ತುಂಬೆ ಸಮೂಹ ಸಂಸ್ಥೆ ಕಾರ್ಯನಿರ್ವಹಣಾ ನಿರ್ದೇಶಕರಾಗಿ ಅಕ್ರಮ್ ಮೊಯ್ದಿನ್ ಅಧಿಕಾರ ಸ್ವೀಕಾರ

ದುಬೈ, ಫೆ.14: ತುಂಬೆ ಸಮೂಹ ಸಂಸ್ಥೆಗಳ ಕಾರ್ಯನಿರ್ವಹಣೆ, ನಿರ್ಮಾಣ ಹಾಗೂ ನವೀಕರಣ ನಿರ್ದೇಶಕರಾಗಿ ಅಕ್ರಮ್ ಮೊಯ್ದಿನ್ ಫೆ.10ರಂದು ಅಧಿಕಾರ ಸ್ವೀಕರಿಸಿದರು. ತುಂಬೆ ಗ್ರೂಪ್‌ನ ಸ್ಥಾಪಕಾಧ್ಯಕ್ಷ ತುಂಬೆ ಮೊಯ್ದಿನ್, ಅಕ್ರಮ್ ಮೊಯ್ದಿನ್‌ರನ್ನು ಬರಮಾಡಿಕೊಂಡರು. ಈ ಸಂದರ್ಭ ತುಂಬೆ ಸಂಸ್ಥೆಗಳ ಆರೋಗ್ಯ ಕಾಳಜಿ ವಿಭಾಗದ ಉಪಾಧ್ಯಕ್ಷ ಅಕ್ಬರ್ ಮೊಯ್ದಿನ್ ಉಪಸ್ಥಿತರಿದ್ದರು.
ನೂತನ ನಿರ್ದೇಶಕ ಅಕ್ರಮ್, ಶಾರ್ಜಾದ ಅಮೆರಿಕನ್ ವಿಶ್ವವಿದ್ಯಾನಿಲಯದಲ್ಲಿ ಮ್ಯಾನೇಜ್‌ಮೆಂಟ್ ಮತ್ತು ಫೈನಾನ್ಸ್ ವಿಷಯಗಳಲ್ಲಿ ಬಿಬಿಎ ಪದವಿ ಪಡೆದಿದ್ದಾರೆ. ಜೊತೆಗೆ ನಾರ್ತಂಪ್ಟನ್ ವಿಶ್ವವಿದ್ಯಾನಿಲಯದಿಂದ ಬಿ.ಎ (ಹಾನರ್ಸ್) ಪದವಿ ಪಡೆದಿದ್ದು, ಸರ್ರೆ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಅಕ್ರಮ್, ತುಂಬೆ ಗ್ರೂಪ್ ಬೋರ್ಡ್‌ನ ಸದಸ್ಯರೂ ಆಗಿದ್ದಾರೆ.
ತುಂಬೆ ಬಿಲ್ಡರ್ಸ್ ವಿಶ್ವದಾದ್ಯಂತ ಅನೇಕ ಗ್ರಾಹಕರನ್ನು ಹೊಂದಿದ್ದು, ಯುಎಇಯಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಸಾಗುತ್ತಿದೆ. ಅಲ್ಲದೇ ತುಂಬೆ ಬಿಲ್ಡರ್ಸ್ ಸಂಸ್ಥೆಯು ಉತ್ತರ ಯುಎಇಯಲ್ಲಿನ ಬಹುದೊಡ್ಡ ಕಂಪೆನಿಗಳಲ್ಲಿ ಒಂದಾಗಿದೆ.
ತುಂಬೆ ಸಮೂಹ ಸಂಸ್ಥೆಗಳ ಕಾರ್ಯವ್ಯಾಪ್ತಿಯಲ್ಲಿ ಗಲ್ಫ್ ಮೆಡಿಕಲ್ ಯುನಿವರ್ಸಿಟಿ, ಜಿಎಂಸಿ ಹಾಸ್ಪಿಟಲ್, ತುಂಬೆ ಫಾರ್ಮಸಿ, ಬಾಡಿ ಆ್ಯಂಡ್ ಸೋಲ್ ಹೆಲ್ತ್ ಕ್ಲಬ್, ಬ್ಲೆಂಡ್ಸ್ ಆ್ಯಂಡ್ ಬ್ರ್ವೂಸ್ ಕಾಫಿ ಶಾಪ್ ಹಾಗೂ ಟೆರೇಸ್ ರೆಸ್ಟೋರೆಂಟ್‌ಗಳು ಕಾರ್ಯಾಚರಿಸುತ್ತಿವೆ.








