ನಾಪತ್ತೆಯಾದ ಸೇನಾಧಿಕಾರಿ ಪೊಲೀಸ್ ಠಾಣೆಗೆ ಹಾಜರ್!
ಪಾಟ್ನಾ,ಫೆ.13: ದಿಲ್ಲಿಗೆ ಪ್ರಯಾಣಿಸುತ್ತಿದ್ದ ರೈಲೊಂದರಲ್ಲಿದ್ದ ಸೇನಾ ಕ್ಯಾಪ್ಟನ್ ಶಿಖರ್‌ದ್ವೀಪ್, ಬಿಹಾರದ ಪಟ್ನಾ ಹಾಗೂ ಬಕ್ಸಾರ್ ನಡುವೆ ನಿಗೂಢವಾಗಿ ನಾಪತ್ತೆಯಾದ ಏಳು ದಿನಗಳ ಬಳಿಕ ಪತ್ತೆಯಾಗಿದ್ದಾರೆ. ಶನಿವಾರ ಮುಂಜಾನೆಅವರು ಉತ್ತರಪ್ರದೇಶದ ಫೈಝಾಬಾದ್ ಜಿಲ್ಲೆಯ ಪೊಲೀಸ್ ಠಾಣೆಗೆ ಆಗಮಿಸಿದ್ದರು. ಅವರನ್ನು ಫೈಜಾಬಾದ್ ಸಮೀಪದ ಡೋಗ್ರಾ ರೆಜಿಮೆಂಟ್‌ಗೆ ಹಸ್ತಾಂತರಿಸಲಾಗಿದೆ ಎಂದು ರೈಲ್ವೆ ಪೊಲೀಸ್ ಅಧೀಕ್ಷಕ ಜಿತೇಂದ್ರ ಕುಮಾರ್ ತಿಳಿಸಿದ್ದಾರೆ.
ತಾನು ಮಹಾನಂದ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪಟ್ನಾ ಜಂಕ್ಷನ್‌ಗೆ ಬಂದಾಗ ನೀರು ಕುಡಿಯಲೆಂದು ರೈಲಿನಿಂದ ಇಳಿದಿದ್ದು, ನೀರು ಕುಡಿದ ಬಳಿಕ ಸ್ಥಳದಲ್ಲೇ ಪ್ರಜ್ಞೆ ತಪ್ಪಿದ್ದುದಾಗಿ ಶಿಖರ್‌ದ್ವೀಪ್ ತನಗೆ ತಿಳಿಸಿದ್ದಾರೆಂದು, ಜಿತೇಂದ್ರ ಕುಮಾರ್ ಹೇಳಿದ್ದಾರೆ.
ಜಮ್ಮುಕಾಶ್ಮೀರದಲ್ಲಿ ನಿಯೋಜಿತರಾಗಿದ್ದ ಶಿಖರ್‌ದ್ವೀಪ್ ಒಂದು ತಿಂಗಳ ರಜೆಗಾಗಿ ಫೆಬ್ರವರಿ 6ರಂದು ಹೊಸದಿಲ್ಲಿಗೆ ತೆರಳುವುದಕ್ಕಾಗಿ, ಕತಿಹಾರ್ ನಿಲ್ದಾಣದಿಂದ ಮಹಾನಂದ ಎಕ್ಸ್‌ಪ್ರೆಸ್ ಹತ್ತಿದ್ದರು.
Next Story





