ಉಳ್ಳಾಲ : ಬಡ ಕುಟುಂಬದ ಕ್ಯಾನ್ಸರ್ ಮತ್ತು ಕಿಡ್ನಿ ರೋಗಿಗಳಿಗೆ ಸಹಾಯಧನ ವಿತರಣೆ

ಉಳ್ಳಾಲ: ರೋಗಗಳಿಗೆ ಮಹಳಷ್ಟು ಸಮಸ್ಯೆಯಾಗಿರುವ ರೋಗ ಕಿಡ್ನಿ ಮತ್ತು ಕ್ಯಾನ್ಸರ್. ಇಂತಹ ರೋಗಗಳು ಜನರನ್ನು ಬಡತನಕ್ಕೆ ದೂಡುತ್ತದೆ. ಇಂತಹ ರೋಗಗಳಿಂದ ಬಳಲುವರಿಗೆ ನೆರವು ನೀಡುವ ಕಾರ್ಯಕ್ರಮವನ್ನು ನಾವು ಮಾಡಬೇಕಾಗಿದೆ ಎಂದು ಸಚಿವ ಯು.ಟಿ ಖಾದರ್ ಹೇಳಿದರು.
ಅವರು ಕಲ್ಲಾಪು ಅಝಾದ್ ಮೈದಾನದಲ್ಲಿ ಭಾನುವಾರ ನಡೆದ ಕಲ್ಲಾಪು ಸೇವಾ ಸಮಿತಿ ಪೆರ್ಮನ್ನೂರು ಇದರ ಆಶ್ರಯದಲ್ಲಿ ಕ್ಯಾನ್ಸರ್ ಮತ್ತು ಕಿಡ್ನಿ ರೋಗಗಳಿಗೆ ತುತ್ತಾದ ಬಡ ರೋಗಿಗಳಿಗೆ ಸಹಾಯಧನ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಬಿಪಿಎಲ್ ಕಾರ್ಡ್‌ಗಳಿಗೆ ಉಚಿತ ಚಿಕಿತ್ಸೆ ಮತ್ತು ಔಷಧಿ ವಿತರಣೆ ಮಾಡುವ ಯೋಜನೆಯನ್ನು ಸರಕಾರ ಹಮ್ಮಿಕೊಂಡಿದೆ. ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ವ್ಯವಸ್ಥೀಕರಣ ಕೂಡಾ ಮಾಡಲಾಗಿದೆ. ಆದರೆ ಮಾಹಿತಿ ಕೊರತೆಯಿಂದ ಬಡ ರೋಗಿಗಳು ಸರಕಾದ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳದೇ ಸಿಕ್ಕಿದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಇದರಿಂದ ಬಹಳಷ್ಟು ಜನರು ಸಂಕಷ್ಟಕೀಡಾಗುತಾರೆ ಎಂದರು. ಜೀವನ ಶೈಲಿ ಮತ್ತು ಆಹಾರ ಪದ್ಧತಿಯನ್ನು ನಿಯಂತ್ರಿಸಿಕೊಂಡಲ್ಲಿ ಆರೋಗ್ಯ ಹದಗೆಡುವುದು ಕಡಿಮೆ. ನಾವು ಮೊದಲು ಆರೋಗ್ಯ ಕಾಪಾಡುವ ಕೆಲಸ ಮಾಡಬೇಕು ಎಂದರು.
ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಹಮ್ಮದ್ ಮುಕಚೇರಿ ಮಾತನಾಡಿ,ರೋಗಿಗಳಿಗೆ ಧನ ಸಹಾಯ ಮಾಡುವಂತಹ ಕಾರ್ಯಕ್ರಮ ಒಂದು ಉತ್ತಮ ಕಾರ್ಯಕ್ರಮವಾಗಿದೆ. ಸರಕಾರ ಮಾಡುವಂತಹ ಕಾರ್ಯಕ್ರಮವನ್ನು ಕಲ್ಲಾಪು ಸೇವಾ ಸಮಿತಿ ಹಮ್ಮಿಕೊಂಡಿರುವುದು ಸ್ವಾಗತಾರ್ಹ ಇದರಿಂದ ಬಹಳಷ್ಟು ಬಡ ರೋಗಿಗಳ ಸಮಸ್ಯೆಗೆ ಪರಿಹಾರ ಸಿಗಲು ಸಾಧ್ಯ ಆಗುತ್ತದೆ. ಇಸ್ಲಾಂ ಕಲ್ಪಿಸಿದ ಕಾರ್ಯದಲ್ಲಿ ಧನ ಸಹಾಯ ಕೂಡಾ ಒಂದು. ಇದಕ್ಕೆ ಎಲ್ಲರೂ ನೆರವಾಗಬೇಕು ಎಂದು ಕರೆ ನೀಡಿದರು.
