Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ

ಓ ಮೆಣಸೇ

ವಾರ್ತಾಭಾರತಿವಾರ್ತಾಭಾರತಿ15 Feb 2016 12:04 AM IST
share

ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಅಗತ್ಯವಿದೆ.
                       -ಸಿದ್ದರಾಮಯ್ಯ, ಮುಖ್ಯಮಂತ್ರಿ
ಅಷ್ಟಕ್ಕಾಗಿ ಕಾಂಗ್ರೆಸ್‌ನ್ನು ಹತ್ತಿರ ಮಾಡಿಕೊಳ್ಳಬೇಕೆ?

 ---------------------

ಕರ್ನಾಟಕ ಭಯೋತ್ಪಾದಕರ ಸ್ವರ್ಗವಾಗುತ್ತಿದೆ.
                    ಪ್ರಹ್ಲಾದ್ ಜೋಷಿ, ಬಿಜೆಪಿ ರಾಜ್ಯಾಧ್ಯಕ್ಷ

ಅಂತೂ ನಿಮ್ಮ ಕನಸು ನನಸಾಗುತ್ತಿದೆ ಅಂತಾಯಿತು.

---------------------

  ಅವರ ಪತ್ನಿಗಿಂತ ನಾನು ಎಚ್.ಡಿ ಕುಮಾರಸ್ವಾಮಿಯವರನ್ನು ಅರ್ಥಮಾಡಿಕೊಂಡಿದ್ದೇನೆ.
                            -ಝಮೀರ್ ಅಹ್ಮದ್, ಶಾಸಕ
ಸವತಿ ಕಾಟ ತಪ್ಪಿದ್ದಲ್ಲ.
---------------------
 ಟಾಪ್‌ಗೇರ್‌ನಲ್ಲಿ ಕೇಂದ್ರ, ರಿವರ್ಸ್ ಗೇರ್‌ನಲ್ಲಿ ರಾಜ್ಯ.
                       -ಅನಂತ್‌ಕುಮಾರ್, ಕೇಂದ್ರ ಸಚಿವ


 ಬರೇ ಗೇರ್ ಇದ್ದರೆ ವಾಹನ ಓಡಲ್ಲ, ಇಂಜಿನ್ ಕೂಡ ಇರಬೇಕು.

---------------------

ಝಮೀರ್ ಅಹ್ಮದ್ ಮೀರ್ ಸಾದಿಕ್ ವರ್ಗಕ್ಕೆ ಸೇರಿದವರು.
                    -ಎಚ್.ಡಿ ದೇವೇಗೌಡ, ಮಾಜಿ ಪ್ರಧಾನಿ
ನಾನು ಜೆಡಿಎಸ್‌ನ ಆ ಕಾಲದ ಟಿಪ್ಪು ಸುಲ್ತಾನ್ ಎಂದರಂತೆ ಸಿದ್ದರಾಮಯ್ಯ.

 ---------------------

ಭಾರತ ಅಸಹಿಷ್ಣು ದೇಶವಲ್ಲ.
              -ತಸ್ಲೀಮಾ ನಸ್ರೀನ್, ವಿವಾದಿತ ಬಾಂಗ್ಲಾ ಲೇಖಕಿ
ನಿಮ್ಮನ್ನು ಈವರೆಗೆ ಸಹಿಸಿದ್ದಕ್ಕೆ ನೀಡಿರುವ ಭಕ್ಷಿಸೇ?

 ---------------------ಕಂಬಳಕ್ಕೆ ಕಾನೂನು ಅಡ್ಡಿಯಾದರೂ ರಾಜ್ಯ ಸರಕಾರ ಅದನ್ನು ಸಡಿಲಗೊಳಿಸುವಲ್ಲಿ ಯಶಸ್ವಿಯಾಗಿದೆ.
                      -ಯು.ಟಿ ಖಾದರ್, ಆರೋಗ್ಯ ಸಚಿವ
ಆರೋಗ್ಯ ಸಚಿವರಿಗೆ ಕಂಬಳದಲ್ಲೇನು ಕೆಲಸ?

