ಬಿಜೆಪಿಯಿಂದ ಪೊಳ್ಳು ಆಶ್ವಾಸನೆ: ಸಿಪಿಎಂ
ಉಡುಪಿ, ಫೆ.14: ಪುನಃ ಮುಖ್ಯ ಮಂತ್ರಿಯಾಗುವ ಹಗಲುಗನಸು ಕಾಣುತ್ತಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ತಾಪಂಗೆ 5 ಕೋಟಿ, ಜಿಪಂಗೆ 10 ಕೋಟಿ ರೂ. ಅನುದಾನ ನೀಡುವುದಾಗಿ ಘೋಷಿಸಿರುವುದು ಚುನಾವಣೆಗೆ ಸೀಮಿತವಾಗಿರುವ ಪೊಳ್ಳು ಆಶ್ವಾಸನೆ ಎಂದು ಸಿಪಿಎಂ ಉಡುಪಿ ಜಿಲ್ಲಾ ಸಮಿತಿ ಅಭಿಪ್ರಾಯಪಟ್ಟಿದೆ. ಯಡಿಯೂರಪ್ಪಮುಖ್ಯಮಂತ್ರಿಯಾಗಿದ್ದ ಸಂದರ್ಭ ಅವರೇ ನೇಮಿಸಿದ್ದ ಎ.ಜಿ.ಕೊಡ್ಗಿ ನೇತೃತ್ವದ 3ನೆ ರಾಜ್ಯ ಹಣಕಾಸು ಆಯೋಗವು ಗ್ರಾಪಂಗಳಿಗೆ 25 ಲಕ್ಷ ರೂ. ಅನುದಾನ ನೀಡಬೇಕು ಎಂದು ಶಿಫಾ ರಸ್ಸು ಮಾಡಿದ್ದರೂ ಅದನ್ನು ಅನು ಷ್ಠಾನಕ್ಕೆ ತಂದಿರಲಿಲ್ಲ. ಅದಲ್ಲದೆ ಯಡಿಯೂರಪ್ಪಅಧಿಕಾರಕ್ಕೆ ಬರುವ ಮೊದಲು ಚುನಾವಣಾ ಪ್ರಣಾಳಿಕೆಯಲ್ಲಿ ಕೆ.ಜಿ.ಗೆ 2ರೂ.ನಂತೆ 25 ಕೆ.ಜಿ. ಅಕ್ಕಿ ಕೊಡುವುದಾಗಿ ಘೋಷಿಸಿದ್ದರೂ, 5 ವರ್ಷಗಳ ಅವಧಿಯಲ್ಲಿ ಬಂದ ಮೂವರು ಮುಖ್ಯಮಂತ್ರಿಗಳು ಚುನಾವಣಾ ಪ್ರಣಾಳಿಕೆಯ ಘೋಷಣೆಯನ್ನು ಜಾರಿ ಮಾಡಿರಲಿಲ್ಲ. ಈಗ ಪುನಃ ಚುನಾವಣೆಯ ಸಂದರ್ಭ ಪೊಳ್ಳು ಆಶ್ವಾಸನೆಯನ್ನು ನೀಡಿ ಮತದಾರರನ್ನು ದಾರಿ ತಪ್ಪಿಸುವುದು ಸಾಧ್ಯವಿಲ್ಲ ಎಂದು ಸಿಪಿಎಂ ಉಡುಪಿ ಜಿಲ್ಲಾ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.





