ಮಂಗಳೂರು : ಜೆ.ಎನ್.ಯು ವಿದ್ಯಾರ್ಥಿ ಮುಖಂಡರ ಬಂಧನಕ್ಕೆ ಎಸ್.ಎಫ್.ಐ ಖಂಡನೆ
ಮಂಗಳೂರು,ಫೆ.15:ಕಳೆದ ದಿನಗಳಿಂದ ಜೆ.ಎನ್.ಯುನಲ್ಲಿ ನಡೆಯುತ್ತಿರುವ ಘಟನೆಗಳು ದೇಶಾದ್ಯಾಂತ ತೀವ್ರ ಚರ್ಚೆಗೆ ಗ್ರಾಸವಾಗಿವೆ. ಅಫ್ಜಲ್‌ಗುರು ಪರ ಮತ್ತು ದೇಶರೋಧಿ ಘೋಷಣೆಗಳನ್ನು ಕೂಗಿದ ಕೆಲ ವಿದ್ಯಾರ್ಥಿ ಗುಂಪಿನ ಕೃತ್ಯವನ್ನು ಎಸ್.ಎಫ್.ಐ ತೀವ್ರವಾಗಿ ಖಂಡಿಸಿದೆ.
ಈ ರೀತಿಯ ದೇಶ ವಿಭಜಿಸುವ ಪ್ರತ್ಯೆಕವಾದಿ ಚಟುವಟಿಕೆಗಳಿಗೆ ಎಸ್.ಎಫ್.ಐ ತೀವ್ರ ವಿರೋಧ ವ್ಯಕ್ತಪಡಿಸುತ್ತದೆ. ಆದರೆ ಆ ಘಟನೆಯನ್ನು ಸರಿಯಾಗಿ ಪರೀಶೀಲಿಸದೆ ಕೇಂದ್ರ ಸರಕಾರ ಏಕಾಏಕಿ ಜೆ.ಎನ್.ಯು ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿರುವುದು ಖಂಡನೀಯ. ಕೆಲವರು ಮಾಡಿದ ತಪ್ಪಿಗೆ ಇಡೀ ವಿಶ್ವ ವಿದ್ಯಾಲಯವನ್ನು ಭಯೋತ್ಪಾದಕ ಎಂದು ಬಿಂಬಿಸಿರುವುದು ಆತಂಕಕ್ಕೀಡು ಮಾಡಿದೆ. ಇದೇ ರೀತಿ ಎಬಿವಿಪಿ ಎಲ್ಲಾ ವಿವಿಗಳಲ್ಲಿ ಮತೀಯ ದಾಳಿಗಳನ್ನು ನಡೆಸುತ್ತಿದೆ. ದೇಶದ ವಿರುದ್ಧ ಘೋಷಣೆ ಕೂಗಿದವರ ಮೇಲೆ ಸೂಕ್ತ ಕ್ರಮ ಜರುಗಿಸಲಿ, ಆದರೆ ನಿರಪರಾಧಿಗಳನ್ನು ಈ ಹೆಸರಿನಲ್ಲಿ ಶಿಕ್ಷಿಸುತ್ತಿರುವುದು ಸರಿಯಾದ ಕ್ರಮವಲ್ಲ.
ಇಡಿ ದೇಶದಲ್ಲಿ ಹಲವಾರು ದಶಕಗಳಿಂದ ದೇಶ ತಂಡು ಮಾಡಲು ಹೊರಟ ಪ್ರತ್ಯೇಕವಾದಿ ಉಗ್ರರ ವಿರುದ್ಧ ಐತಿಹಾಸಿಕ ಹೋರಾಟಗಳನ್ನು ನಡೆಸಿದ ಅಗ್ರಗಣ್ಯ ವಿದ್ಯಾರ್ಥಿ ಸಂಘಟನೆ ಎಂಬ ಹಿರಿಮೆ ಎಸ್.ಎಫ್.ಐಗೆ ಇದೆ. 80ರ ದಶಕದಲ್ಲಿ ಪಂಜಾಬ್ ಮತ್ತು ಅಸ್ಸಾಮ್ ನಲ್ಲಿ ಪತ್ಯೇಕವಾದಿ ಉಗ್ರರ ವಿರುದ್ಧ ಹೋರಾಟದಲ್ಲಿ ನೂರಾರು ಜನ ಎಸ್.ಎಫ್.ಐ ಕಾರ್ಯಕರ್ತರು ಹುತಾತ್ಮರಾದರು. ಈ ರೀತಿಯ ತ್ಯಾಗ, ಬಲಿದಾನದ ಹೋರಾಟ ಇತಿಹಾಸವನ್ನ ಹೊಂದಿದ ಎಸ್.ಎಫ್.ಐ ಇದೇ ರೀತಿಯ ಹೋರಾಟದ ಪರಂಪರೆಯನ್ನು ಮುಂದೆ ಕೊಂಡೊಯ್ಯತ್ತಿದೆ.
