ಮಂಗಳೂರು : ವಿದ್ಯುತ್ ಕಂಬಕ್ಕೆ ಮಿಕ್ಸರ್ ಢಿಕ್ಕಿ
ಮಂಗಳೂರು, ಫೆ. 16: ಕಾಂಕ್ರಿಟ್ ಮಿಶ್ರಣದ ವಾಹನವೊಂದು ಅಡ್ಡಾದಿಡ್ಡಿ ಚಲಾಯಿಸಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಘಟನೆ ಕದ್ರಿ ಕಂಬಳ ಬಳಿ ನಡೆದಿದೆ.
ಇಂದು ಮಧ್ಯಾಹ್ನ ಸುಮಾರು 2 ಗಂಟೆಯ ಹೊತ್ತಿಗೆ ಲಾರಿ ಕದ್ರಿ ಕಂಬಳದಲ್ಲಿನ ಇಕ್ಕಟ್ಟಾದ ರಸ್ತೆಯಲ್ಲಿ ಅಡ್ಡಾದಿಡ್ಡಿ ಚಲಾಯಿಸಿ 11 ಕೆ.ವಿ ವಿದ್ಯುತ್ ಲೈನ್ ಕಂಬಕ್ಕೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಲಾರಿಯ ಚಾಲಕ ಲಾರಿಯನ್ನು ಬಿಟ್ಟು ಪರಾರಿಯಾಗಿದ್ದಾನೆ.
ಘಟನೆಯಲ್ಲಿ ಪಕ್ಕದ ಮನೆಯೊಂದಕ್ಕೂ ವಿದ್ಯುತ್ ಲೈನ್ ಬಿದಿದೆ. ಮೆಸ್ಕಾಂ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕಾಗಮಿಸಿ ವಿದ್ಯುತ್ ಸ್ಥಗಿತಗೊಳಿಸಿ ಕಂಬವನ್ನು ತೆರವುಗೊಳಿಸಿದ್ದಾರೆ.
ಚಾಲಕ ಪಾನಮತ್ತನಾಗಿ ಚಲಾಯಿಸಿದೇ ಘಟನೆಗೆ ಕಾರಣವೆಂದು ಶಂಕಿಸಲಾಗಿದೆ. ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





