Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನ್ಯಾಯವ್ಯವಸ್ಥೆಯ ಮೇಲೆ...

ನ್ಯಾಯವ್ಯವಸ್ಥೆಯ ಮೇಲೆ ನ್ಯಾಯವಾದಿಗಳಿಂದಲೇ ದಾಳಿ

ವಾರ್ತಾಭಾರತಿವಾರ್ತಾಭಾರತಿ16 Feb 2016 11:15 PM IST
share

‘‘ಅರಸು ರಾಕ್ಷಸ, ಮಂತ್ರಿ ಮೊರೆವ ಹುಲಿ

ಪರಿವಾರ ಹದ್ದಿನ ನೆರವಿ
ಬಡವರ ಬಿನ್ನಪವಿನ್ನಾರು ಕೇಳುವರು’’
 ಕುಮಾರವ್ಯಾಸ ಭಾರತದ ಈ ಸಾಲುಗಳು, ಮೋದಿ ಭಾರತಕ್ಕೂ ಅನ್ವಯವಾಗುತ್ತಿರುವುದು ಈ ದೇಶದ ವಿಪರ್ಯಾಸವಾಗಿದೆ. ದೇಶದಲ್ಲಿ ಒಂದೊಂದಾಗಿ ನಡೆಯುತ್ತಿರುವ ಘಟನೆಗಳು, ಅರಸು, ಮಂತ್ರಿ ಮತ್ತು ಅವರ ಪರಿವಾರದ ಜೊತೆಗೆ ನೇರವಾಗಿ ತಳಕು ಹಾಕುತ್ತಿವೆ. ಸೋಮವಾರ ದಿಲ್ಲಿಯ ಪಟಿಯಾಲ ನ್ಯಾಯಾಲಯದಲ್ಲಿ ನಡೆದ ಕೃತ್ಯ ಕುಮಾರವ್ಯಾಸ ಭಾರತದ ಪದಪದಗಳನ್ನು ದೇಶದ ಜನರಿಗೆ ನೆನಪಿಸುತ್ತದೆ. ಇದು ದೇಶದ ನ್ಯಾಯ ವ್ಯವಸ್ಥೆಯ ಮೇಲೆ ನಡೆದ ಬರ್ಬರ ದಾಳಿಯಾಗಿದೆ. ಈ ದಾಳಿ ಯಾವುದೋ ವಿದೇಶಿ ಶಕ್ತಿಗಳಿಂದ ನಡೆದಿರುವುದೇ ಆಗಿದ್ದರೆ ನಾವು ಇಷ್ಟೊಂದು ಆಘಾತ ಪಡಬೇಕಾದ ಅಗತ್ಯವಿದ್ದಿರಲಿಲ್ಲವೇನೋ. ಶತ್ರುಗಳಿಗೆ ನೇರವಾಗಿ ಉತ್ತರವನ್ನು ಸೇನೆಯ ಮೂಲಕವೇ ನೀಡಬಹುದಾಗಿತ್ತು. ಆದರೆ ಇದು ಹೊರಗಿನ ಶತ್ರುಗಳಿಂದ ನಡೆಯದೇ ನಮ್ಮವರೆನಿಸಿಕೊಂಡವರಿಂದಲೇ ನಡೆದ ದಾಳಿಯಾಗಿತ್ತು. ನ್ಯಾಯ ಬೇಡಲು ಬಂದ ನಮ್ಮದೇ ಜನರನ್ನು ನ್ಯಾಯಾಲಯದ ಆವರಣದಲ್ಲೇ ಪೊಲೀಸರ ಸಮ್ಮುಖದಲ್ಲಿ ಬರ್ಬರವಾಗಿ ಥಳಿಸಲಾಯಿತು. ಥಳಿತಕ್ಕೊಳಗಾದವರು ಈ ದೇಶದ ವಿದ್ಯಾರ್ಥಿಗಳಿಗೆ ವಿದ್ಯೆ ನೀಡುವ ಗುರುಗಳು, ಪತ್ರಕರ್ತರು ಮತ್ತು ವಿದ್ಯಾರ್ಥಿಗಳಾಗಿದ್ದಾರೆ. ಇದೇ ಸಂದರ್ಭದಲ್ಲಿ ಥಳಿಸಿದವರು ಯಾರೋ, ಅನಕ್ಷರಸ್ಥ ಗೂಂಡಾಗಳಾಗಿರಲಿಲ್ಲ. ಅವರು ಈ ದೇಶದ ಸಂವಿಧಾನವನ್ನು, ನ್ಯಾಯವ್ಯವಸ್ಥೆಯನ್ನು ರಕ್ಷಿಸುವ ವಕೀಲರಾಗಿದ್ದರು. ಜೊತೆಗೆ ನಮ್ಮನ್ನಾಳುವವರೂ ಇದರ ನೇತೃತ್ವವನ್ನು ವಹಿಸಿದ್ದರು. ಒಂದು ರೀತಿಯಲ್ಲಿ ಆಳುವವರು, ಪೊಲೀಸರು, ವಕೀಲರು ಜೊತೆ ಸೇರಿ ಶಿಕ್ಷಕರು, ಪತ್ರಕರ್ತರು ಮತ್ತು ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದ್ದಾರೆ. ಸಂತ್ರಸ್ತರು ಯಾರ ಬಳಿ ತನ್ನ ದೂರನ್ನು ಒಯ್ಯಬೇಕು ಎನ್ನುವ ಗೊಂದಲದಲ್ಲಿದ್ದಾರೆ?
   

