ಮಂಗಳೂರು : ಮಹಿಳೆಯ ಸರ ಅಪಹರಣ
ಮಂಗಳೂರು, ಫೆ. 16: ಬೈಕ್‌ನಲ್ಲಿ ಆಗಮಿಸಿದ ದುಷ್ಕರ್ಮಿಯೋರ್ವ ಪಾದಾಚಾರಿ ಮಹಿಳೆಯೋರ್ವರ ಕರಿಮಣಿ ಸರ ಅಪಹರಿಸಿದ ಘಟನೆ ಮಂಗಳವಾರ ನಗರದ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮರ್ಸಿಲಿನ್ ಡಿಸೊಜಾ ಎಂವವರು ಸರ ಕಳೆದುಕೊಂಡವರು. ಪಳ್ನೀರ್ ರಸ್ತೆಯ ಮಾರ್ಜಿಲ್ ಶಾಲೆಯ ಕಂಪೌಂಡ್ ಎದುರುಗಡೆ ಮರ್ಸಿಲಿನ್ ಅವರು ನಡೆದುಕೊಂಡು ಹೋಗುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಆಗಮಿಸಿದ ಅಪರಿಚಿತ ಏಕಾಏಕಿ ಚಿನ್ನದ ಕರಿಮಣಿ ಸರವನ್ನು ಕಿತ್ತುಕೊಂಡು ವಾಹನದಲ್ಲಿ ಪರಾರಿಯಾಗಿದ್ದಾನೆ.
ಈ ಬಗ್ಗೆ ಮರ್ಸಿಲಿನ್ ಡಿಸೋಜಾ ದಕ್ಷಿಣ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
Next Story





