ಕೇಂದ್ರದ ಆರೋಪದ ಹಿಂದೆ ಹಫೀಜ್ಹ್ ಸಯೀದ್ ನ ನಕಲಿ ಟ್ವೀಟ್ ?

ನವದೆಹಲಿ :ಲಷ್ಕರ್-ಇ-ತೋಯ್ಬ ಸಂಘಟನೆಯ ಮುಖ್ಯಸ್ಥ ಹಫೀಜ್ಹ್ ಸಯೀದನದ್ದೆಂದು ಹೇಳಲಾದ ಟ್ವಿಟ್ಟರ್ಖಾತೆಯಲ್ಲಿ ಕಾಣಿಸಿಕೊಂಡ ಟ್ವೀಟೊಂದು ‘‘ಪಾಕಿಸ್ತಾನದ ವಿಶ್ವವಿದ್ಯಾನಿಲಯಗಳಲ್ಲಿ ಕಾಶ್ಮೀರ ಪರ ಹಾಗೂ ಭಾರತ ವಿರೋಧಿ ಅಭಿಯಾನವನ್ನು ಕೈಗೊಳ್ಳಲು ಭಾರತದ ಜೆಎನ್‌ಯು ವಿದ್ಯಾರ್ಥಿಗಳಿಗೆ ಆಹ್ವಾನ’’ ಹೇಳಿರುವಂತೆಯೇ ಇದು ವಿದ್ಯಾರ್ಥಿಗಳ ಮುಷ್ಕರಕ್ಕೆ ಸಯೀದನ ಬೆಂಬಲವಿದೆಯೆಂಬ ‘ವಾಸ್ತವವನ್ನು ಅರಿಯುವಂತೆ’ ಕೇಂದ್ರ ಗೃಹ ಸಚಿವ ಹೇಳಿದ ಬೆನ್ನಿಗೇ ಇದುನಕಲಿ ಟ್ವಿಟ್ಟರ್ ಖಾತೆಯೆಂದು ತಿಳಿದು ಬಂದಿದೆಯೆಂದು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಪ್ರವೀಣ್ ಸ್ವಾಮಿಯವರ ವರದಿ ತಿಳಿಸಿದೆ.
ಇದು ಎಲ್-ಇ-ಟಿ ಮುಖ್ಯಸ್ಥ ಅಥವಾ ಆತನಿಗೆ ಸಂಬಂಧ ಪಟ್ಟ ವ್ಯಕ್ತಿಯ ಟ್ವಿಟ್ಟರ್ ಖಾತೆ ಎಂಬುದಕ್ಕೆ ಯಾವುದೇ ಪುರಾವೆಯಿಲ್ಲವೆಂದು ಗುಪ್ತಚರ ಹಾಗೂ ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆಯೆಂದು ವರದಿ ಹೇಳಿದೆ.
ಆದರೂ ಅಷ್ಟೊತ್ತಿಗಾಗಲೇ ಈ ಟ್ವೀಟ್ ಅಂತರ್ಜಾಲದಾದ್ಯಂತ ಹರಿದಾಡಿದ್ದು ಮುಖ್ಯವಾಗಿ ಹಿಂದೂ ಪರ ಸಂಘಟನೆಗಳು ಇದು ಜೆಎನ್‌ಯು ವಿದ್ಯಾರ್ಥಿಗಳ ’ದೇಶದ್ರೋಹ’ ಕೃತ್ಯಕ್ಕೆ ಸಾಕ್ಷಿಯೆಂದು ಹೇಳಿವೆ.
ಆದರೆ ಭಾನುವಾರ ಸಯೀದ್ ತಾನು ಈ ಹಿಂದೆಯೂ ಉಪಯೋಗಿಸುತ್ತಿದ್ದಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿ ‘‘ಈ ನಕಲಿ ಟ್ವಿಟ್ಟರ್ ಖಾತೆ ಹಗರಣದಿಂದ 26/11 ಸೇರಿದಂತೆ ಭಾರತದ ಎಲ್ಲಾ ಆರೋಪಗಳ ವಾಸ್ತವತೆಯನ್ನು ಸೂಚಿಸುತ್ತದೆ. ಇದು ಭಾರತ ಸರಕಾರಕ್ಕೆ ನಾಚಿಕೆಗೇಡು," ಎಂಬರ್ಥದಲ್ಲಿ ಬರೆದಿದ್ದಾನೆ.
