ಪಾಕ್‌ನಲ್ಲಿ 11 ಲಕ್ಷ ವರ್ಷ ಹಳೆಯ ಆನೆ ದಂತ ಪತ್ತೆ

ಇಸ್ಲಾಮಾಬಾದ್, ಫೆ. 15: ಹನ್ನೊಂದು ಲಕ್ಷ ವರ್ಷಗಳಷ್ಟು ಹಳೆಯ ಆನೆಯ ದಂತವೊಂದನ್ನು ಪಾಕಿಸ್ತಾನದ ಪಂಜಾಬ್‌ನಲ್ಲಿ ಪತ್ತೆಹಚ್ಚಿರುವುದಾಗಿ ಪಾಕಿಸ್ತಾನದ ಪ್ರಾಣಿಶಾಸ್ತ್ರಜ್ಞರ ತಂಡವೊಂದು ಹೇಳಿದೆ. ದಂತವು ಸುಮಾರು 8 ಅಡಿ ಉದ್ದವಿದೆ.
ಆನೆಯ ಈಗ ನಾಶವಾಗಿರುವ ಪ್ರಭೇದ ‘ಸ್ಟೆಗೊಡಾನ್’ಗೆ ಸೇರಿದ ಆನೆಗೆ ಸೇರಿದ ದಂತ ಇದಾಗಿದೆ ಎಂದು ಅವರು ಹೇಳಿದ್ದಾರೆ.
ಪಂಜಾಬ್ ವಿಶ್ವವಿದ್ಯಾನಿಲಯದ ಪ್ರಾಣಿಶಾಸ್ತ್ರ ವಿಭಾಗದ ತಂಡವೊಂದು ಗುಜರಾತ್-ಖಾರಿಯನ್ ಪ್ರದೇಶದಲ್ಲಿ ಸಂಶೋಧನೆ ಮತ್ತು ಉತ್ಖನನದಲ್ಲಿ ತೊಡಗಿಕೊಂಡಿತ್ತು ಎಂದು ‘ಡಾನ್’ ವರದಿ ಮಾಡಿದೆ.
‘‘ರಜೊ, ಖಾರಿಯನ್ ಮತ್ತು ಸಹಾವಗಳಲ್ಲಿ ಪ್ರಾಣಿಶಾಸ್ತ್ರ ವಿಭಾಗದ ಸಂಶೋಧಕರು ತುಂಬಾ ಸಮಯದಿಂದ ಕೆಲಸ ಮಾಡುತ್ತಿದ್ದಾರೆ ಹಾಗೂ ಹಲವಾರು ಪ್ರಾಚೀನ ಪಳೆಯುಳಿಕೆಗಳನ್ನು ಪತ್ತೆಹಚ್ಚಿದ್ದಾರೆ’’ ಎಂದು ಪ್ರೊಫೆಸರ್ ಮುಹಮ್ಮದ್ ಅಖ್ತರ್ ಹೇಳಿದರು.
‘‘ದಂತವು ಸುಮಾರು 8 ಅಡಿ ಉದ್ದವಿದ್ದು, 8 ಇಂಚು ವ್ಯಾಸವಿದೆ. ಇದು ಪಾಕಿಸ್ತಾನದಲ್ಲಿ ಕಂಡುಬಂದಿರುವ ಈ ಆನೆ ಪ್ರಭೇದದ ಅತ್ಯಂತ ದೊಡ್ಡ ದಂತವಾಗಿದೆ’’ ಎಂದರು.
Next Story





