ಮೊಡಂಕಾಪು: ಬಸ್ ತಂಗುದಾಣ ಉದ್ಘಾಟನೆ
ಬಂಟ್ವಾಳ, ಫೆ.15: ಮೊಡಂಕಾಪು ಗೋರೆಮಾರ್ ಬಳಿಯ ಲೋಬೊ ಕುಟುಂಬಸ್ಥರು ನಿರ್ಮಿಸಿದ ದಿ. ನೋರ್ಬರ್ಟ್ ಲೋಬೊರ ಸ್ಮರಣಾರ್ಥ ಬಸ್ ತಂಗುದಾಣವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಿದರು. ವಂ. ಸ್ಟೀವನ್ ಲೋಬೊ ಒ.ಸಿ.ಡಿ ಆಶೀರ್ವಚನವಿತ್ತರು. ಬೂಡಾ ಅಧ್ಯಕ್ಷ ಪಿಯೂಸ್ ಎಲ್ ರೊಡ್ರಿಗಸ್, ಪುರಸಭಾಧ್ಯಕ್ಷೆ ವಸಂತಿ ಚಂದಪ್ಪ, ಸದಸ್ಯರಾದ ರಾಮಕೃಷ್ಣ ಆಳ್ವ, ಸದಾಶಿವ ಬಂಗೇರಾ, ಪ್ರವೀಣ್ ಬಿ., ಪ್ರಭಾ ಸಾಲ್ಯಾನ್, ಚಂಚಲಾಕ್ಷಿ, ಜೆಸಿಂತಾ, ಪ್ರಮುಖರಾದ ಸೇಸಪ್ಪ ಕೋಟ್ಯಾನ್, ಜೋಸ್ಪಿನ್ ಡಿಸೋಜ, ಸದಾನಂದ ರಂಗೋಲಿ, ಪದ್ಮನಾಭ ರೈ, ಸದಾನಂದ ಶೆಟ್ಟಿ, ವೆಂಕಪ್ಪ ಪೂಜಾರಿ ಮತ್ತು ಲೋಬೊ ಕುಟುಂಬಸ್ಥರು ಉಪಸ್ಥಿತರಿದ್ದರು.
Next Story





