ಸಿರಿಯಾದಲ್ಲಿ ವ್ಯೋಮಾಕ್ರಮಣ ನಿಲ್ಲಿಸಿ: ರಷ್ಯಕ್ಕೆ ಒಬಾಮ ಆಗ್ರಹ

ವಾಷಿಂಗ್ಟನ್: ಅಮೆರಿಕಾಧ್ಯಕ್ಷ ಬರಾಕ್ ಒಬಾಮ ಸಿರಿಯದಲ್ಲಿ ವ್ಯೋಮಾಕ್ರಮಣವನ್ನು ಸ್ಥಗಿತಗೊಳಿಸಬೇಕೆಂದು ರಷ್ಯವನ್ನು ವಿನಂತಿಸಿದ್ದಾರೆ. ಸಿರಿಯಾದ ಉದಾರವಾದಿ ವಿಪಕ್ಷ ಸೇನೆಯ ವಿರುದ್ಧ ತನ್ನ ಆಕಾಶ ದಾಳಿಯನ್ನು ನಿಲ್ಲಿಸಿ ಸಿರಿಯ ಸಮಸ್ಯೆಯಲ್ಲಿ ರಚನಾತ್ಮಕ ಪಾತ್ರವನ್ನು ವಹಿಸಬೇಕಾಗಿದೆ ಎಂದು ವೈಟ್‌ಹೌಸ್‌ನಿಂದ ಹೊರಡಿಸಲಾದ ಹೇಳಿಕೆಂಲ್ಲಿ ಒಬಾಮ ರಷ್ಯವನ್ನು ಈ ರೀತಿ ವಿನಂತಿಸಿರುವ ಕುರಿತು ಬಹಿರಂಗಪಡಿಸಲಾಗಿದೆ.
ಒಬಾಮ ರಷ್ಯ ಅಧ್ಯಕ್ಷ ಪುಟಿನ್‌ರ್‌ಗೆ ಫೋನ್ ಮಾಡಿದ್ದು ಇಬ್ಬರೂ ನಾಯಕರು ಫೆಬ್ರವರಿ ಹನ್ನೊಂದರಂದು ಇಂಟರ್‌ನ್ಯಾಶನಲ್ ಸಿರಿಯಾ ಸಪೋರ್ಟ್ ಗ್ರೂಪ್ ಬೈಠಕ್‌ನಲ್ಲಿ ತಳೆಯಲಾದ ನಿರ್ಧಾರ ಹಾಗೂ ಒಪ್ಪಂದದ ಕುರಿತು ಚರ್ಚಿಸಿದ್ದಾರೆ. ಸಿರಿಯಾ ಯುದ್ಧ ಪೀಡಿತ ಕ್ಷೇತ್ರಗಳಿಗೆ ಮಾನವೀಯ ನೆರವು ತಲುಪಿಸುವುದು ಹಾಗೂ ಯುದ್ಧ ಕೊನೆಗೊಳಿಸುವ ಆವಶ್ಯಕತೆಗೆ ಇಬ್ಬರೂ ನಾಯಕರಲ್ಲಿ ಸಹಮತವಿದೆ ಎನ್ನಲಾಗಿದೆ. ಒಬಾಮ ಮತ್ತು ಪುಟಿನ್ ಸಿರಿಯಾ ಸಪೋರ್ಟ್ ಗ್ರೂಪ್‌ಗೆ ಸಂಬಂಧಿಸಿದ ಅಗತ್ಯ ಕೆಲಸಗಳ ಕುರಿತು ಪರಸ್ಪರ ಚರ್ಚೆ ಮುಂದುವರಿಸಲಿದ್ದಾರೆ. ಅಮೆರಿಕ ಮೈತ್ರಿಕೂಟ ಹಾಗೂ ರಷ್ಯ ಇವೆರಡೂ ಸಿರಿಯದಲ್ಲಿ ಸೈನಿಕ ಕಾರ್ಯಾಚರಣೆ ನಡೆಸುತ್ತಿವೆ. ಕಳೆದ ಸೆಪ್ಟಂಬರ್‌ನಿಂದ ಸಿರಿಯದಲ್ಲಿ ಐಸಿಸ್ ಸಂಘಟನೆ ವಿರುದ್ಧ ರಷ್ಯ ಕಾರ್ಯಾಚರಣೆಯನ್ನು ಆರಂಭಿಸಿದ್ದು ಅದ್ಯಕ್ಷ ಬಶಾರ್ ಅಲ್ ಅಸದ್ ಸರಕಾರಕ್ಕೆ ನೆರವು ನೀಡುತ್ತಿದೆ.





