ಬಸ್ ತಂಗುದಾಣ ಉದ್ಘಾಟನೆ

ಬಂಟ್ವಾಳ, ಫೆ.12: ಎಸ್ಕೆಎಸ್ಸೆಸ್ಸೆಫ್ ಕುಕ್ಕಾಜೆ ಶಾಖೆಯ ವತಿಯಿಂದ ಇತ್ತೀಚೆಗೆ ಕುಕ್ಕಾಜೆಯಲ್ಲಿ ನಡೆದ ಸಮಸ್ತ ಪ್ರಚಾರ ಮಹಾಸಮ್ಮೇಳನದ ಅಂಗವಾಗಿ ನೂತನವಾಗಿ ನಿರ್ಮಿಸಲಾದ ಸಾರ್ವಜನಿಕ ಬಸ್ಸು ನಿಲ್ದಾಣವನ್ನು ಸಮಸ್ತ ಮುಶಾವರ ಸದಸ್ಯ ಶೈಖುನಾ ಅಲ್ ಹಾಜ್ ಕೆ.ಪಿ.ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಉದ್ಘಾಟಿಸಿದರು.
ಸೈಯದ್ ಹುಸೈನ್ ಬಾಅಲವಿ ತಂಙಳ್ ಕುಕ್ಕಾಜೆ, ಮೊಹ್ದಿನಬ್ಬ ಹಾಜಿ, ಟಿ.ಅಬೂಬಕರ್, ಬಶೀರ್ ಟಿಂಬರ್, ಅಬೂಸಿರಾಜ್, ಅಬೂಬಕ್ಕರ್ ಮುಸ್ಲಿಯಾರ್, ಹಾರಿಸ್ ಪಿ.ಕೆ., ಲತೀಫ್ ಸಾಗರ್ ಮೋಹನದಾಸ್ ಮಂಚಿ ಉಪಸ್ಥಿತರಿದ್ದರು.
Next Story





