ಮುಲ್ಕಿ ಜೇಸಿಐ : ನೂತನ ಪದಾಧಿಕಾರಿಗಳ ಪದಗ್ರಹಣ

ಮುಲ್ಕಿ, ಫೆ.15: ಯುವ ಸಮಾಜ ಇಂದಿನ ದಿನಗಳಲ್ಲಿ ಮಾದಕ ವ್ಯಸನಕ್ಕೆ ಬಲಿಯಾಗುತ್ತಿದ್ದು ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಯುವ ಸಮುದಾಯಕ್ಕೆ ಜೇಸಿಐ ಸಂಸ್ಥೆ ಮೂಲಕ ಮಾರ್ಗದರ್ಶನ ನೀಡಿ ಅವರ ಭವಿಷ್ಯವನ್ನು ರೂಪಿಸುವ ಕಾರ್ಯ ಪ್ರತಿ ಘಟಕ ಮಟ್ಟದಲ್ಲಿ ಆಗಬೇಕೆಂದು ಜೇಸಿಐನ ವಲಯ ಉಪಾಧ್ಯಕ್ಷ ರಕ್ಷಿತ್ ಕೆ ಹೇಳಿದರು.
ಮುಲ್ಕಿಯ ಹೋಟೇಲ್ ಆಧಿಧನ್ ಸಭಾಂಗಣದಲ್ಲಿ ಜರುಗಿದ ಮುಲ್ಕಿ ಶಾಂಭವಿ ಜೇಸಿಐ ನ 2016 ರ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಲ್ಕಿ ಶಾಂಭವಿ ಜೇಸಿಐನ 2016 ರ ಸಾಲಿನ ಅಧ್ಯಕ್ಷ ಮಲ್ಲಿಕಾರ್ಜುನ್ ಆರ್ ಕೆ ಮಟ್ಟವರ ತಂಡದ ಪದಗ್ರಹಣ ನೆರವೇರಿಸಿ ಅವರು ಮಾತನಾಡಿದರು.
ಅಧ್ಯಕ್ಷತೆಯನ್ನು ಮುಲ್ಕಿ ಶಾಂಭವಿ ಜೇಸಿಐನ ನಿಕಟಪೂರ್ವಾಧ್ಯಕ್ಷ ಚಂದ್ರಶೇಖರ್ ಶೆಟ್ಟಿ ವಹಿಸಿದ್ದು ಕಾರ್ಯಕ್ರಮದಲ್ಲಿ ಮುಲ್ಕಿ ಪೋಲಿಸ್ ಠಾಣೆಯ ಸಹಾಯಕ ಉಪ ನಿರೀಕ್ಷಕ ವಾಮನ್ ಸಾಲ್ಯಾನ್ ರನ್ನು ಸನ್ಮಾನಿಸಲಾಯಿತು. ಜೇಸಿಐನ ವಲಯಾಧ್ಯಕ್ಷ ಸಂದೀಪ್ ಕುಮಾರ್,ಮುಲ್ಕಿ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಶಶಿಕಾಂತ್ ಶೆಟ್ಟಿ,ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ರಂಗನಾಥ ಶೆಟ್ಟಿ ುುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮುಲ್ಕಿ ಶಾಂಭವಿ ಜೇಸಿಐನ ಅಧ್ಯಕ್ಷ ಮಲ್ಲಿಕಾರ್ಜುನ್ ಆರ್ ಕೆ, ನೂತನ ಕಾರ್ಯದರ್ಶಿ ಗೀತಾ ಆರ್ ಕೆ ಮತ್ತಿತರರು ಉಪಸ್ತಿತರಿದ್ದರು.







