ಕಾರ್ಕಳ: ಚಿತ್ರ ಬಿಡಿಸುವ ಸ್ಪರ್ಧೆ

ಕಾರ್ಕಳ, ಫೆ.12: ಎಸ್‌ಕೆಪಿಎ ವಲಯದ ವತಿಯಿಂದ ಜಿಲ್ಲಾಮಟ್ಟದ ಚಿತ್ರ ಬಿಡಿಸುವ ಸ್ಪರ್ಧೆಯು ಆನೆಕೆರೆಯ ಸದ್ಯೋಜಾತ ಪಾರ್ಕ್‌ನಲ್ಲಿ ಶನಿವಾರ ನಡೆಯಿತು. ಪುರಸಭಾ ಸದಸ್ಯ ಶುಭದ ರಾವ್ ಉದ್ಘಾಟಿಸಿದರು. ವಲಯ ಅಧ್ಯಕ್ಷ ಶೇಖರ ರಾವ್ ಹಿರಿಯಂಗಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಂಘದ ಉಡುಪಿ ಅಧ್ಯಕ್ಷ ಶ್ರೀಧರ ಶೆಟ್ಟಿಗಾರ್ ಕಾಪು, ವಸಂತ ಕುಮಾರ್, ಎಸ್‌ಕೆಪಿಎ ಮಾಜಿ ಅಧ್ಯಕ್ಷ ಶರತ್ ಭಟ್ ಕಾನಂಗಿ, ಖ್ಯಾತ ಶಿಲ್ಪಿ ಮಹೇಶ್ ಎನ್.ಕಾರ್ಕಳ, ಗೌರವಾಧ್ಯಕ್ಷ ಪ್ರಸಾದ್ ಐಸಿರ, ವಿಶ್ವಾಸ್ ಮಾಳ, ಟಿ.ಸುಶೀಲ್ ಕುಮಾರ್, ಯೋಗೀಶ್ ಕೋಟ್ಯಾನ್, ಶೇಕ್ ಸಿರಾಜ್ ಮತ್ತಿತರರು ಉಪಸ್ಥಿತರಿದ್ದರು. ಪುರಸಭಾ ಸದಸ್ಯ ಶುಭದ ರಾವ್ ಅವರನ್ನು ಸನ್ಮಾನಿಸಲಾಯಿತು. ಸ್ಪರ್ಧೆಯಲ್ಲಿ ವಿಜೇತರಾದ ಜೇಸಿ ಶಾಲೆಯ ಗಿರಿಧರ ಕಾಮತ್, ವಿಶ್ವದತ್ತಾ ಆಚಾರ್ಯ ಕಾರ್ಕಳ, ಆರ್ಕಿತ್ ಜೈನ್, ಜ್ಯೋತ್ಸ್ನಾ, ಸುನಂದನ್ ನಿಟ್ಟೆ ಅವರಿಗೆ ಬಹುಮಾನ ವಿತರಿಸಲಾಯಿತು. ಹರೀಶ್ ರಾವ್, ಸುರೇಂದ್ರ ರಾವ್, ಸಂತೋಷ್ ಶೆಟ್ಟಿ, ವಿಶ್ವಾಸ್ ಮಾಳ ಕಾರ್ಯಕ್ರಮ ನಿರ್ವಹಿಸಿದರು.
Next Story





