ಮುಲ್ಕಿ : ಜನಾರ್ಧನ ಪೂಜಾರಿ-ರೋಡ್ ಶೋ ನಡೆಸಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಅಭ್ಯರ್ಥಿಗಳ ಪರ ಮತಯಾಚನೆ
 copy.jpg)
ಮುಲ್ಕಿ, ಫೆ.15: ಕೇಂದ್ರದ ಮಾಜೀ ಹಣಕಾಸು ಸಚಿವ ಜನಾರ್ಧನ ಪೂಜಾರಿ ಹಳೆಯಂಗಡಿ, ಪಕ್ಷಿಕೆರೆ, ಕಿನ್ನಿಗೋಳಿ, ಕಟೀಲು ಪ್ರದೇಶಗಳಲ್ಲಿ ರೋಡ್ ಶೋ ನಡೆಸಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಅಭ್ಯರ್ಥಿಗಳ ಪರ ಮತಯಾಚನೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಲ್ಕಿ ಮೂಡಬಿದ್ರೆಯ ಶಾಸಕ ಅಭಯ ಚಂದ್ರ ಜೈನ್ ಭೃಷ್ಠಾಚಾರ ರಹಿತ ಉತ್ತಮ ಕೆಲಸಗಳನ್ನು ಮಾಢಿದ್ದಾರೆ ಎಂಬುವುದಕ್ಕೆರ ಗ್ರಾಮೀಣ ಪ್ರದೇಶದ ಎಲ್ಲಾ ರಸ್ತೆಗಳು ಕಾಂಕ್ರಿಟ್, ಡಾಂಬರು ಕಂಡಿರುವುದೇ ಸಾಕ್ಷಿ ಎಂದರು.
ಅಂತೆಯೇ ಸಿದ್ದರಮಯ್ಯನೆತೃತ್ವದ ರಾಜ್ಯ ಕಾಂಗ್ರೆಸ್ ಸರಕಾರ ಬಡವರ ಹಸಿದ ಹೊಟ್ಟೆಗಳಿಗೆ ಅನ್ನ ಭಾಗ್ಯ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಜೊತೆಜೊತೆಗೆ ಬಿಸಿಯೂಟ, ಕ್ಷೀರ ಭಾಗ್ಯ ದಂತಹ ಉತ್ತಮ ಜನಸ್ನೇಹಿ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿದೆ. ಇವುಗಳೇ ಕಾಂಗ್ರೆಸ್ ಪಕ್ಷಕ್ಕೆ ಶ್ರೀ ರಕ್ಷೆ ಎಂದರು. ಈ ಬಾರಿ ತಾಲೂಕು ಹಾಗೂ ಜಿಲ್ಲಾ ಪಂಚಾತ್ ಸೀಟುಗಳನ್ನು ಸಚಿವರ ಆಗ್ರಹದಂತೆ ಪರಿಶ್ರಮಿಗಳಿಗೆ ಹಂಚಲಾಗಿದೆ. ಇವರೂ ಸಚಿವ ಅಭಯ ಚಂದ್ರರಂತೆ ಭೃಷ್ಠಾಚಾರ ರಹಿತ ಉತ್ತಮ ಆಡಳಿತ ನೀಡುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿ ಪೂಜಾರಿ ಭೃಷ್ಟಾಚಾರ ರಹಿತರಿಗೆ ಅಭ್ಯರ್ಥಿಗಳಿಗೆ ಜನತ್ಯೆಮೂಲ್ಯ ಮತ ಚಲಾಯಿಸಬೇಕು ಎಮದು ವಿನಂತಿಸಿದರು.
ಈ ಸಮದರ್ಭ ಮುಲ್ಕಿ ಮೂಡಬಿದ್ರೆ ಶಾಸಕ, ರಾಜ್ಯ ಯುವಜನ ಸೇವೆ, ಕ್ರೀಡೆ ಹಾಗೂ ಮೂನುಗಾರಿಕಾ ಸಚಿವ ಅಭಯಚಂದ್ರ ಜೈನ್, ಹಿರಿಯ ಮುಖಂಡ ಗುಣಪಾಲ ಶೆಟ್ಟಿ,
ಜಿಲ್ಲಾ ಪಂಚಾಯತ್ ಅಭ್ಯರ್ಥಿಗಳಾದ ಪ್ರಮೋದ್ ಕುಮಾರ್, ಶೈಲಾ ಸಿಕ್ವೇರಾ, ತಾಲೂಕು ಪಂಚಾಯತ್ ಅಭ್ಯರ್ಥಿಗಳಾದ ಕಿಶೋರ್ ಶೆಟ್ಟಿ, ಸುಜಾತಾ ಮೂಲ್ಯ, ಜೊಸ್ಸಿ ಪಿಂಟೋ, ಧನಂಜಯ ಕೋಟ್ಯಾನ್, ಮೊಣಪ್ಪ ಶೆಟ್ಟಿ ಎಕ್ಕಾರು, ಬಾಳಾದಿತ್ಯ ಆಳ್ವ, ಸುಕುಮಾರ್, ಮಾಲತಿ ಶೆಟ್ಟಿ, ಮಯ್ಯದಿ ಗುತ್ತಕಾಡು, ತಿಮ್ಮಪ್ಪ ಕೊಟ್ಯಾನ್, ಸುನಿಲ್ ಸಿಕ್ವೇರಾ, ಬಿ.ಎಂ.ಆಸೀಫ್, ವಸಂತ್ ಬೆರ್ನಾರ್ಡ್, ಹಸನ್ ಬಶೀರ್, ಸಾಹುಲ್ ಹಮೀದ್ ಕದಿಕೆ, ಚಂದ್ರ ಶೇಖರ್ ನಾನಿಲ್, ಹಳೆಯಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಲಜಾ, ಮನ್ಸೂರ್ ಸಾಗ್ ಮತ್ತಿತರ ಕಾಂಗ್ರೆಸ್ ಮುಖಂಡರು, ನೂರಾರು ಮಂದಿ ಕಾರ್ಯಕರ್ತರು ಭಾಗಿಯಾಗಿದ್ದರು.
 copy.jpg)





