ಜೆಎನ್‌ಯು ವಿವಿಯ ಕನ್ಹಯ್ಯ ಬಂಧನ ವಿರೋಧಿಸಿ ಬೃಹತ್ ಪ್ರತಿಭಟನೆ
‘ಅನ್ಯಾಯ ಪ್ರಶ್ನಿಸುವವರನ್ನು ಮೋದಿ ಸರಕಾರ ದಮನಗೊಳಿಸುತ್ತಿದೆ’
ಬೆಂಗಳೂರು, ಫೆ. 15: ಕೇಂದ್ರದ ಮೋದಿ ಸರಕಾರ ಅನ್ಯಾಯವನ್ನು ಪ್ರಶ್ನಿಸುವ ಯುವ ವಿದ್ಯಾರ್ಥಿಗಳನ್ನು ದಮನಗೊಳಿಸಲು ಮುಂದಾಗಿರುವ ಜೊತೆಗೆ ವಿಶ್ವವಿದ್ಯಾನಿಲಯಗಳಲ್ಲಿ ಕೇಸರಿ ವ್ಯವಸ್ಥೆ ನಿರ್ಮಾಣ ಮಾಡಲು ಸಂಚು ರೂಪಿಸುತ್ತಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ(ಸಿಪಿಐ) ರಾಷ್ಟ್ರೀಯ ಸಮಿತಿಯ ಸದಸ್ಯ ಡಾ.ಸಿದ್ದನಗೌಡ ಪಾಟೀಲ್ ಕಿಡಿಕಾರಿದ್ದಾರೆ.
ದಿಲ್ಲಿಯ ಜೆಎನ್‌ಯು ವಿವಿಯ ವಿದ್ಯಾರ್ಥಿ ಸಂಘದ ಮುಖಂಡ ಕನ್ಹಯ್ಯಾ ಕುಮಾರ್‌ರನ್ನು ‘ದೇಶದ್ರೋಹ’ದ ಸುಳ್ಳು ಆರೋಪದಲ್ಲಿ ಪೊಲೀಸರು ಬಂಧಿಸಿರುವ ಕ್ರಮವನ್ನು ಖಂಡಿಸಿ ಸೋಮವಾರ ಇಲ್ಲಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಸಿಪಿಐ, ಎಐಟಿಯುಸಿ, ಎಐಎಸ್‌ಎಫ್, ಎಐವೈಎಫ್, ಎನ್‌ಎಫ್‌ಐಡಬ್ಲೂ ಹಾಗೂ ಭಾರತೀಯ ಜನಕಲಾ ಸಮಿತಿ ಜಂಟಿಯಾಗಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.ತ್ತೀಚೆಗಷ್ಟೇ ಹೈದರಾಬಾದ್ ಕೇಂದ್ರೀಯ ವಿವಿಯಲ್ಲಿ ನಡೆದ ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣದಲ್ಲಿ ನೇರವಾಗಿ ಎಬಿವಿಪಿ ಹಾಗೂ ಕೋಮುವಾದಿ ಬಿಜೆಪಿ ಪಕ್ಷದ ಕೈವಾಡವಿದೆ ಎಂದು ಹೇಳಲಾಗುತ್ತಿದೆ. ಅಷ್ಟರಲ್ಲಿಯೇ ದಿಲ್ಲಿಯ ಜೆಎನ್‌ಯು ವಿವಿಯ ವಿದ್ಯಾರ್ಥಿಗಳ ಮೇಲೆ ಸುಳ್ಳು ಆರೋಪ ಮಾಡಿರುವುದು ಖಂಡನೀಯ ಎಂದರು.ೋಮುವಾದಿ ಶಕ್ತಿಗಳಿಗೆ ಕೇಂದ್ರದ ಮೋದಿ ಸರಕಾರ ನೇರವಾಗಿ ಸಹಾಯ ಮಾಡುತ್ತಿದೆ. ಅಲ್ಲದೆ, ಬಿಜೆಪಿ ಪಕ್ಷ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದರೆ, ದೇಶದಲ್ಲಿ ಅಸಹಿಷ್ಣುತೆ ವಾತಾವರಣ ನಿರ್ಮಾಣವಾಗುತ್ತದೆ ಎಂಬ ಕಲ್ಪನೆ ಮೊದಲೇ ಎಲ್ಲ ಎಡ ಪಕ್ಷಗಳಲ್ಲಿ ಇತ್ತು ಎಂದು ಅವರು ಅಭಿಪ್ರಾಯಪಟ್ಟರು.ರೆಸ್ಸೆಸ್ ಹಾಗೂ ಎಬಿವಿಪಿ ಸಂಘಟನೆಗಳು ದೇಶದ ಹಿತಕ್ಕಾಗಿ ಯಾವ ಚಳವಳಿಗಳನ್ನು ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ. ಅಲ್ಲದೆ, ದೇಶದ ಸ್ವಾತಂತ್ರ ಹೋರಾಟದಲ್ಲಿ ಇವರ ಮಾತ್ರ ಶೂನ್ಯ. ಈಗ ಮಾತ್ರ ಬೀದಿಗಳಲ್ಲಿ ಭಾಷಣ ಬಿಗಿಯುತ್ತಾರೆ. ಇಂತಹ ಕಳ್ಳ ಸಂಘಟನೆಯ ವಿರುದ್ಧ ಪ್ರತಿಯೊಬ್ಬ ನಾಗರಿಕ ಧ್ವನಿಗೂಡಿಸಬೇಕಾಗಿದೆ. ಇಲ್ಲದಿದ್ದಲ್ಲಿ, ಮುಂದೆ ಇನ್ನಷ್ಟು ಅಮಾಯಕ ಜೀವಗಳು ಬೀದಿ ಪಾಲಾಗಲಿವೆ ಎಂದು ಆತಂಕ ವ್ಯಕ್ತಪಡಿಸಿದರು.
