ಜೆಎನ್‌ಯು ವಿವಾದಕ್ಕೆ ದುಮುಕಿದ ಕಾಂಗ್ರೆಸ್:ವಿದ್ಯಾರ್ಥಿ ಧ್ವನಿಯನ್ನು ದಮನಿಸುವವರೇ ದೇಶದ್ರೋಹಿಗಳೆಂದು ಗುಡುಗಿದ ರಾಹುಲ್

ಹೊಸದಿಲ್ಲಿ;ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ ವಿವಾದೊಳಕ್ಕೆ ಇಂದು ಹಾರಿದ್ದಾರೆ. ವಿದ್ಯಾರ್ಥಿಗಳ ಧ್ವನಿಯನ್ನು ದಮನಿಸುವವರು ಎಲ್ಲರಿಗಿಂತ ದೊಡ್ಡ ದೇಶದ್ರೋಹಿಗಳೆಂದು ಗುಡುಗಿದ್ದಾರೆ. ಜೆಎನ್‌ಯು ನಲ್ಲಿ ವಿದ್ಯಾರ್ಥಿಗಳ ವಿರುದ್ಧ ಪೊಲೀಸ್ ಕಾರ್ಯಾಚರಣೆಯನ್ನು ವಿರೋಧಿಸುತ್ತಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಉದ್ದೇಶಿಸಿ ಮಾತಾಡಿದ ರಾಹುಲ್ ಒಂದು ವೇಳೆ ಯುವಕರು ತಮ್ಮ ಮಾತು ಹೇಳಿದರೆ ಸರಕಾರ ರಾಷ್ಟ್ರವಿರೋಧಿಗಳನ್ನಾಗಿ ಮಾಡುತ್ತಿದೆ.
ಸರಕಾರ ವಿದ್ಯಾರ್ಥಿಗಳ ಧ್ವನಿಯನ್ನು ದಮನಿಸಿ ನಮ್ಮನ್ನು ಮೂರ್ಖರನ್ನಾಗಿ ಮಾಡಬಹುದೆಂದು ಭಾವಿಸುವುದು ಬೇಡ ಎಂದು ಎಚ್ಚರಿಕೆ ನೀಡಿದ್ದಾರೆ. ಜೆಎನ್‌ಯು ಧ್ವನಿಯನ್ನು ದಮನಿಸುವವರೇ ಬಹುದೊಡ್ಡ ದೇಶದ್ರೋಹಿಗಳು. ಹೀಗೆಂದಾಗ ರಾಹುಲ್ ವಿರುದ್ಧ ಎಬಿವಿಪಿ ಕಾರ್ಯಕರ್ತರು ಕರಿಪತಾಕೆ ಪ್ರದರ್ಶಿಸಿ ಘೋಷಣೆ ಕೂಗಿದರು. ಯಾರು ಇಲ್ಲಿ ವಿರೋಧ ಪ್ರದರ್ಶನಕ್ಕಿಳಿದಿರುವರೋ ಅವರು ನಮ್ಮೊಂದಿಗೆ ಸೇರಲಿ ಎಂದು ರಾಹುಲ್ ಆಹ್ವಾನ ನೀಡಿದರು. ನನ್ನ ವಿರುದ್ಧ ಜನರಿಗೆ ಕಪ್ಪು ಪತಾಕೆ ಪ್ರದರ್ಶನ ಮಾಡುವ ಸ್ವಾತಂತ್ರ್ಯ ಇರುವ ದೇಶದಲ್ಲಿ ನಾನಿದ್ದೇನೆ ಎಂಬುದಕ್ಕಾಗಿ ನನಗೆ ಸಂತೋಷವಿದೆ ಎಂದು ವಿರೋಧಿ ಪ್ರದರ್ಶನಕಾರರನ್ನು ರಾಹುಲ್ ಕುಟುಕಿದರು. ಸ್ವಲ್ಪ ದಿನಮೊದಲು ಹೈದರಾಬಾದ್‌ನಲ್ಲಿ ಹೋಗಿದ್ದಾಗ ಅಲ್ಲಿ ರೋಹಿತ್ ವೇಮುಲಾರನ್ನು ದೇಶದ್ರೋಹಿ ಎನ್ನಲಾಯಿತು. ಇಂತಹವರಿಗೆ ಜನರು ತಮ್ಮ ಧ್ವನಿಯನ್ನು ಕಡಿಮೆಗೊಳಿಸದೆ ಹೆಚ್ಚಿಸಿರುವುದು ಗಾಬರಿ ಸೃಷ್ಟಿಸಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಜೆಎನ್‌ಯು ವಿವಾದದ ಸ್ಟೂಡೆಂಟ್ ಯೂನಿಯನ್ ಅಧ್ಯಕ್ಷ ಕನ್ಹಯ್ಯ ಕುಮಾರ್ ಬಂಧನದ ನಂತರ ತೀವ್ರಸ್ವರೂಪಕ್ಕೆ ಹೊರಳಿದೆ. ರಾಹುಲ್‌ರ ರಂಗಪ್ರವೇಶ ವಿದ್ಯಾರ್ಥಿ ಹೋರಾಟಕ್ಕೆ ಆನೆ ಬಲ ತಂದು ಕೊಟ್ಟಿದೆ ಎಂದು ರಾಜಕಿಯ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ದೇಶದ ಪ್ರಮುಖ ವಿಪಕ್ಷವಾಗಿ ಸಂಸತ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ.