ನಗರಸಭಾ ಸದಸ್ಯ ದಿನೇಶ್ ರೈ ಮಾತನಾಡಿ, ಜಮಸಾಮಾನ್ಯರಿಗೆ ಅಗತ್ಯವಾಗಿ ಬೇಕಾಗಿರುವ ಯೋಜನೆಯನ್ನು ಕಲ್ಲಾಪು ಸೇವಾ ಸಮಿತಿ ಮಾಡಿದೆ. ಸಂಘಟನೆಯ ಈ ಒಂದು ಯೋಜನೆನಿರ್ಗತಿಕ ಕುಟುಂಬಗಳಿಗೆ ಅನುಕೂಲವಾಗಲಿದೆ. ಅಶಕ್ತರ ಕಣ್ಣೀರೊರೆಸುವ ಉದ್ದೇಶದಿಂದ ಹಮ್ಮಿಕೊಳ್ಳುವ ಇಂತಹ ಕಾರ್ಯಕ್ರಮಗಳಿಗೆ ಎಲ್ಲರು ಸಹಕಾರಿಯಾಗಬೇಕೆಂದು ಹೇಳಿದರು.
ವೇದಿಕೆಯಲ್ಲಿ ವಕ್ಫ್ ಬೋರ್ಡ್ ಜಿಲ್ಲಾ ಸಲಹ ಸಮಿತಿ ಉಪಾಧ್ಯಕ್ಷ ಮಹಮ್ಮದ್ ಶರೀಫ್, ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಪತ್ತಾಕ್, ಪುರಸಭೆಯ ಮಾಜಿ ಅಧ್ಯಕ್ಷ ಬಾಜಿಲ್‌ಡಿ ಸೋಜ, ಇಸ್ಮಾಯಿಲ್, ಅಖಿಲ ಭಾರತ ಬ್ಯಾರಿ ಪರಿಷತ್‌ನ ಉಪಾಧ್ಯಕ್ಷ ಅಬ್ದುಲ್ ಅಝೀರ್ ಹಕ್, ವೆಸ್ಟ್‌ಲೈನ್ ಬಿಲ್ಡರ್ಸ್ ಮಾಲಕ ನಾಸಿರ್ ಮೊಯ್ದಿನ್, ತೊಕ್ಕೊಟ್ಟು ಸಾಗರ್ ಕಲೆಕ್ಷನ್ ಮಾಲಕ ಇಸ್ಮಾಯಿಲ್, ಸೋಮೇಶ್ವರ ಪಂಚಾಯತ್ ಮಾಜಿ ಸದಸ್ಯ ಸತೀಶ್ ಉಳ್ಳಾಲ್, ಜೆ. ಮೊಹಮ್ಮದ್, ಉಳ್ಳಾಲ ದರ್ಗಾ ಸಮಿತಿ ಸದಸ್ಯ ಹಮೀದ್ ಕಲ್ಲಾಪು, ಉಳ್ಳಾಲ ಬ್ಲಾಕ್ ಅಲ್ಪಸಂಖ್ಯಾತ ಘಟಕದ ಮಾಜಿ ಅಧ್ಯಕ್ಷ ಡಾನಿಶ್ ಡಿ ಸೋಜ, ಸೇವಂತಿ ಗುಡ್ಡೆ ಮಸೀದಿ ಅಧ್ಯಕ್ಷ ಮುಹಮ್ಮದ್ ಶಮೀರ್,ಯು.ಕೆ. ಯೂನುಸ್ ಉಳ್ಳಾಲ್, ಸಮಾಜ ಸೇವಕ ರಾಝಿಕ್ ಉಳ್ಳಾಲ್, ಸಫರ್ ಸ್ಫೋರ್ಟ್ಸ್ ಕ್ಲಬ್ ಸದಸ್ಯ ಅಯ್ಯೂಬ್ ಮಂಚಿಲ, ನಗರಸಭಾ ಸದಸ್ಯರಾದ ಮೋನು ಮುಕ್ಕಚೇರಿ, ಮುಸ್ತಫಾ ಅಬ್ದುಲ್ಲಾ, ಅಶ್ರಫ್ ಬಾವಾ ದ.ಕ. ಮತ್ತು ಉಡುಪಿ ಜಿಲ್ಲಾ ಸೆಂಟ್ರಲ್ ಕಮಿಟಿ ಸದಸ್ಯ ಸಲೀಂ ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.






