ಮೂಡುಶೆಡ್ಡೆ : ಗ್ರಾಮ ಪಂಚಾಯತ್ ಸದಸ್ಯನಿಗೆ ಹಲ್ಲೆ ವಿರುದ್ದ ಮತದಾನ ಬಹಿಷ್ಕಾರ ಬ್ಯಾನರ್

ಮಂಗಳೂರು : ಫೆ.16 : ಮೂಡುಶೆಡ್ಡೆಗ್ರಾಮ ಪಂಚಾಯತ್ ಸದಸ್ಯನಿಗೆ ಹಲ್ಲೆ ಖಂಡಿಸಿ ಎದುರುಪದವು ಊರಿನ ನಾಗರಿಕರು ಮತದಾನ ಬಹಿಷ್ಕಾರಬ್ಯಾನರ್ ಅಳವಡಿಸಿ ವಿನೂತನ ಪ್ರತಿಭಟನೆ ನಡೆಸುತ್ತಿದ್ದಾರೆ.
ದಿನಾಂಕ 15-02-2016 ರಂದುರಾತ್ರಿ ಮೂಡುಶೆಡ್ಡೆಗ್ರಾಮ ಪಂಚಾಯತ್ ಸದಸ್ಯ ಗೋಪಾಲ ಮಡಿವಾಳ್ ಎಂಬವರ ಮೇಲೆ ಮೂಡುಶೆಡ್ಡೆ ಗ್ರಾಮದ ವಾಟರ್ ಮ್ಯಾನ್ ವೆಂಕಟಪ್ಪ (ವಿಶ್ವ) ಎಂಬಾತ ಹಲ್ಲೆ ನಡೆಸಿದ್ದು, ಈ ಬಗ್ಗೆ ಗ್ರಾಮ ಪಂಚಾಯತ್ ಯಾವುದೇ ಕ್ರಮ ಜರಗಿಸದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪಂಚಾಯತ್ ವಿರುದ್ಧ ಮತದಾನ ಬಹಿಷ್ಕಾರದ ಬ್ಯಾನ್ ಅಳವಡಿಸಿ ಪ್ರತಿಭಟನೆ ನಡೆಸಿದರು.
ಪಂಚಾಯತ್ ಸದಸ್ಯ ಗೋಪಾಲ ಮಡಿವಾಳ್ ಎಂಬವರು ಕಳೆದ ರಾತ್ರಿ ಗ್ರಾಮದ ವಾಟರ್ ಮ್ಯಾನ್ ವೆಂಕಟಪ್ಪ (ವಿಶ್ವ) ಎಂಬಾತನಲ್ಲಿ ತನ್ನ ವ್ಯಾಪ್ತಿಯಲ್ಲಿನ ಮನೆಗಳಿಗೆ ಸರಿಯಾದ ನೀರು ಪೂರೈಕೆಯಾಗುತ್ತಿಲ್ಲ. ಆದುದರಿಂದ ಸಮರ್ಪಕವಾಗಿ ನೀರು ಕೊಡುವಂತೆ ಕೋರಿಕೊಂಡಾಗ ಪರಸ್ಪರ ಮಾತಿನ ಚಕಮಕಿ ನಡೆದು ವೆಂಕಟಪ್ಪ (ವಿಶ್ವ) ಏಕಾಏಕಿ ಪಂಚಾಯತ್ ಸದಸ್ಯರಾದ ಗೋಪಾಲರಿಗೆ ಹಲ್ಲೆ ನಡೆಸಿದ್ದು ಈ ಸಂಬಂಧ ಗ್ರಾಮ ಪಂಚಾಯತ್ ವೆಂಕಟಪ್ಪನ ವಿರುದ್ಧ ಯಾವುದೇ ಕ್ರಮ ಜರಗಿಸದ ಹಿನ್ನೆಲೆಯಲ್ಲಿ ಎದುರು ಪದವು ಊರಿನ ನಾಗರಿಕರು ಪಂಚಾಯತ್ ವಿರುದ್ಧ ಅಸಮಾಧಾನಗೊಂಡು "ಮತದಾನ ಬಹಿಷ್ಕಾರ" ಎಂಬ ಬ್ಯಾನರ್ ಅವಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.








