ಅಂಡರ್-19 ವಿಶ್ವಕಪ್: ಪಾಕಿಸ್ತಾನಕ್ಕೆ ಐದನೆ ಸ್ಥಾನ
ಢಾಕಾ, ಫೆ.12: ಅಂಡರ್-19 ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ನ ವಿರುದ್ಧ 7 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸಿರುವ ಪಾಕಿಸ್ತಾನ ತಂಡ ಟೂರ್ನಿಯಲ್ಲಿ ಐದನೆ ಸ್ಥಾನ ಪಡೆದುಕೊಂಡಿತು.
ಶುಕ್ರವಾರ ಇಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡ ಝೀಶಾನ್ ಮಲಿಕ್ ಹಾಗೂ ಸೈಫ್ ಬಾದರ್ ಬಾರಿಸಿದ ಅರ್ಧಶತಕದ ನೆರವಿನಿಂದ 265 ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿತು.
ಮೊದಲ ವಿಕೆಟ್‌ಗೆ ಗೌಹಾರ್ ಹಫೀಝ್‌ರೊಂದಿಗೆ 25 ರನ್ ಸೇರಿಸಿದ ಮಲಿಕ್(93 ರನ್, 105 ಎಸೆತ) ಆ ನಂತರ 2ನೆ ವಿಕೆಟ್‌ಗೆ ಶಾದಾಬ್ ಖಾನ್‌ರೊಂದಿಗೆ 58 ರನ್ ಜೊತೆಯಾಟ ನಡೆಸಿದರು. ಬಾದರ್(ಔಟಾಗದೆ 75 ರನ್) ಅವರೊಂದಿಗೆ ಮೂರನೆ ವಿಕೆಟ್‌ಗೆ 115 ರನ್ ಸೇರಿಸಿದ ಮಲಿಕ್, ಹಸನ್ ಮುಹ್ಸಿನ್‌ರೊಂದಿಗೆ 4ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 67 ರನ್ ಸೇರಿಸಿ ಪಾಕ್‌ನ ಗೆಲುವಿನ ಹಾದಿ ಸುಗಮಗೊಳಿಸಿದರು.
ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡ ಸ್ಯಾಮ್ ಕರ್ರನ್(83 ರನ್, 107 ಎಸೆತ) ಅಮೋಘ ಬ್ಯಾಟಿಂಗ್ ಸಹಾಯದಿಂದ 7 ವಿಕೆಟ್ ನಷ್ಟಕ್ಕೆ 264 ರನ್ ಗಳಿಸಿತು.
Next Story





