 2 ಸಿಕ್ಸರ್) ಹಾಗೂ ರೋಹಿತ್(43 ರನ್, 36 ಎಸೆತ, 2 ಬೌಂಡರಿ, 1 ಸಿಕ್ಸರ್) ಭಾರತಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. 3ನೆ ಕ್ರಮಾಂಕದಲ್ಲಿ ಆಡಿದ ಅಜಿಂಕ್ಯ ರಹಾನೆ 25 ರನ್ ಗಳಿಸಿ ಔಟಾದರು. ಟ್ವೆಂಟಿ-20 ಸ್ಪೆಷಲಿಸ್ಟ್ ಸುರೇಶ್ ರೈನಾ(30) ಹಾಗೂ ಹಾರ್ದಿಕ್ ಪಾಂಡ್ಯ(27) 4ನೆ ವಿಕೆಟ್‌ಗೆ 59 ರನ್ ಸೇರಿಸಿದರು. ಆದರೆ, 19ನೆ ಓವರ್‌ನಲ್ಲಿ ಸತತ ಮೂರು ಎಸೆತಗಳಲ್ಲಿ ಹಾರ್ದಿಕ್ ಪಾಂಡ್ಯ(27), ಸುರೇಶ್ ರೈನಾ(30) ಹಾಗೂ ಯುವರಾಜ್ ಸಿಂಗ್(0) ವಿಕೆಟ್‌ಗಳನ್ನು ಕಬಳಿಸಿದ ಶ್ರೀಲಂಕದ ಆಲ್‌ರೌಂಡರ್ ಪೆರೇರಾ ಭಾರತಕ್ಕೆ ಆಘಾತ ನೀಡಿದ್ದಲ್ಲದೆ, ಹ್ಯಾಟ್ರಿಕ್ ಸಾಧಿಸಿದರು.
ಪೆರೇರಾ ಟ್ವೆಂಟಿ-20 ಕ್ರಿಕೆಟ್ ಚರಿತ್ರೆಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಾಲ್ಕನೆ ಬೌಲರ್ ಎನಿಸಿಕೊಂಡರು. ಆಸ್ಟ್ರೇಲಿಯದ ಬ್ರೆಟ್‌ಲೀ, ನ್ಯೂಝಿಲೆಂಡ್‌ನ ಜಾಕಬ್ ಓರಮ್ ಹಾಗೂ ಟಿಮ್ ಸೌಥಿ ಈ ಸಾಧನೆ ಮಾಡಿದ್ದಾರೆ.
ಲಂಕೆಯ ಪರ ಪೆರೇರಾ ಹಾಗೂ ಚಾಮೀರಾ(2-38) ಯಶಸ್ವಿ ಬೌಲರ್ ಎನಿಸಿಕೊಂಡರು.
ಸ್ಕೋರ್ ವಿವರ
ಭಾರತ: 20 ಓವರ್‌ಗಳಲ್ಲಿ 196/6
ರೋಹಿತ್ ಶರ್ಮ ಸಿ ಮತ್ತು ಬಿ ಚಾಮೀರಾ 43
ಶಿಖರ್ ಧವನ್ ಸಿ ಚಾಂಡಿಮಾಲ್ ಬಿ ಚಾಮೀರಾ 51
ಅಜಿಂಕ್ಯ ರಹಾನೆ ಸಿ ದಿಲ್ಶನ್ ಬಿ ಸೇನಾನಾಯಕೆ 25
ಸುರೇಶ್ ರೈನಾ ಸಿ ಚಾಮೀರಾ ಬಿ ಪೆರೇರಾ 30
ಹಾರ್ದಿಕ್ ಪಾಂಡ್ಯ ಸಿ ಗುಣತಿಲಕ ಬಿ ಪೆರೇರಾ 27
ಎಂಎಸ್ ಧೋನಿ ಔಟಾಗದೆ 9
ಯುವರಾಜ್ ಸಿ ಸೇನಾನಾಯಕೆ ಬಿ ಪೆರೇರಾ 0
ರವೀಂದ್ರ ಜಡೇಜ ಔಟಾಗದೆ 1
ಇತರ 10
ವಿಕೆಟ್ ಪತನ: 1-75, 2-122, 3-127, 4-186, 5-186, 6-186.
ಬೌಲಿಂಗ್ ವಿವರ: ರಜಿತಾ 4-0-45-0
ಪೆರೇರಾ 3-0-33-3
ಸೇನಾನಾಯಕೆ 4-0-40-1
ಚಾಮೀರಾ 4-0-38-2
ಪ್ರಸನ್ನ 3-0-21-0
ಸಿರಿವರ್ಧನ 1-0-6-0
ಶನಕಾ 1-0-12-0.
ಶ್ರೀಲಂಕಾ: 20 ಓವರ್‌ಗಳಲ್ಲಿ 127/9
ಗುಣತಿಲಕ ಸಿ ಧೋನಿ ಬಿ ನೆಹ್ರಾ 2
ತಿಲಕರತ್ನೆ ದಿಲ್ಶನ್ ಸ್ಟಂ. ಧೋನಿ ಬಿ ಅಶ್ವಿನ್ 0
ಪ್ರಸನ್ನ ಸಿ ಯುವರಾಜ್ ಬಿ ನೆಹ್ರಾ 1
ಚಾಂಡಿಮಾಲ್ ಸ್ಟಂ.ಧೋನಿ ಬಿ ಜಡೇಜ 31
ಕಪುಗಡೆರ ಸಿ ಪಾಂಡ್ಯ ಬಿ ಜಡೇಜ 32
ಸಿರಿವರ್ಧನ ಔಟಾಗದೆ 28
ಶನಕಾ ಸಿ ರೈನಾ ಬಿ ಅಶ್ವಿನ್ 27
ಪೆರೇರಾ ಸಿ ರಹಾನೆ ಬಿ ಅಶ್ವಿನ್ 0
ಸೇನಾನಾಯಕೆ ಎಲ್‌ಬಿಡಬ್ಲು ಬುಮ್ರಾ 0
ಚಾಮೀರಾ ಬಿ ಬುಮ್ರಾ 0
ರಜಿತಾ ಔಟಾಗದೆ 3
ಇತರ 3
ವಿಕೆಟ್ ಪತನ: 1-2, 2-3, 3-16, 4-68, 5-68, 6-116, 7-117, 8-119, 9-119
ಬೌಲಿಂಗ್ ವಿವರ: ಆರ್. ಅಶ್ವಿನ್ 4-0-14-3
ಆಶೀಷ್ ನೆಹ್ರಾ 3-0-26-2
ಯುವರಾಜ್ ಸಿಂಗ್ 3-0-19-0
ಜಡೇಜ 4-0-24-2
ಸುರೇಶ್ ರೈನಾ 2-0-22-0
ಬುಮ್ರಾ 3-0-17-2
ಪಾಂಡ್ಯ 1-0-5-0.
.........







