ದಮ್ಮಾಮ್: ಪದಾಧಿಕಾರಿಗಳ ಆಯ್ಕೆ

ದಮ್ಮಾಮ್, ಫೆ.15: ಸುಳ್ಯ ತಾಲೂಕಿನ ಅನ್ಸಾರಿಯ ಯತೀಂಖಾನ ಹಾಗೂ ಬಡಮಕ್ಕಳ ಏಳಿಗೆಗಾಗಿ 2 ವರ್ಷಗಳ ಹಿಂದೆ ಊರಿನ ಸಮಾನ ಮನಸ್ಕ ಯುವಕರ ನೇತೃತ್ವದಲ್ಲಿ ಸೌದಿ ಅರೇಬಿಯಾದ ದಮ್ಮಾಮ್‌ನಲ್ಲಿ ಸ್ಥಾಪಿಸಲಾದ ದಾರುಲ್ ಐತೆಮ್ ವಲ್ ಮಸಾಕೀನ್ ( ಪೂರ್ವ ಪ್ರಾಂತ್ಯ, ಸೌದಿ ಅರೇಬಿಯಾ )ನ 20ನೆ ವಾರ್ಷಿಕ ಮಹಾಸಭೆಯು ಅಲ್‌ಕ್ಹೊಬರ್‌ನ ಪಾಮ್ ಗ್ರೋಮ್ ರೆಸ್ಟೋರೆಂಟ್ ಪಾರ್ಟಿ ಹಾಲ್‌ನಲ್ಲಿ ಜರಗಿತು. 2016-17ನೆ ಸಾಲಿನ ಸಮಿತಿಯ ಗೌರಾವಾಧ್ಯಕ್ಷರಾಗಿ ಇಬ್ರಾಹೀಂ ನಡುಬೈಲ್, ಅಧ್ಯಕ್ಷರಾಗಿ ಇಬ್ರಾಹೀಂ ಕಡಿಕದ್ಕ, ಉಪಾಧ್ಯಕ್ಷರಾಗಿ ರಝಾಕ್ ಸುಳ್ಯ, ಅಶ್ರಫ್ ಎನ್.ಎಂ., ಪ್ರಧಾನ ಕಾರ್ಯದರ್ಶಿಯಾಗಿ ಸಲೀಮ್ ಇಸ್ಮಾಯೀಲ್, ಜತೆ ಕಾರ್ಯದರ್ಶಿಗಳಾಗಿ ರಹೀಂ ಕಡಬ ಮತ್ತು ಶಾಫಿ ಅಡ್ಕಾರ್, ಮಾಧ್ಯಮ ಕಾರ್ಯದರ್ಶಿಯಾಗಿ ಅಶ್ರಫ್ ಮರಸಂಕ, ಕೋಶಾಧಿಕಾರಿಯಾಗಿ ರಶೀದ್ ಬೆಳ್ಳಾರೆ, ವಲಯ ಕಾರ್ಯದರ್ಶಿಗಳಾಗಿ ದಮ್ಮಾಮ್ ಅಶ್ರಫ್ ಮರಸಂಕ, ಜುಬೈಲ್ ಕಮಾಲ್ ಅರಂತೋಡು, ಶಾಹಿ ಮತ್ತು ರಾಶಿದ್ ಪಾರೆ, ಅಲ್‌ಹಸ ಮೆಹಬೂಬ್ ಸುಳ್ಯ ಹಾಗೂ ಸಲಹಾ ಸಮಿತಿ ಸದಸ್ಯರಾಗಿ ಸಿ.ಪಿ.ಶಂಸುದ್ದೀನ್, ಎಂ.ಬಿ.ಮದನಿ, ಜಾಕಿರ್‌ಬೆಳ್ಳಾರೆ, ಎಸ್.ಎ.ರಹ್ಮಾನ್, ಜಬ್ಬಾರ್, ಹಂಝ ಅಮಾನಿ ಇವರನ್ನು ಆಯ್ಕೆ ಮಾಡಲಾಯಿತು.





