ಭೋಜ್‌ಶಾಲಾ: ಆರೆಸ್ಸೆಸ್ ಕಚೇರಿಗೆ ಕಲ್ಲೆಸದ ಹಿಂದುತ್ವವಾದಿಗಳು!

ಧಾರ್: ಶುಕ್ರವಾರ ಭೋಜ್‌ಶಾಲಾದಲ್ಲಿ ಶಾಂತಿಪೂರ್ಣವಾಗಿ ನಮಾರ್ ಮತ್ತು ಸರಸ್ವತಿ ಪೂಜೆ ನಡೆದಿತ್ತು.ಆದರೆ ಇಂದು ಭೋಜ್‌ಶಾಲಾ ಉದ್ವಿಘ್ನವಾಗಿದೆ. ರಾಷ್ಟ್ರೀಯ ಸ್ವಯಂಸೇವಕ್ ಸಂಘದ ಕಾರ್ಯಾಲಯಕ್ಕೆ ಕಲ್ಲೆಸಯಲಾಗಿದ್ದು ಕಿಟಕಿ ಗಾಜು ಪುಡಿಗೈಯ್ಯಲಾಗಿದೆ. ಮಾಧ್ಯಮ ವರದಿ ಪ್ರಕಾರ ಭೋಜ್‌ಶಾಲಾದಲ್ಲಿ ಸರಸ್ವತಿ ಪೂಜೆ ಮತ್ತು ಜುಮಾ ನಮಾರ್ ಎರಡೂ ಶಾಂತಿಪೂರ್ಣವಾಗಿ ನಡೆದಿತ್ತು. ಆದರೆ ಆರೆಸ್ಸೆಸ್ ಕಚೇರಿಗೆ ಕಲ್ಲೆಸೆತದ ನಂತರ ನಗರದಲ್ಲಿ ಉದ್ವಿಘ್ನ ಸ್ಥಿತಿ ನಿರ್ಮಾಣಗೊಂಡಿದೆ.
ಹಿಂದೂ ಸಂಘಟನೆಯ ಜನರೇ ಆರೆಸ್ಸೆಸ್ ಕಚೇರಿ ಮೇಲೆ ತಮ್ಮ ಕೋಪವನ್ನು ತೀರಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ?ಶುಕ್ರವಾರ ಇಡೀ ದಿನ ಪೂಜೆಗೆ ಅನುಮತಿ ಸಿಗದಿದ್ದದ್ದಕ್ಕಾಗಿ ಅವರು ಕೋಪಗೊಂಡಿದ್ದರು ಎನ್ನಲಾಗಿದೆ. ಆರೆಸ್ಸೆಸ್ ಕೂಡ ಇದಕ್ಕೆ ಹೊಣೆ ಎಂದು ಅವರು ಆರೆಸ್ಸೆಸ್ ಕಚೇರಿ ಮೇಲೆ ತಮ್ಮ ಕೋಪ ತೀರಿಸಿಕೊಂಡಿದ್ದಾರೆ. ಧಾರ್‌ನ ಮಾಜಿಶಾಸಕ ಜಸ್‌ವಂತ್ ರಾಠೋಡ್‌ರ ಮನೆಗೂ ಕಲ್ಲೆಸೆಯಲಾಗಿದೆ. ಆನಂತರ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಈಗ ಪರಿಸ್ಥಿತಿ ಶಾಂತವಾಗಿದೆ ಎಂದು ತಿಳಿಸಿದ್ದಾರೆ. ಶುಕ್ರವಾರ ನಮಾಝ್ ಮತ್ತು ಪೂಜೆಗಳೆರಡೂ ಅಬಾಧಿತವಾಗಿ ನಡೆದಿತ್ತು. ಹನ್ನೊಂದನೆ ಶತಮಾನದ ವಿವಾದಿತ ಕಟ್ಟಡ ಮುಸ್ಲಿಮರು ಕಮಾಲ್ ಮೌಲ ಮಸೀದಿ ಎನ್ನುತ್ತಿದ್ದರೆ ಸರಸ್ವತಿ ಮಂದಿರೆಂದು ಹಿಂದುಗಳು ಹೇಳುತ್ತಿದ್ದಾರೆ.





