ಮಂಗಳೂರು : 1.75 ಲಕ್ಷ ರೂ ವೌಲ್ಯದ ಗಾಂಜಾ ವಶ

ಮಂಗಳೂರು, ಫೆ.15: ನಗರದ ದಂಬೇಲ್‌ನ ಕಿರುಸೇತುವೆಯ ಬಳಿ ರಿಕ್ಷಾದಲ್ಲಿ ಗಾಂಜಾ ಸಾಗಾಟವನ್ನು ಪತ್ತೆ ಹಚ್ಚಿ 1.75 ಲಕ್ಷ ರೂ. ವೌಲ್ಯದ 450 ಗ್ರಾಂ ಗಾಂಜವನ್ನು ಮಂಗಳೂರು ಅಬಕಾರಿ ಇಲಾಖೆಯ ಅಧಿಕಾರಿಗಳು ಶನಿವಾರದಂದು ವಶಪಡಿಸಿಕೊಂಡಿದ್ದಾರೆ.
ಗಾಂಜವನ್ನು ರಿಕ್ಷಾದಲ್ಲಿ ಸಾಗಾಟ ಮಾಡುತ್ತಿದ್ದ ರಿಕ್ಷಾ ಚಾಲಕ ಸೂರಜ್ ಯಾನೆ ಸೂರಿ ಪರಾರಿಯಾಗಿದ್ದಾನೆ. ಮಂಗಳೂರು ದಕ್ಷಿಣ ವಲಯ 1 ರಲ್ಲಿ ಪ್ರಕರಣ ದಾಖಲಿಸಲಾಗಿದೆ.
Next Story