ಆದರೆ ಜೆ.ಎನ್.ಯು ಘಟನೆಗೆ ಸಂಬಂದಿಸಿದಂತೆ ಎಬಿವಿಪಿ ಮತ್ತು ಆರ್.ಎಸ್.ಎಸ್ ಸಂಘಟನೆಗಳು ಎಡಪಂಥೀಯ ಸಂಘಟನೆಗಳ ಮೇಲೆ ಆಧಾರ ರಹಿತ ಆರೋಪಗಳನ್ನು ಮಾಡಿವೆ, ಇದಕ್ಕೆ ಪೂರಕವೆಂಬಂತೆ ಅಮಾಯಕರಾದ ಜೆ.ಎನ್.ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ ಕುಮಾರ್ ಅವರನ್ನು ಪೋಲಿಸರು ವಿಶ್ವದ್ಯಾಲಯ ಅತಿಕ್ರಮಣ ಮಾಡಿ ಬಂಧಿಸಿದ್ದಾರೆ. ಆದರೆ ಉಗ್ರ ಅಫ್ಜಲ್ ಪರ ಘೋಷಣೆ ಕೂಗಿದ ಯಾವುದೇ ನೈಜ ತಪ್ಪಿತಸ್ಥರನ್ನು ಇದುವರೆಗು ಪೋಲಿಸರು ಬಂಧಿಸಿಲ್ಲ. ಇದನ್ನು ಎಸ್.ಎಫ್.ಐ ತೀವ್ರವಾಗಿ ಖಂಡಿಸುತ್ತದೆ, ಕನ್ಹಯಕುಮಾರ ಬಿಡುಗಡೆಗಾಗಿ ಒತ್ತಾಸುತ್ತದೆ ಮತ್ತು ಈ ಹಿಂದೆ ಕೋಮುವಾದಿ ಶಕ್ತಿಗಳು ಸಿಂಧಗಿಯಲ್ಲಿ ಪಾಕ್ ಧ್ವಜವನ್ನು ಹಾರಿಸಿ ಗಲಭೆ ಸೃಷ್ಟಿಸಲು ಯತ್ನಿಸಿದಂತೆ ಈ ಕೃತ್ಯದಲ್ಲೂ ಮತೀಯ ಶಕ್ತಿಗಳ ಕೈವಾಡವಿದೆಯೆಂಬ ಶಂಕೆ ಇದ್ದು ಸಮಗ್ರ ತನಿಖೆಗೆ ಎಸ್.ಎಫ್.ಐ ಒತಾಯಿಸುತ್ತದೆ.ಗಾಂಧೀಜಿಯವರನ್ನು ಗುಂಡಿಕ್ಕಿ ಕೊಂದ ನಾಥುರಾಮ್ ಗೋಡ್ಸೆಯನ್ನು ವೈಭೀಕರಿಸುವ ಸಂಘ ಪರಿವಾರದಿಂದ ದೇಶ ಪ್ರೇಮದ ಪಾಠ ಕಲಿಯಬೇಕಾದ ದುಸ್ಥಿತಿ ಬಂದೊದಗಿಲ್ಲ.
ಈ ಘಟನೆಗೆ ಸಂಭಂದಿಸಿದಂತೆ ಉತ್ತರಖಂಡ, ಡೆಹರಾಡೂನ್ ಮತ್ತು ಲಕ್ನೋದಲ್ಲಿ ಎಸ್.ಎಫ್.ಐ ಕಾರ್ಯಕರ್ತರು ಮತ್ತು ಕಛೇರಿಯ ಮೇಲೆ ದಾಳಿ ಮಾಡಿದ ಎಬಿವಿಪಿ ಕಾರ್ಯಕರ್ತರ ಬಂಧನಕ್ಕೆ ಎಸ್.ಎಫ್.ಐ ಒತ್ತಾಯಿಸಿದೆ.