 ---------------------

ಜೆಡಿಎಸ್‌ಗೆ ಮದುವೆ ಊಟಕ್ಕಿಂತ ತಿಥಿ ಊಟ ಇಷ್ಟ.
                         -ಸಿದ್ದರಾಮಯ್ಯ, ಮುಖ್ಯಮಂತ್ರಿ
ಜೆಡಿಎಸ್‌ನಲ್ಲಿದ್ದಾಗ ನೀವು ಉಂಡ ತಿಥಿ ಊಟ ಎಷ್ಟು ಎಂದು ಹೇಳಬಹುದೇ?


  ---------------------

ಅಭಿವ್ಯಕ್ತಿ ಸ್ವಾತಂತ್ರವನ್ನು ಲಘುವಾಗಿ ಪರಿಗಣಿಸಬಾರದು.
                        -ಕಮಲ ಹಾಸನ್, ಖ್ಯಾತ ನಟ


 ಬಹುಶಃ ವಿಶ್ವರೂಪಂ ಎರಡನೆ ಭಾಗ ಶೀಘ್ರ ಬಿಡುಗಡೆ ಇರಬೇಕು.

---------------------

ಇಂದು ಆಂಗ್ಲ ಭಾಷೆ ವ್ಯಾಮೋಹ ಹೆಚ್ಚಾಗಿ ಸಂಸ್ಕೃತದ ಕಡೆಗಿನ ಒಲವು ಕಡಿಮೆಯಾಗುತ್ತಿದೆ.
                   -ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ
ಸಂಸ್ಕೃತದಲ್ಲಿ ಹಾಲಿವುಡ್ ಚಿತ್ರಗಳನ್ನು ನಿರ್ಮಿಸಿದರೆ ವ್ಯಾಮೋಹ ಹುಟ್ಟುವ ಸಾಧ್ಯತೆಗಳಿವೆ.

 ---------------------

ಮಾಜಿ ಪ್ರಧಾನಿ ದೇವೇಗೌಡರು ಈ ವಯಸ್ಸಿನಲ್ಲಿ ಸುಳ್ಳು ಹೇಳುತ್ತಿರುವುದು ಸರಿಯಲ.್ಲ
                       -ಡಿ.ಕೆ ಶಿವಕುಮಾರ್, ಇಂಧನ ಸಚಿವ
ಅಂದರೆ ನಿಮ್ಮ ವಯಸ್ಸಿನವರಿಗೆ ಮಾತ್ರ ಸುಳ್ಳು ಹೇಳುವ ಹಕ್ಕಿರುವುದೇ?

 ---------------------ನನಗೆ ಕನಿಷ್ಠ 20 ಮಂದಿ ಮುಸ್ಲಿಮ್ ಗೆಳೆಯರಿದ್ದಾರೆ.
-ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ ಚುನಾವಣೆಯ ರಿಪಬ್ಲಿಕ್ ಅಭ್ಯರ್ಥಿ
ಗೆಳೆಯರ ಬೆನ್ನಿಗೇ ಚೂರಿಯೇ?

 ---------------------

ನನಗೆ ರಾಷ್ಟ್ರಪತಿಯಾಗುವ ಇಚ್ಛೆ ಇದೆ.
                        -ಕತ್ರೀನಾ ಕೈಫ್, ಬಾಲಿವುಡ್ ನಟಿ

 ಸೂಕ್ತ ನಿರ್ಮಾಪಕ, ನಿರ್ದೇಶಕರನ್ನು ಹುಡುಕಿದರಾಯಿತು ಬಿಡಿ.
              

  ---------------------

ಲಾಲೂ ಪ್ರಸಾದ್ ಯಾದವ್ ನನ್ನ ಹಳೆಯ ಗೆಳೆಯ.
                               

