ಹೆಲ್ಮೆಟ್ ಧರಿಸಿಲ್ಲವೆಂಬ ಕಾರಣ ಮುಂದಿಟ್ಟು ನಷ್ಟ ಪರಿಹಾರ ತಡೆಹಿಡಿಯಲಾಗದು: ಕೇರಳ ಹೈಕೋರ್ಟ್

ತಿರುವನಂತಪುರಂ: ಹೆಲ್ಮೆಟ್ ಧರಿಸದೆ ಬೈಕ್ ಅಪಘಾತಕ್ಕೊಳಗಾದ ವ್ಯಕ್ತಿಗೆ ಪರಿಹಾರ ನೀಡಲಾಗದು ಎಂಬ ವಾದವನ್ನು ಕೇರಳ ಹೈಕೋರ್ಟ್ ನಿರಾಕರಿಸಿದೆ. ಹೆಲ್ಮೆಟ್ ಧರಿಸದಿರುವುದು ಅಪಘಾತಕ್ಕೆ ಕಾರಣವೆಂದು ಹೇಳಲು ಸಾಧ್ಯವಿಲ್ಲ. ಈ ನೆಪ ಮುಂದಿಟ್ಟು ನಷ್ಟ ಪರಿಹಾರವನ್ನು ನಿರಾಕರಿಸಬೇಡಿ ಎಂದು ಕೇರಳ ಹೈಕೋರ್ಟ್ ಆದೇಶಿಸಿದೆ.
ಎದುರು ಕಡೆಯಿಂದ ಬಂದ ವಾಹನ ಢಿಕ್ಕಿಯಾದಾಗ ಹೆಲ್ಮೆಟ್ ಧರಿಸಿರಲಿಲ್ಲ ಆದ್ದರಿಂದ ಅಪಘಾತದಲ್ಲಿ ಬೈಕ್ ಸವಾರನಿಗೆ ಗಂಭೀರವಾಗಿ ಗಾಯಗಳಾಯಿತು ಎನ್ನುವುದು ಸರಿಯಲ್ಲ. ಅಫಘಾತದ ನಂತರ ಏನಾಯಿತು ಎಂಬುದನ್ನು ನೋಡಬೇಕಾಗಿದೆ. ಅಪಘಾತದಿಂದಾದ ಗಾಯವನ್ನು ಪರಿಗಣಿಸುವುದಲ್ಲ. ಹೆಲ್ಮೆಟ್ ಇಲ್ಲದ್ದು ಸಾವಿಗೆ ಕಾರಣವಾಯಿತು ಎಂಬುದು ಸರಿಯೇ. ಆದರೂ ಹೆಲ್ಮೆಟ್ ಧರಿಸದಿರುವುದು ಅಪಘಾತಕ್ಕೆ ಕಾರಣವಾಗಿಲ್ಲ ಎಂಬುದನ್ನು ಹೈಕೋರ್ಟ್ ಬೊಟ್ಟು ಮಾಡಿದೆ.
ಹೆಲ್ಮೆಟ್ ಧರಿಸದಿರುವುದು ಉದ್ದೇಶಪೂರ್ವಕ ಅವಸ್ಥೆಯೆಂದು ಹೇಳುವಂತಿಲ್ಲ. ಎದುರುಗಡೆಯಿಂದ ಬಂದ ವಾಹನ ಢಿಕ್ಕಿಯಾಗಿ ಬೈಕ್ ಸವಾರ ಸಾವೀಗೀಡಾಗಿದ್ದಾನೆ. ಇದು ಹೆಲ್ಮೆಟ್‌ಧರಿಸದ್ದರಿಂದ ಆಗಿದೆ ಎನ್ನುವಂತಿಲ್ಲ ಎಂದುಕೋರ್ಟ್ ತಿಳಿಸಿದೆ.
2007 ಮೇ 11ರಂದು ಸಂಭವಿಸಿದ ಅಘಾತವೊಂದರಲ್ಲಿ ಕ್ಲೈಂ ಟ್ರಿಬ್ಯುನಲ್ ಅರ್ಜಿ ಪರಿಗಣಿಸಿ 4.76ಲಕ್ಷ ರೂ. ಜೊತೆಗೆ ಶೇ.9ರಷ್ಟು ಬಡ್ಡಿ ದರದಲ್ಲಿ ಪರಿಹಾರ ನೀಡಲು ಆದೇಶಿಸಿತ್ತು. ಈ ಮೊತ್ತವನ್ನು ಹೆಚ್ಚಿಸಬೇಕೆಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಹೈಕೋರ್ಟ್ ಈಗ ಈ ಮೊತ್ತಕ್ಕೆ 3.86ಲಕ್ಷ ರೂ. ಸೇರಿಸಿ ಶೇ. 9 ದರದಲ್ಲಿ ಬಡ್ಡಿಯನ್ನು ಸೇರಿಸಿ ನೀಡಬೇಕೆಂದು ಆದೇಶಿಸಿದೆ.







