ಯುವಕನನ್ನು ಅಪಹರಿಸಿ ಹಲ್ಲೆ:ಇಬ್ಬರ ಬಂಧನ
ಮಂಗಳೂರು,ಫೆ.15:ನೀರುಮಾರ್ಗ ಸಮೀಪದ ಕೆಲರಾಯ್ ಟೌನ್‌ಶಿಪ್‌ನ ಅಕ್ಷಯ ಕುಂದರ್ (30) ಅವರನ್ನು ಫೆ. 13 ರಂದು ತಂಡವೊಂದು ಕ್ಯಾಂಬ್ರಿಜ್ ಶಾಲೆ ಬಳಿಯಿಂದ ಬಲಾತ್ಕಾರವಾಗಿ ರಿಕ್ಷಾದಲ್ಲಿ ಕುಳ್ಳಿರಿಸಿ ಅಪಹರಿಸಿಕೊಂಡು ಸುಲ್ತಾನ್ ಬತ್ತೇರಿಗೆ ಕೊಂಡೊಯ್ದುಅಲ್ಲಿ ಅಕ್ರಮ ಬಂಧನದಲ್ಲಿರಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಬಂಧಿಸಲಾಗಿದೆ.
ಬಂಧಿತರನನ್ನು ಜೋಯಲ್ ಮತ್ತು ವಿಕ್ಕಿ ಬಪ್ಪಾಲ ಎಂದು ಗುರುತಿಸಲಾಗಿದೆ. ಆರೋಪಿಗಳು ಜೀವ ಬೆದರಿಕೆ ಹಾಕಿ ಮರದ ಬೆತ್ತ ಮತ್ತುಕೈಯಿಂದ ಹಲ್ಲೆ ನಡೆಸಿ ನಗದು500 ರೂ. ಮತ್ತು 8,000 ರೂ.ಬೆಲೆಯ ನೋಕಿಯಾ ಮೊಬೈಲ್ ನ್ ಸೆಟ್‌ನ್ನು ಅಪಹರಿಸಿಕೊಂಡುಹೋಗಿರುವುದಾಗಿ ಆರೋಪಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಇಂದು ಇಬ್ಬರನ್ನು ಬಂಧಿಸಿದರು.
Next Story





