ನೆಲಮಂಗಲ: ಬೈಕ್‌ಗೆ ಲಾರಿ ಡಿಕ್ಕಿ; ಬೈಕ್ ಸವಾರನ ದೇಹ ಇಬ್ಭಾಗ..!
ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ
ಬೆಂಗಳೂರು, ಫೆ.16: ನೆಲಮಂಗಲದಲ್ಲಿ ಬೈಕ್‌ಗೆ ಲಾರಿಯೊಂದು ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರನ ದೇಹ ಎರಡು ಭಾಗವಾಗಿ, ಬಳಿಕ ಆತ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ನಡೆದಿದೆ.
ಗುಬ್ಬಿ ತಾಲೂಕಿನ ಕರೇಗೌಡನ ಹಳ್ಳಿಯ ಹರೀಶ್ (26) ಅಪಘಾತದಲ್ಲಿ ದಾರುಣವಾಗಿ ಸಾವಿಗೀಡಾದವರು.
ಹರೀಶ್ ಅವರು ತುಮಕೂರಿನಿಂದ ಬೆಂಗಳೂರಿಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ನೆಲಮಂಗಲದ ಬಳಿ ಅವರ ಬೈಕ್‌ಗೆ ಸಕ್ಕರೆ ಸಾಗಿಸುತ್ತಿದ್ದ ಲಾರಿಯೊಂದು ಡಿಕ್ಕಿ ಹೊಡೆಯಿತೆನ್ನಲಾಗಿದೆ. ಪರಿಣಾಮವಾಗಿ ಹರೀಶ್ ದೇಹ ಎರಡು ಭಾಗಗಳಾಗಿ ಬೇರ್ಪಟ್ಟು ರಸ್ತೆಗೆ ಎಸೆಯಲ್ಪಟ್ಟಿತು ಎನ್ನಲಾಗಿದೆ.
ರಸ್ತೆಯಲ್ಲಿ ಬಿದ್ದಿದ್ದ ಹರೀಶ್ ಕೂಡಲೇ ಸಹಾಯಕ್ಕಾಗಿ ಕೂಗಿದರೂ ಯಾರೂ ಹತ್ತಿರಕ್ಕೆ ಹೋಗಲಿಲ್ಲ ಎಂದು ತಿಳಿದು ಬಂದಿದೆ. ಗಂಭೀರ ಗಾಯಗೊಂಡ ಹರೀಶ್ ಅಲ್ಲಿ ನೆರೆದವರಲ್ಲಿ ಅಂಗಾಂಗ ದಾನ ಮಾಡುವ ಇಚ್ಛೆ ವ್ಯಕ್ತಪಡಿಸುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
Next Story





