ಕುವೈತ್ ಹಾರಿಸಿದ ಅತಿಉದ್ದದ ಧ್ವಜ ಗಿನ್ನೆಸ್ ದಾಖಲೆಗೆ!

ಕುವೈತ್‌ಸಿಟಿ: ಅತಿಉದ್ದದ ಧ್ವಜವನ್ನು ಹಾರಿಸಿ ಕುವೈತ್ ವಿಶ್ವದ ಗಮನಸೆಳೆದಿದೆ. ಶುಕ್ರವಾರದಂದು ಮೀನ ಅಬ್ದುಲ್ಲಾದಿಂದ 107 ಮೀಟ್ ಉದ್ದ ಮೂರು ಮೀಟರ್ ಅಗಲದ ಜಗತ್ತಿನ ಅತಿ ದೊಡ್ಡ ಪತಾಕೆಯನ್ನು ಕುವೈತ್ ಹಾರಿಸಿದೆ. ಇಷ್ಟರವರೆಗೆ ಯಾವ ದೇಶವು ಇಂತಹದೊಂದು ಧ್ವಜವನ್ನು ನಿರ್ಮಿಸಿರಲಿಲ್ಲ. ಆದ್ದರಿಂದ ಈ ಧ್ವಜ ಗಿನ್ನೆಸ್ ದಾಖಲೆಗೆ ಸೇರಿದೆ. ಸಚಿವ ಶೇಕ್ ಮುಹಮ್ಮದ್ ಅಲ್ ಅಬ್ದುಲ್ಲಾ ಅಸ್ಸಬಾಹಿ ಮತ್ತು ಅಂತಾರಾಷ್ಟ್ರೀಯ ಗಿನ್ನೆಸ್ ಬುಕ್ ಪ್ರತಿನಿಧಿ ಮುಂದೆ ಭೂಮಿಯಿಂದ 500 ಮೀ. ಎತ್ತರದಲ್ಲಿ ಕಂಟ್ರೋಲ್ ವಿಮಾನದ ಮೂಲಕ ಧ್ವಜವನ್ನು ಹಾರಿಸಲಾಗಿದೆ. ಅಮೀರ್ ಶೇಕ್ ಸಬಾಹ್ ಅಲ್‌ಅಹ್ಮದ್ ಅಲ್ ಜಾಬೀರ್ ಅಸ್ಸಬಾಹಿ ಅಧಿಕಾರಕ್ಕೇರಿದ ಹತ್ತನೆ ವರ್ಷಾಚರಣೆ ಸ್ಮರಣಾರ್ಥ ಈ ಧ್ವಜವನ್ನುಹಾರಿಸಲಾಗಿದೆ. ಕುವೈಟ್ ಸ್ವತಂತ್ರವಾದ ದಿನಾಚರಣೆ ಹಿನ್ನೆಲೆಯಲ್ಲಿ ಅಹ್ಮದ್ ಮುಹಮ್ಮದ್ ಅಲ್ ಬಝ್ಝೆಂ ಎಂಬವರು ಈ ಉದ್ದದ ಧ್ವಜಕ್ಕೆ ರೂಪುರೇಷೆ ತಯಾರಿಸಿದ್ದರು.
Next Story





