ಮತ ಚಲಾಯಿಸಲು ಅವಕಾಶ ನೀಡಿ: ಕಾರ್ಮಿಕ ಇಲಾಖೆ ಆಯುಕ್ತರ ಸೂಚನೆ
ಮಡಿಕೇರಿ, ಫೆ. 12: ಜಿಲ್ಲೆಯಲ್ಲಿ ಫೆ. 20ರಂದು ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿರುವುದರಿಂದ ಈ ದಿನದಂದು ಎಲ್ಲಾ ವರ್ಗದ ಕಾರ್ಮಿಕರು ಮತ ಚಲಾಯಿಸಲು ಸಾಧ್ಯವಾಗುವಂತೆ ಅಂಗಡಿ, ವಾಣಿಜ್ಯ ಸಂಸ್ಥೆಗಳು, ಕಾರ್ಖಾನೆಗಳು ಮತ್ತು ಇತರ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸಂವಿಧಾನಾತ್ಮಕ ಹಕ್ಕಾದ ಮತವನ್ನು ಚಲಾಯಿಸಲು ಸಾಧ್ಯವಾಗುವಂತೆ ಮಾಲಕರು, ನಿಯೋಜಕರು ಅನುವು ಮಾಡಿಕೊಡುವಂತೆ ಕಾರ್ಮಿಕ ಇಲಾಖೆ ಆಯುಕ್ತರು ಸೂಚಿಸಿದ್ದಾರೆ.
Next Story





