ಅಬ್ದುಲ್ ಹಮೀದ್ ಸಾಹೇಬರ ಅನುಸ್ಮರಣೆ ಕಾರ್ಯಕ್ರಮ

ಮಂಗಳೂರು, ಫೆ.14: ಶ್ರೀಮಂತ ಕುಟುಂಬದಲ್ಲಿ ಜನಿಸಿ, ನೇರ ನಡೆನುಡಿಯ ಮೂಲಕ ಬಡವ ರೊಂದಿಗೆ ತಮ್ಮ ಜೀವನವನ್ನು ಕಳೆದ ಅಪರೂಪದ ರಾಜಕಾರಣಿಗಳಲ್ಲಿ ಮರ್‌ಹೂಂ ಸಿ.ಅಬ್ದುಲ್ ಹಮೀದ್ ಸಾಹೇಬರ ಆದರ್ಶ ಗುಣ ಇಂದಿಗೂ ಅನುಕರಣೀಯ ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅಲ್‌ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್ ಹೇಳಿದರು.
ದ.ಕ ಜಿಲ್ಲಾ ಇಂಡಿಯನ್ ಯೂನಿ ಯನ್ ಮುಸ್ಲಿಂ ಲೀಗ್ ಆಯೋಜಿಸಿದ ಮರ್‌ಹೂಂ ಸಿ. ಅಬ್ದುಲ್ ಹಮೀದ್ ಸಾಹೇಬರ 22ನೆ ವಾರ್ಷಿಕ ಅನುಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಸಿ.ಅಹ್ಮದ್ ಜಮಾಲ್, ಹಾಜಿ ಎಂ. ಅಬ್ದುಲ್ ಅಝೀಝ್, ಎಂ.ಕೆ.ಅಶ್ರಫ್, ಎಂ.ಬಶೀರ್ ಉಳ್ಳಾಲ್, ರಿಯಾಝ್ ಹರೇಕಳ ಉಪಸ್ಥಿತರಿದ್ದರು.
Next Story