ದಿಲ್ಲಿಯಲ್ಲಿ ಬಂಧಿಸಿರುವ ಎಐಎಸ್‌ಎಫ್ ನಾಯಕ ಕನ್ಹಯ್ಯ ಕುಮಾರ್ ಸೇರಿ ವಿದ್ಯಾರ್ಥಿಗಳನ್ನು ಷರತ್ತು ರಹಿತವಾಗಿ ಬಿಡುಗಡೆಗೊಳಿಸಬೇಕು. ಅದೇ ರೀತಿ, ಜೆಎನ್‌ಯು ಒಳಗೆ ಇಂತಹ ಗಲಭೆಗಳನ್ನು ಸೃಷ್ಟಿಸಿದ ಎಬಿವಿಪಿ ಕಾರ್ಯಕರ್ತರನ್ನು ಬಂಧಿಸಬೇಕೆಂದು ಒತ್ತಾಯ ಮಾಡಿದರು.
ಹಿರಿಯ ಪತ್ರಕರ್ತೆ ಗೌರಿಲಂಕೇಶ್ ಮಾತನಾಡಿ, ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರನ್ನು ಹತ್ಯೆ ಮಾಡಿದ ಗೋಡ್ಸೆಯನ್ನು ವೈಭವೀಕರಿಸುವ ವ್ಯಕ್ತಿಗಳ ವಿರುದ್ಧ ಕೇಂದ್ರ ಸರಕಾರ ಯಾವ ರೀತಿ ಕ್ರಮ ಕೈಗೊಂಡಿದೆ ಎಂದು ಅವರು ಪ್ರಶ್ನಿಸಿದರು.
ದಿಲ್ಲಿಯ ಜೆಎನ್‌ಯು ವಿಶ್ವವಿದ್ಯಾನಿಲಯವು ಜಾಗತಿಕ ಮಟ್ಟದಲ್ಲಿ ಹೆಸರು ಪಡೆದಿದೆ. ಅಂತಹ ವಿವಿಯ ಹೆಸರಿಗೆ ಕಳಂಕ ತರಲು ಕೋಮುವಾದಿಗಳು ಮುಂದಾಗಿದ್ದಾರೆ. ಜೆಎನ್‌ಯುನಲ್ಲಿರುವ ಎಡ ಪಂಥೀಯ ವಿದ್ಯಾರ್ಥಿ ಸಂಘಟನೆಗಳು ಜಾತ್ಯತೀತ ಹಾಗೂ ವೈಚಾರಿಕ ಸಿದ್ಧಾಂತಗಳನ್ನು ಹೊಂದಿರುವ ಕಾರಣ ಮೋದಿ ಸರಕಾರ ಸಂಘಟನೆಗಳ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದೆ. ಇಂತಹ ಸಮಾಜಘಾತಕ ಚಟುವಟಿಕೆಗಳ ವಿರುದ್ಧ ಎಲ್ಲ ವಿಶ್ವವಿದ್ಯಾನಿಲಯಗಳಲ್ಲಿ ಎಡ ಪಂಥೀಯ ವಿದ್ಯಾರ್ಥಿ ಸಂಘಟನೆಗಳು ಜಾಗೃತಿ ಮೂಡಿಸಲು ಮುಂದಾಗಬೇಕೆಂದು ಸಲಹೆ ನೀಡಿದರು.ಪ್ರತಿಭಟನೆಯಲ್ಲಿ ವಕೀಲ ಅನಂತ್‌ನಾಯ್ಕಾ, ಎಐಎಸ್‌ಎಫ್‌ನ ರಾಜ್ಯ ಕಾರ್ಯದರ್ಶಿ ಎಚ್.ಎಂ.ಸಂತೋಷ್, ಎಐಟಿಯುಸಿ ಮುಖಂಡ ಎಂ.ದೀಪಕ್, ಮುಖಂಡರಾದ ಎ.ಜ್ಯೋತಿ, ಮೋಹನ್‌ರಾಮ್ ಸೇರಿ ನೂರಕ್ಕೂ ಹೆಚ್ಚು ಕಾರ್ಯಕರ್ತರು ಪ್ರತಿಭಟನೆ ಯಲ್ಲಿ ಮೋದಿ ಹಾಗೂ ಆರೆಸ್ಸೆಸ್ ನಡೆ ವಿರೋಧಿಸಿ ಘೋಷಣೆ ಕೂಗಿದರು.