ಸಿಯಾಚಿನ್ ಪ್ರದೇಶದಲ್ಲಿ ಮೃತಪಟ್ಟ ರಾಜ್ಯದ ಇತರ ಇಬ್ಬರು ಯೋಧರ ಪಾರ್ಥಿವ ಶರೀರ ಸ್ಥಳಾಂತರಕ್ಕೆ ಹವಾಮಾನ ವೈಪರಿತ್ಯ ಅಡ್ಡಿ
ಬೆಂಗಳೂರು.ಫೆ.12: ಈ ತಿಂಗಳ 3ರಂದು ಸಿಯಾಚಿನ್ ನೀರ್ಗಲ್ಲು ಪ್ರದೇಶದಲ್ಲಿ ಸಂಭವಿಸಿದ ಹಿಮಪಾತದಲ್ಲಿ ಮೃತಪಟ್ಟ ರಾಜ್ಯದ ಇತರ ಇಬ್ಬರು ಯೋಧರ ಪಾರ್ಥಿವ ಶರೀರ ಸ್ಥಳಾಂತರಕ್ಕೆ ಹವಾಮಾನ ವೈಪರಿತ್ಯ ಅಡ್ಡಿಯಾಗಿದೆ.
ಈ ಯೋಧರು ಮದ್ರಾಸ್ ರೆಜಿಮೆಂಟ್‌ಗೆ ಸೇರಿದವರಾಗಿದ್ದು, ಒಬ್ಬರು ಹಾಸನ ಜಿಲ್ಲೆ ತೇಜೂರು ಗ್ರಾಮದ ಸುಬೇದಾರ್ ನಾಗೇಶ್ ಹಾಗೂ ಇನ್ನೊಬ್ಬರು ಮೈಸೂರು ಜಿಲ್ಲೆ ಪಶುಪತಿ ಗ್ರಾಮದ ಮಹೇಶ್ ಎಂದು ಗುರುತಿಸಲಾಗಿದೆ. ವಿಶ್ವದ ಅತ್ಯಂತ ಎತ್ತರದ ಯುದ್ಧಭೂಮಿ ಎಂದೇ ಪರಿಗಣಿತವಾಗಿರುವ ಸಿಯಾಚಿನ್‌ನಲ್ಲಿ ಭಾರಿ ಹಿಮ ಬೀಳುತ್ತಿರುವುದು, ಮೃತ ಯೋಧರ ಪಾರ್ಥಿವ ಶರೀರ ಸ್ಥಳಾಂತರಕ್ಕೆ ಅಡಚಣೆಯಾಗಿದೆ ಎಂದು ಸೇನಾ ಮೂಲಗಳನ್ನು ಆಧರಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
Next Story





