ಮೂರು ತಿಂಗಳ ಮೊದಲೇ ಪ್ರಧಾನಿ ಮೋದಿಯಿಂದ ಹುಟ್ಟು ಹಬ್ಬದ ಶುಭಾಶಯ !
ಹೊಸದಿಲ್ಲಿ, ಫೆ. 12 : ತನ್ನ ಸೋದ್ಯೋಗಿ ಜಾಗತಿಕ ನಾಯಕರಿಗೆ ಟ್ವಿಟ್ಟರ್ ಮೂಲಕ ಶುಭಾಶಯ ಹೇಳುವ ಪ್ರಧಾನಿ ನರೇಂದ್ರ ಮೋದಿ ಅವರ ಕ್ರಮ ಶುಕ್ರವಾರ ತಿರುಗುಬಾಣವಾಗಿದೆ. ಆಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಅವರಿಗೆ ಶುಕ್ರವಾರ ಪ್ರಧಾನಿ ಮೋದಿ ಹುಟ್ಟು ಹಬ್ಬದ ಶುಭಾಶಯವನ್ನು ಟ್ವಿಟ್ಟರ್ ಮೂಲಕ ಕೋರಿದ್ದರು. ಆದರೆ ಅವರ ಹುಟ್ಟು ಹಬ್ಬದ ದಿನ ಇನ್ನೂ ಮೂರು ತಿಂಗಳು ನಂತರವಿತ್ತು ಎಂದು ಅವರೇ ಪ್ರತಿ ಟ್ವೀಟ್ ಮೂಲಕ ಬಹಿರಂಗಪಡಿಸಿದ್ದಾರೆ.
ಮ್ಯೂನಿಕ್ ನಲ್ಲಿ ರಕ್ಷಣಾ ಸಮಾವೇಶದಲ್ಲಿ ಭಾಗವಹಿಸಿರುವ ಅಶ್ರಫ್ ಘನಿ ಅವರು ಅಲ್ಲಿಂದಲೇ ಮೋದಿಗೆ ಹಾಸ್ಯ ಭರಿತ ಪ್ರತಿಕ್ರಿಯೆ ನೀಡಿದ್ದಾರೆ. " ನಿಮಗೆ ಮ್ಯೂನಿಕ್ ನಿಂದ ನನ್ನ ಶುಭಾಶಯಗಳು. ಆದರೆ ನನ್ನ ಹುಟ್ಟು ಹಬ್ಬ ಮೇ 19 ಕ್ಕೆ. ಆದರೂ ನಿಮ್ಮ ಶುಭಾಶಯಕ್ಕೆ ನನ್ನ ಕೃತಜ್ಞತೆಗಳು " ಎಂದು ಅಶ್ರಫ್ ಟ್ವೀಟ್ ಮಾಡಿದ್ದಾರೆ.
ಈ ಗೊಂದಲಕ್ಕೆ ಒಂದು ಕಾರಣವೂ ಇದೆ. ಘನಿ ಅವರ ಗೂಗಲ್ ನಲ್ಲಿರುವ ಪರಿಚಯದಲ್ಲಿ ಹುಟ್ಟು ಹಬ್ಬ ಫೆ. 12 ಕ್ಕೆ ಎಂದೇ ಇದೆ.
Happy birthday @ashrafghani. Praying for your long life & exceptional health and a joyful journey ahead.
— Narendra Modi (@narendramodi) February 12, 2016
ಅಶ್ರಫ್ ಘನಿ ಅವರ ಪ್ರತಿಕ್ರಿಯೆ
@narendramodi Greetings from Munich Mr. PM. Although, my Birthday is on 19th May, but I'd still like to thank you for your gracious words :)
— Ashraf Ghani (@ashrafghani) February 12, 2016