ಸಮಸ್ತ 90 ಸಮಾರೋಪ ಸಮಾರಂಭ

ಆಲಪ್ಪುಝ ಫೆ.14: ದೇಶದ ಜಾತ್ಯತೀತ ಪರಂಪರೆಗೆ ಮಾರಕವೆನಿಸಿರುವ ಕೋಮುವಾದ ಮತ್ತು ಅಸಹಿಷ್ಣುತೆ ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರಕ್ಕೆ ಭಂಗವುಂಟಾಗುತ್ತಿರುವ ಪರಿಸ್ಥಿತಿಯು ಖಂಡನೀಯ ಎಂದು ಸಮಸ್ತದ ಉಪಾಧ್ಯಕ್ಷ ಪಾಣಕ್ಕಾಡ್ ಹೈದರಲಿ ಶಿಹಾಬ್ ತಂಙಳ್ ಹೇಳಿದರು. ಆಲಪ್ಪುಝ ಕಡಲ ಕಿನಾರೆಯಲ್ಲಿ ನಡೆದ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ 90ನೆ ವಾರ್ಷಿಕೋತ್ಸವದ ಸಮಾರೋಪ ಮಹಾಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಮಾತನಾಡಿ, ಜಾತ್ಯತೀತ ಪರಂಪರೆಯನ್ನು ಕಾಪಾಡಿಕೊಂಡು ಬರುವಲ್ಲಿ ಸಮಸ್ತದ ಪಾತ್ರ ಹಿರಿದಾಗಿದ್ದು, ಇಲ್ಲಿನ ಶಾಂತಿ ಸಮಾಧಾನ, ಶಿಸ್ತುಬದ್ದ ಜೀವನದ ಪಾಠವನ್ನು ಮುದ್ದುಮಕ್ಕಳ ಮನಸ್ಸಿನಲ್ಲಿ ತುಂಬಿ ಉತ್ತಮ ಸಮಾಜದ ಸೃಷ್ಟಿಗೆ ಭಾರೀ ಕೊಡುಗೆ ನೀಡಿದೆ ಎಂದು ಶ್ಲಾಘಿಸಿದರು.
ಶೈಖುನಾ ಎ.ಪಿ.ಮುಹಮ್ಮದ್ ಮುಸ್ಲಿಯಾರ್ ಕುಮರಂಪುತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ಮಹಿಸಿದ್ದರು. ಕೇರಳ ಗೃಹಸಚಿವ ರಮೇಶ್ ಚೆನ್ನಿತಲ, ವಾಣಿಜ್ಯ ಸಚಿವ ಪಿ.ಕೆ.ಕುಂಞಾಲಿಕುಟ್ಟಿ, ಸಂಸದ ಇ.ಅಹ್ಮದ್, ಶೈಖುನಾ ಎಂ.ಟಿ.ಅಬ್ದುಲ್ಲಾ ಮುಸ್ಲಿಯಾರ್, ಸೈಯದ್ ಮುಹಮ್ಮದ್ ಜಿಫ್ರಿ ಮುತ್ತುಕ್ಕೋಯ ತಂಙಳ್, ಪ್ರೊಫೆಸರ್ ಕೆ.ಅಲಿಕುಟ್ಟಿ ಮುಸ್ಲಿಯಾರ್, ಶೈಖುನಾ ಪಿ.ಕೆ.ಪಿ.ಅಬ್ದುಸ್ಸಲಾಂ ಮುಸ್ಲಿಯಾರ್, ಶೈಖುನಾ ಸಿ.ಕೆ.ಎಂ. ಸ್ವಾದಿಕ್ ಮುಸ್ಲಿಯಾರ್, ಶೈಖುನಾ ಪಿ.ಪಿ.ಉಮರ್ ಮುಸ್ಲಿಯಾರ್ ಕೊಯ್ಯೂರು, ಕಬೀರ್ ಬಾಖವಿ, ಎ.ಎಂ.ನೌಶಾದ್ ಬಾಖವಿ ಮಾತನಾಡಿದರು. ಖ್ಯಾತ ವಾಗ್ಮಿಗಳಾದ ಅಬ್ದುಸ್ಸಮದ್ ಪೂಕೊಟೂರು, ಅಬ್ದುಲ್ ಫೈಝಿ ಅಂಬಲಕ್ಕಡವ್, ಅಡ್ವೋಕೇಟ್ ಓಣಂಪಳ್ಳಿ ಮುಹಮ್ಮದ್ ಫೈಝಿ ಪ್ರಾಸ್ತಾವಿಕ ಭಾಷಣ ಮಾಡಿದರು. ವಿಶೇಷ ಅತಿಥಿಗಳಾಗಿ ಪದ್ಮಶ್ರೀ ಯೂಸುಫ್ ಅಲಿ, ಗಲ್ಫ್ ರಾಷ್ಟ್ರದ ಪ್ರತಿನಿಧಿಗಳಾದ ಶೈಖ್‌ಬೂತಿ ಬಿನ್ ಸಈದ್ ಬಿನ್ ಬೂತಿ ಅಲ್ ಮಖ್ದೂಂ ಯುಎಇ, ಮಾಜಿದ್ ಅಹ್ಮದ್ ಜುಮಾ ಅಬ್ದುಲ್ಲಾ ಅಲ್ ಮರ್ಸೂಕಿ ಯುಎಇ, ಮಾಜಿದ್ ಅಬ್ದುಲ್ಲಾ ಹಸನ್ ಮಾಜಿದ್ ಯುಎಇ, ಮುಹಮ್ಮದ್ ಅಹ್ಮದ್ ಜುಮಾ ಅಬ್ದುಲ್ಲಾ ಅಲ್ ಮರ್ಸೂಕಿ ಯುಎಇ, ಸೈಯದ್ ಶರೀಫ್ ತ್ವಾಹಾ ಅಲಿ ಅಲ್ ಹದ್ದಾದ್ ಕೀನ್ಯ, ಶೈಖ್ ಖತ್ತಾಬ್ ಖಲೀಫ ಕೀನ್ಯ ಶೈಖ್ ಅಬ್ದುನ್ನೂರ್ ಇಬ್ನು ಅಬ್ದುಲ್ಲಾ ಅಲ್ ಮಕ್ಕಿಯಿ ಕೀನ್ಯ, ಶೈಖ್ ಸೈಯದ್ ಅಬ್ದುಲ್ ಖಾದಿರ್ ಅಲ್ ಜೀಲಿ ಮದೀನ, ಶೈಖ್ ಹಂದಾನ್, ಪಾಣಕ್ಕಾಡ್ ಅಬ್ಬಾಸಲಿ ಶಿಹಾಬ್ ತಂಙಳ್, ಹಮೀದಲಿ ಶಿಹಾಬ್ ತಂಙಳ್ ಸ್ವಾದೀಕಲಿ ಶಿಹಾಬ್ ತಂಙಳ್, ಡಾ.ಬಹಾವುದ್ದೀನ್ ನದ್ವಿ ಮತ್ತಿತರರು ಉಪಸ್ಥಿತರಿದ್ದರು.
ಕರ್ನಾಟಕದ ಪ್ರತಿನಿಧಿಗಳಾಗಿ ದ.ಕ. ಜಿಲ್ಲಾ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್, ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲ್ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.ಸಮಸ್ತ ಜೊತೆ ಕಾರ್ಯದರ್ಶಿ ಶೈಖುನಾ ಟಿ.ಕೆ.ಎಂ.ಬಾಪು ಮುಸ್ಲಿಯಾರ್‌ಸ್ವಾಗತಿಸಿದರು.







