ಸುಳ್ಯ: ಬೈಕ್‌ಗೆ ಲಾರಿ ಢಿಕ್ಕಿ - ಉಪನ್ಯಾಸಕ ದುರ್ಮರಣ

ಸುಳ್ಯ: ಸ್ವರಾಜ್ ಮಜ್ಡಾ ಲಾರಿ ಮತ್ತು ಬೈಕ್ ಮುಖಾಮುಖಿ ಢಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟ ಘಟನೆ ಸುಳ್ಯದ ಅಡ್ಕಾರ್ ಬಳಿ ಸಂಭವಿಸಿದೆ.
ಸುಳ್ಯ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಮೆಕಾನಿಕಲ್ ವಿಭಾಗದ ಉಪನ್ಯಾಸಕ ಮಹಾಬಲ ಕಿರಣ್ ಕಾಲೇಜು ಮುಗಿಸಿ ಬೈಕ್ ನಲ್ಲಿ ತನ್ನ ಊರಾದ ಕಾಸರಗೋಡಿನ ಬದಿಯಡ್ಕಕ್ಕೆ ಹೋಗುತ್ತಿದ್ದರು.
ಈ ವೇಳೆ ಅಡ್ಕಾರ್ ಬಳಿ ಸ್ವರಾಜ್ ಮಜ್ಡಾ ಲಾರಿ ಮತ್ತು ಬೈಕ್ ಪರಸ್ಪರ ಢಿಕ್ಕಿ ಹೊಡೆಯಿತು. ಅಪಘಾತದ ರಭಸಕ್ಕೆ ಬೈಕ್ ಬೆಂಕಿ ಹೊತ್ತಿಕೊಂಡು ಉರಿಯಿತು. ಗಂಭೀರ ಗಾಯಗೊಂಡ ಮಹಾಬಲ ಕಿರಣ್ ಸ್ಥಳದಲ್ಲೇ ಮೃತಪಟ್ಟರು. ಕಿರಣ್ ಹೆಲ್ಮೆಟ್ ಧರಿಸಿದ್ದರೂ ಪ್ರಾಣ ಉಳಿಯಲಿಲ್ಲ.

Next Story





