ಬೇಳ್ಪಾಡಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಐದು ಜೋಡಿ ಸಾಮೂಹಿಕ ವಿವಾಹ

ಕಡಬ, ಫೆ.14: ಕುಂತೂರು ಬೇಳ್ಪಾಡಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುಹಮ್ಮದ್ ಸಫ್ವಾನ್ ಕುಂತೂರು ಅವರ ವಿವಾಹ ಮತ್ತು ಬಡ ಕುಟುಂಬಗಳ ಐದು ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮವು ಇಂದು ಕುಂತೂರು ಮುಡಿಪಿನಡ್ಕ ಮುಹಮ್ಮದ್ ಹಾಜಿ ವೇದಿಕೆಯಲ್ಲಿ ನೆರವೇರಿತು.
ಸಫ್ವಾನ್‌ರ ತಂದೆ ಮರ್ಹೂಂ ಮುಹಮ್ಮದ್ ತನ್ನ ಮಗನ ಮದುವೆ ಸಂದರ್ಭದಲ್ಲಿ ಒಂದು ಬಡ ಜೋಡಿಯ ವಿವಾಹವಾದರೂ ನಡೆಸಬೇಕೆಂಬ ಕನಸಿನಂತೆ ಈ ಸಾಮೂಹಿಕ ವಿವಾಹವನ್ನು ನೆರವೇರಿಸಲಾಯಿತು. ಇದರಲ್ಲಿ ವಧೂವರರಿಗೆ ತಲಾ ಒಂದು ಲಕ್ಷ ರೂ. ನಗದು, ವಧುವಿಗೆ 10 ಪವನ್ ಚಿನ್ನಾಭರಣ ಹಾಗೂ ಮದುವೆಯ ಸಂಪೂರ್ಣ ವೆಚ್ಚವನ್ನು ಟ್ರಸ್ಟ್ ವತಿಯಿಂದ ಭರಿಸಲಾಗಿದೆ.
ಬೆಳ್ತಂಗಡಿ ತಾಲೂಕು ಕೆದಿಲ ಬೊಟ್ಟು ಬಾರ್ಯ ನಿವಾಸಿ ಕೆ.ಎಸ್.ಮುಹಮ್ಮದ್‌ರ ಪುತ್ರಿ ಕೆ.ಎಂ.ಹನ್ನತ್ ಬಾನು ಅವರನ್ನು ಬೆಳ್ತಂಗಡಿ ತಾಲೂಕು ಕೆಯ್ಯೂರು ನಿವಾಸಿ ಆದಂ ಅವರ ಪುತ್ರ ಬದ್ರುದ್ದೀನ್ ವರಿಸಿದರು.
ಬೆಳ್ತಂಗಡಿ ತಾಲೂಕು ಅಜಿಕುರಿ ನಿವಾಸಿ ಇಸ್ಮಾಯೀಲ್ರ ಪುತ್ರಿ ಫೌಝಿಯಾರನ್ನು ಉಪ್ಪಿನಂಗಡಿ ಕುಂಜಿಬೆಟ್ಟು ನಿವಾಸಿ ಉಮರ್ ಅವರ ಪುತ್ರ ಶರಾಫತ್ ಅಲಿ ವಿವಾಹವಾದರು.
ಮಂಗಳೂರು ಬೋಳಿಯಾರ್ ನಿವಾಸಿ ಇಸ್ಮಾಯೀಲ್ರ ಪುತ್ರಿ ನುಸೈಬಾರನ್ನು ಬೋಳಿಯಾರ್ ನಿವಾಸಿ ಹೈದರ್ ಅವರ ಪುತ್ರ ಅಬ್ದುಲ್ ನಾಸಿರ್ ವಿವಾಹವಾದರು.
ಮರ್ಧಾಳ ಪಟ್ಟೆಮನೆ ನಿವಾಸಿ ಶೇಖ್ ಇಸ್ಮಾಯೀಲ್ರ ಪುತ್ರಿ ಹಸೀನಾ ಬಾನು ಅವರನ್ನು ಕಡಬ ನಿವಾಸಿ ಮುಹಮ್ಮದ್ ಹನೀಫ್‌ರ ಪುತ್ರ ಮುಹಮ್ಮದ್ ಶಾಹಿದ್ ವರಿಸಿದರು.
ಬೆಳ್ತಂಗಡಿ ಮಾಪಲ ಮನೆ ನಿವಾಸಿ ಅಬ್ಬಾಸ್‌ರ ಪುತ್ರಿ ಸಹಿಲಾ ಬಾನು ಅವರನ್ನು ಬೆಳ್ತಂಗಡಿ ತಾಲೂಕು ಕರಾಯ ನಿವಾಸಿ ಎನ್‌ಅಬೂಬಕರ್ ಅವರ ಪುತ್ರ ಅಬ್ದುರ್ರಹ್ಮಾನ್ ವಿವಾಹವಾದರು.
ಕಡಬ ವಿಶೇಷ ತಹಶೀಲ್ದಾರ್ ಬಿ.ಲಿಂಗಯ್ಯ, ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಸೇರಿದಂತೆ ಹಲವು ಗಣ್ಯರು, ಉಲಮಾಗಉಮರಾ ನೇತಾರರು ಭಾಗವಹಿಸಿದ್ದರು.










