ಕೋಲ್ಕತಾ ಶಾಲೆಯ ಬಳಿ ಗುಂಡು ಹಾರಾಟ
ಕೋಲ್ಕತಾ, ಫೆ.15: ಇಲ್ಲಿನ ಪ್ರಖ್ಯಾತ ಲೊರೆಟ್ಟೊ ಎಂಟಾಲಿ ಸ್ಕೂಲ್‌ನ ಹೊರಗಡೆ ಸೋಮವಾರ ಮುಂಜಾನೆ ಗುಂಡು ಹಾರಾಟ ನಡೆದ ಪ್ರಕರಣ ವರದಿಯಾಗಿದೆ.
ಬಂದೂಕು ಧಾರಿಗಳಾದ ಇಬ್ಬರು ಯುವಕರು ಶಾಲೆಯ ಪ್ರವೇಶ ದ್ವಾರದ ಬಳಿ ತಮ್ಮ ಮೋಟರ್ ಸೈಕಲ್‌ನ್ನು ನಿಲ್ಲಿಸಿ ಗುಂಡು ಹಾರಿಸಿದರು.
ಪ್ರತ್ಯಕ್ಷದರ್ಶಿಗಳು ಹಿಡಿಯಲು ಯತ್ನಿಸಿದಾಗ ದುಷ್ಕರ್ಮಿಗಳು ಪರಾರಿಯಾದರು. ಘಟನೆಯಲ್ಲಿ ಒಬ್ಬ ಪಾದಚಾರಿ ಗಾಯಗೊಂಡಿದ್ದಾನೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುಂಡು ಹಾರಿಸಿದ ಉದ್ದೇಶ ಇನ್ನಷ್ಟೇ ಖಚಿತಗೊಳ್ಳಬೇಕಿದೆ.
Next Story





