ಸಿಯಾಚಿನ್ ಹುತಾತ್ಮ ಯೋಧ ಮುಷ್ತಾಕ್ ಅಹ್ಮದ್ ಗೆ ಅಂತಿಮ ವಿದಾಯ
ಇತ್ತೀಚಿಗೆ ಸಿಯಾಚಿನ್ ದುರಂತದಲ್ಲಿ ಹುತಾತ್ಮನಾದ ಆಂಧ್ರ ಪ್ರದೇಶದ ವೀರ ಯೋಧ ಸಿಪಾಯಿ ಮುಶ್ತಾಕ್ ಅಹ್ಮದ್ ಅವರ ಪಾರ್ಥಿವ ಶರೀರ ಸೋಮವಾರ ಹೈದರಾಬಾದ್ ನ ಬೇಗಂ ಪೇಟ್ ನಲ್ಲಿರುವ ಹಳೆಯ ವಿಮಾನ ನಿಲ್ದಾಣಕ್ಕೆ ಬಂದಾಗಿನ ದೃಶ್ಯಗಳು ಇಲ್ಲಿವೆ. ಮಂಗಳವಾರ ಆತನ ಸ್ವಗ್ರಾಮದಲ್ಲಿ ಸಕಲ ಮಿಲಿಟರಿ ಗೌರವದೊಂದಿಗೆ ಯೋಧನ ಅಂತ್ಯ ಸಂಸ್ಕಾರ ನಡೆಯಿತು. ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಕೆ. ಇ. ಕೃಷ್ಣಮೂರ್ತಿ ,ಇತರ ಹಲವಾರು ಗಣ್ಯರು ಹಾಗು ದೊಡ್ಡ ಸಂಖ್ಯೆಯಲ್ಲಿ ಗ್ರಾಮಸ್ಥರು ಅಂತಿಮ ನಮನ ಸಲ್ಲಿಸಿ ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿದರು. ಆಂಧ್ರ ಪ್ರದೇಶ ಸರಕಾರ ಯೋಧನ ಕುಟುಂಬಕ್ಕೆ ರೂ. ೨೫ ಲಕ್ಷ ಪರಿಹಾರ ಘೋಷಿಸಿದೆ.
courtesy : Etemaad Daily
Next Story





