ಕಾಸರಗೋಡು : ಮಂಜೇಶ್ವರ ಗೋವಿಂದ ಪೈ ಯವರ ಸ್ಮರಣಾರ್ಥ ನಿರ್ಮಿಸಲಾಗುತ್ತಿರುವ ಗಿಳಿವಿಂಡು ಮಾರ್ಚ್ 5ರಂದು ಉದ್ಘಾಟನೆ
 copy.jpg)
ಕಾಸರಗೋಡು : ಮಂಜೇಶ್ವರ ಗೋವಿಂದ ಪೈ ಯವರ ಸ್ಮರಣಾರ್ಥ ನಿರ್ಮಿಸಲಾಗುತ್ತಿರುವ ಗಿಳಿವಿಂಡು ಮಾರ್ಚ್ ಐದರಂದು ಉದ್ಘಾಟನೆಗೊಳ್ಳಲಿದೆ.
ಮಾರ್ಚ್ ಐದು ಮತ್ತು ಆರರಂದು ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.
ಈ ಕುರಿತು ಕೇಂದ್ರ ಮಾಜಿ ಸಚಿವ ಎಂ. ವೀರಪ್ಪ ಮೊಯ್ಲಿ ಯವರ ಅಧ್ಯಕ್ಷತೆಯಲ್ಲಿ ಕವಿ ಭವನದಲ್ಲಿ ನಡೆದ ನಡೆದ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಉದ್ಘಾಟನಾ ಸಮಾರಂಭದಲ್ಲಿ ಕೇರಳ - ಕರ್ನಾಟಕ ದ ಮುಖ್ಯಮಂತ್ರಿಗಳು , ಸಾಂಸ್ಕೃತಿಕ ಸಚಿವರು , ಜಿಲ್ಲಾಧಿಕಾರಿ ಹಾಗೂ ಇನ್ನಿತರ ಜನಪ್ರತಿನಿಧಿಗಳು ಉಪಸ್ಥಿತರಿರುವರು.
ಗೋವಿಂದ ಪೈ ಯವರ ವಸತಿ ಸಮೀಪ ಗಿಳಿವಿಂಡು ಸಾಂಸ್ಕೃತಿಕ ಕೇಂದ್ರ ಮತ್ತು ಭವನಿಕಾ ಸಭಾಂಗಣ ನಿರ್ಮಿಸಲಾಗುತ್ತಿದೆ. ಕವಿಯವರ ವಸತಿಯನ್ನು ನವೀಕರಿಸಿ ಕವಿ ಸ್ಮಾರಕವಾಗಿ ಉಳಿಸಲಾಗುವುದು. ಗೋವಿಂದ ಪೈ ಯವರ ಪುಸ್ತಕಗಳನ್ನು ಎನ್ ಐ ಸಿ ಯ ಸಹಯೋಗದೊಂದಿಗೆ ಡಿಜಿಲೈಸ್ ಗೊಳಿಸಿ ಮಾಡಿ ಕವಿಭವನದಲ್ಲಿ ಇಡಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಹೆಚ್ಚುವರಿ ಎಚ್ . ದಿನೇಶನ್, ಮೇನಜಿಂಗ್ ಟ್ರಸ್ಟಿ ಡಿ. ಕೆ ಚೌಟ, ಜಿಲ್ಲಾ ವಾರ್ತಾಧಿಕಾರಿ ಕೆ. ಟಿ ಶೇಖರ್ , ಎಂ , ಜೆ ಕಿಣಿ , ತೇಜೋಮಯ, ಜಯಲಕ್ಷ್ಮಿ, ಬಿ . ವಿ ಕಕ್ಕಿಲ್ಲಾಯ , ಕೆ . ಆರ್ ಜಯಾನಂದ , ಡಾ. ರಮಾನಂದ ಬನಾರಿ, ಶಶಿಧರ್ ಶೆಟ್ಟಿ , ಪಿ. ಆರ್ ಸುಭಾಶ್ ಶ್ಚ೦ದ್ರ, ಸುದರ್ಶನ , ಪಿ. ಜಿ ಥಾಮಸ್, ಸುಬ್ಬಣ್ಣ ರೈ, ಆರ್ . ಭರತ್ ತಂತ್ರಿ , ಸತ್ಯನಾರಾಯಣ ತಂತ್ರಿ ಉಪಸ್ಥಿತರಿದ್ದರು.