ಆದರೆ ಶನಿವಾರ ವಿವಾದಿತ ಟ್ವೀಟ್ ಪೋಸ್ಟ್ ಮಾಡಲ್ಪಟ್ಟ ನಕಲಿ ಟ್ವಿಟ್ಟರ್ ಖಾತೆಯನ್ನು ಇದೀಗ ಅಧಿಕಾರಿಗಳು ಮುಚ್ಚಿದ್ದು ಈ ಖಾತೆಗೂ ಇತರ ಜಮಾತ್ ಟ್ವಿಟ್ಟರ್ ಖಾತೆಗಳಿಗೆ ಯಾ ಇಸ್ಲಾಮಿಕ್ ಟ್ವಿಟ್ಟರ್ ಖಾತೆಗಳಿಗೆ ಯಾವುದೇ ಸಂಬಂಧವಿಲ್ಲವೆಂದು ಹೇಳಿದ್ದಾರೆ. ಮೇಲಾಗಿ ಈಟ್ವಿಟ್ಟರ್ ಹ್ಯಾಂಡಲ್ಲಿನಲ್ಲಿ ಹಫೀಜ್‌ನ ಹೆಸರನ್ನು ಆಂಗ್ಲ ಭಾಷೆಯಲ್ಲಿ ತಪ್ಪಾಗಿ ಉಚ್ಛರಿಸಲಾಗಿದೆಯೆಂದೂ ಕಂಡು ಬಂದಿದೆ.
ಕುತೂಹಲಕಾರಿಯೆಂದರೆ ಲಷ್ಕರ್ ಸಂಬಂಧಿತ ಕೆಲವೇ ಕೆಲವು ಟ್ವಿಟ್ಟರ್ ಖಾತೆಗಳನ್ನು ಹೊರತುಪಡಿಸಿ ಹೆಚ್ಚಿನವುಗಳನ್ನು ಇತ್ತೀಚಿನ ಕೆಲವು ವಾರಗಳಲ್ಲಿ ಮುಚ್ಚಲಾಗಿದೆ
ಜಮಾತ್‌ಗಳ ಸೈಬರ್ ಘಟಕದ ಮುಖ್ಯಸ್ಥನಾಗಿರುವ ತಾಹಾ ಮುನೀಬ್ ಶನಿವಾರ ಟ್ವೀಟ್ ಮಾಡಿ ನಾನೀಗ ‘ಸೈಬರ್ ರಜೆಯಲ್ಲಿದ್ದೇನೆ. ಆರಾಮವಾಗಿದ್ದೇನೆ ಹಾಗೂ ಒತ್ತಡರಹಿತನಾಗಿದ್ದೇನೆ,’’ಎಂದು ಟ್ವೀಟ್ ಮಾಡಿದ್ದ.
ಜಮಾತ್‌ನ ಹಲವಾರು ಯೂಟ್ಯೂಬ್ ಹಾಗೂ ಫೇಸ್ಬುಕ್ ಖಾತೆಗಳು ಈಗಲೂ ಚಾಲ್ತಿಯಲ್ಲಿದ್ದರೂ ಅವುಗಳ್ಯಾವುವೂ ಜೆಎನ್‌ಯು ಪ್ರತಿಭಟನೆಗಳ ಬಗ್ಗೆಭಾನುವಾರ ಸಂಜೆವರೆಗೆ ಪ್ರತಿಕ್ರಿಯಿಸಿರಲಿಲ್ಲ.
ಸಯೀದ್ ಕಳೆದ ಕೆಲವು ವರ್ಷಗಳಿಂದ ಹಲವು ಟ್ವಿಟ್ಟರ್ ಖಾತೆಗಳನ್ನು ಹೊಂದಿದ್ದಾನೆ.ಅವುಗಳಲ್ಲಿ ಕೆಲವು ಇನ್ನೂ ಊರ್ಜಿತದಲ್ಲಿದ್ದರೂ ಸಕ್ರಿಯವಾಗಿಲ್ಲ.







