ಕುಪ್ಪಾರದಲ್ಲಿ ಗುಂಡಿನ ಕಾಳಗ: ಐವರು ಉಗ್ರರು-ಇಬ್ಬರು ಯೋಧರು ಬಲಿ
ಶ್ರೀನಗರ, ಫೆ.13: ಜಮ್ಮು-ಕಾಶ್ಮೀರದ ಕುಪ್ಪಾರ ಜಿಲ್ಲೆಯ ನಿಯಂತ್ರಣ ರೇಖೆಯ ಬಳಿ ಇಂದು ನಡೆದ ಗುಂಡಿನ ಕಾಳಗವೊಂದರಲ್ಲಿ ಐವರು ಭಯೋತ್ಪಾದಕರು ಹತರಾಗಿದ್ದು, ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ.
12 ತಾಸುಗಳ ಕಾಲ ನಡೆದ ಗುಂಡಿನ ಕಾಳಗದಲ್ಲಿ ಓರ್ವ ಸೇನಾ ಮೇಜರ್ ಸಹಿತ ಮೂವರು ಸೈನಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಪರಿಸ್ಥಿತಿ ಸ್ಥಿರವಾಗಿದೆಯೆನ್ನಲಾಗಿದೆ.
ಚೌಕಿಬಾಲ್ ಪ್ರದೇಶದ ಮರ್ಸಾರಿ ಗ್ರಾಮದ ಮನೆಯೊಂದರಲ್ಲಿ ಭಯೋತ್ಪಾದಕರ ಗುಂಪೊಂದು ಅಡಗಿಕೊಂಡಿದೆಯೆಂಬ ಮಾಹಿತಿಯ ಮೇರೆಗೆ ಸೇನೆ ಹಾಗೂ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ಸಮಯದಲ್ಲಿ ಗುಂಡಿನ ಚಕಮಕಿ ಆರಂಭವಾಯಿತು.
ಭದ್ರತಾ ಪಡೆಗಳು ಮನೆಯನ್ನು ಸಮೀಪಿಸದಂತೆಯೇ ಭಯೋತ್ಪಾದಕರು ಗುಂಡು ಹಾರಿಸತೊಡಗಿದರು. ಯೋಧರು ಪ್ರತಿ ದಾಳಿ ನಡೆಸಿದರು. ಈ ಕಾದಾಟದ ವೇಳೆ ಇಬ್ಬರು ಯೋಧರು ಹುತಾತ್ಮರಾದರೆಂದು ಪೊಲೀಸರು ವಿವರಿಸಿದ್ದಾರೆ.
ಶೋಧ ಕಾರ್ಯಾಚರಣೆ ಮುಂದುವರಿದಿದೆಯೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Next Story