 -ಶತ್ರುಘ್ನ ಸಿನ್ಹಾ, ಸಂಸದಕಳೆದ ಚುನಾವಣೆಯಲ್ಲಿ ಆ ಕಾರಣಕ್ಕೇ ಅವರಿಗೆ ಸಹಕರಿಸಿದಿರಿ.ಅಲ್ಲವೇ?
              
 ---------------------

ನೀರಾವರಿ ವಿಷಯದಲ್ಲಿ ನನಗಿದ್ದ ಅನುಭವ ದೇವೇಗೌಡರಿಗಿಲ್ಲ.
                            -ಡಾ.ವೀರಪ್ಪ ಮೊಯ್ಲಿ, ಸಂಸದ

 ಇಲ್ಲದ ನದಿಯನ್ನು ತಿರುಗಿಸುವ ಅನುಭವ ಅವರಿಗಿರಲಿಕ್ಕಿಲ್ಲ.
              
 ---------------------

ಕಲಿ ಪುರುಷನ ಆಗಮನ ಸ್ಪಷ್ಟವಾಗಿ ಗೋಚರಿಸುತ್ತಿದೆ.
                -ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ

 ನಕಲಿ ಸ್ವಾಮೀಜಿಗಳು ಹೆಚ್ಚುತ್ತಿರುವಾಗ ಕಲಿ ಅವತಾರವಾಗಲೇಬೇಕು.

---------------------

ಕೇಂದ್ರದ ಹಣಕಾಸು ವ್ಯವಸ್ಥೆ ಭದ್ರಕೋಟೆ ಇದ್ದಂತೆ.ಚ್ಟ -ಜಯಂತ್ ಸಿನ್ಹಾ, ಕೇಂದ್ರ ಸಚಿವ

 ಬರೇ ಕೋಟೆ ಮಾತ್ರ ಇದೆ. ಒಳಗಿದ್ದದ್ದೆಲ್ಲ ದೋಚಿ ಆಗಿದೆ.

---------------------

ಪಕ್ಷದ ವರಿಷ್ಠರು ನನಗೆ ಯಾವ ಸ್ಥಾನ ಕೊಟ್ಟರೂ ಬೇಡ ಅನ್ನೋಲ್ಲ.
                               -ರಮ್ಯಾ, ಮಾಜಿ ಸಂಸದೆ

ಕೇಳಿದ ಸ್ಥಾನ ಸಿಗದೇ ಇದ್ದ ಮೇಲೆ ಕೊಟ್ಟದರಲ್ಲಿ ತೃಪ್ತಿ ಪಟ್ಟುಕೊಳ್ಳಬೇಕು.

---------------------

ಕೇಂದ್ರ ಸರಕಾರ ದಿಲ್ಲಿ ಪೊಲೀಸರನ್ನು ಕೇಸರೀಕರಣಗೊಳಿಸುತ್ತಿದೆ.

             -ಮನೀಶ್ ಸಿಸೋಡಿಯಾ, ದಿಲ್ಲಿ ಉಪಮುಖ್ಯಮಂತ್ರಿ

 ಪ್ಯಾಂಟ್‌ನ ಬದಲಿಗೆ ಚಡ್ಡಿ ಧರಿಸಲು ಆದೇಶಿಸುವುದೊಂದು ಬಾಕಿ ಇದೆ.

---------------------

ಕಾಂಗ್ರೆಸ್‌ನಿಂದ ಗಾಂಧಿ ಕನಸು ನನಸು.
                        -ವಿನಯಕುಮಾರ್ ಸೊರಕೆ, ಸಚಿವ

 ಸೋನಿಯಾಗಾಂಧಿ ಕನಸೇ ಅಥವಾ ರಾಹುಲ್‌ಗಾಂಧಿ ಕನಸೇ?
              
 ---------------------

ವಾಸ್ತವದಲ್ಲಿ ವೌನಿ ನಾನಲ್ಲ, ಪ್ರಧಾನಿ ಮೋದಿ.
                    -ಮನಮೋಹನ್ ಸಿಂಗ್, ಮಾಜಿ ಪ್ರಧಾನಿ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X