  ಈ ದೇಶದಲ್ಲಿ ವಕೀಲರು ಮತ್ತು ಖಾಕಿಗಳ ಹೊಣೆಗಾರಿಕೆ ಅತೀ ದೊಡ್ಡದು. ದೇಶದ ಎರಡು ಅಂಗಗಳು ವಿಫಲವಾದಾಗ ಅದನ್ನು ರಕ್ಷಿಸಬೇಕಾದ ಹೊಣೆ ನ್ಯಾಯಾಂಗದ ಮೇಲಿದೆ. ಆದರೆ ಅವರೇ ಒಂದು ಪಕ್ಷ, ಸಿದ್ಧಾಂತದ ಕೈಗೊಂಬೆ ಯಾದರೆ ನಮ್ಮ ಸಂವಿಧಾನದ ಆಶಯ ಅದೆಷ್ಟೇ ಉದಾತ್ತವಾಗಿದ್ದರೂ ಅದನ್ನು ರಕ್ಷಿಸಲು ಸಾಧ್ಯವಿಲ್ಲ. ಪಟಿಯಾಲ ನ್ಯಾಯಾಲ ಯದಲ್ಲಿ ನಡೆದ ಕೃತ್ಯ ಇದನ್ನು ಒತ್ತಿ ಹೇಳುತ್ತಿದೆ. ಪೊಲೀಸ್ ಇಲಾಖೆಗಳನ್ನು ಸಂಘಪರಿವಾರ ನಿಯಂತ್ರಿಸುತ್ತಿದೆ ಎನ್ನುವುದು ಈ ವರೆಗಿನ ಆರೋಪವಾಗಿತ್ತು. ಇದೀಗ ನ್ಯಾಯಾಲಯ ದಲ್ಲೂ ಅವರು ಆವರಿಸಿಕೊಂಡಿದ್ದಾರೆ ಎನ್ನು ವುದಕ್ಕೆ ಪಟಿಯಾಲ ಸಾಕ್ಷಿಯಾಗಿದೆ. ಯಾವುದೇ ಗೂಂಡಾಗಳಿಗೆ, ರೌಡಿಗಳಿಗೆ ಕಡಿಮೆಯಿಲ್ಲದಂತೆ, ವಕೀಲರ ದಿರಿಸಿನಲ್ಲಿರುವ ಸಂಘಪರಿವಾರ ಕಾರ್ಯಕರ್ತರು ನ್ಯಾಯ ಬೇಡಲು ಬಂದ ಸಂತ್ರಸ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಹಲ್ಲೆ, ನಿಜಕ್ಕೂ ತಾವು ಧರಿಸಿರುವ ಕಪ್ಪು ಬಟ್ಟೆಗೆ ಮಾಡಿದ ಅವಮಾನ,.ತಾವು ಕೈಯಲ್ಲಿ ಹಿಡಿದಿರುವ ನ್ಯಾಯ ಪುಸ್ತಕಕ್ಕೆ ಮಾಡಿರುವ ಅವಮಾನ ಎನ್ನು ವುದನ್ನು ಆ ಕ್ಷಣದಲ್ಲಿ ಅವರು ಮರೆತು ಬಿಟ್ಟರು. ಒಂದು ರೀತಿಯಲ್ಲಿ ನ್ಯಾಯ ಕೊಠಡಿಯೊಳಗಿರುವ ನ್ಯಾಯ ದೇವತೆಯ ಮೇಲೆ ಅವರು ಎರಗಿದ್ದಾರೆ. ನಿನ್ನೆಯ ಘಟನೆ ಪೂರ್ವ ನಿಯೋಜಿತ ಎನ್ನುವುದನ್ನು ಮಾಧ್ಯಮಗಳು ಈಗಾಗಲೇ ಸಾಕ್ಷ ಸಮೇತ ಬಹಿರಂಗಪಡಿಸಿವೆ. ವಕೀಲ ಸಂಘದಲ್ಲಿರುವ ಸಂಘಪರಿವಾರ ಪ್ರತಿನಿಧಿಗಳು ಹಿಂದಿನ ದಿನವೇ ಇಂತಹದೊಂದು ಹಲ್ಲೆ, ದೌರ್ಜನ್ಯಗಳಿಗೆ ಯೋಜನೆಯನ್ನು ರೂಪಿಸಿದ್ದರು. ಇದಕ್ಕೆ ಸಂಬಂಧಿಸಿ ಸಂದೇಶಗಳನ್ನೂ ರವಾನಿಸಿದ್ದರು. ಈ ಮೂಲಕ ತಾವು ನಿರ್ವಹಿಸುವ ವೃತ್ತಿಗೆ ದ್ರೋಹ ಬಗೆದಿದ್ದಾರೆ. ತಾವು ರಕ್ಷಿಸಬೇಕಾದ ನ್ಯಾಯವ್ಯವಸ್ಥೆಗೆ ತಾವೇ ಅನ್ಯಾಯ ಬಗೆದಿದ್ದಾರೆ. ವಕೀಲರೇ ಕಾನೂನನ್ನು ಕೈಗೆತ್ತಿಕೊಂಡು, ನ್ಯಾಯಾಲಯದ ಪ್ರಸ್ತುತೆಯನ್ನೇ ಅವರು ಪ್ರಶ್ನಿಸಿದ್ದಾರೆ. ವಿದ್ಯಾರ್ಥಿಗಳು ನಿಜಕ್ಕೂ ದೇಶದ್ರೋಹದ ಹೇಳಿಕೆಗಳನ್ನು ನೀಡಿದ್ದರೆ, ಅದನ್ನು ನ್ಯಾಯಾಲಯದಲ್ಲಿ ಸಾಬೀತು ಪಡಿಸಿ, ಅವರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವ ಹೊಣೆಗಾರಿಕೆ ವಕೀಲರದ್ದಾಗಿತ್ತು. ನೇರವಾಗಿ ಕಾನೂನನ್ನು ಕೈಗೆತ್ತಿಕೊಳ್ಳುವ ಅಧಿಕಾರ ಅವರಿಗಿಲ್ಲ. ನ್ಯಾಯವ್ಯವಸ್ಥೆಯ ಮೇಲೆ ವಕೀಲರೇ ನಂಬಿಕೆಯನ್ನು ಕಳೆದುಕೊಂಡು ಅಧಿಕಾರವನ್ನು ಕೈಗೆತ್ತಿಕೊಂಡರೆ ಇನ್ನು ಜನಸಾಮಾನ್ಯರ ಪಾಡೇನು? ಜನಸಾಮಾನ್ಯರು ಕಾನೂನು ಕೈಗೆತ್ತಿಕೊಂಡಾಗ ಅವರ ವಿರುದ್ಧ ವಕೀಲರು ಯಾವ ಮುಖ ಇಟ್ಟುಕೊಂಡು ನ್ಯಾಯಾಲಯದಲ್ಲಿ ವಾದ ಮಾಡುತ್ತಾರೆ? ಇಷ್ಟೇ ಅಲ್ಲ, ನಿನ್ನೆಯ ಘಟನೆಯಲ್ಲಿ ಓರ್ವ ಶಾಸಕ ನೇರವಾಗಿ ಹಲ್ಲೆಯಲ್ಲಿ ಭಾಗವಹಿಸಿದ್ದಾನೆ. ಈ ಹಿಂದೆ ಮಹಿಳಾ ಶಾಸಕಿಯೊಬ್ಬರ ವಿರುದ್ಧ ಅಶ್ಲೀಲವಾಗಿ ಮಾತನಾಡಿ ಸದನದಿಂದ ಹಲ್ಲೆಯಾದ ಇತಿಹಾಸ ಈತನಿಗಿದೆ. ಇದೀಗ ಈತ ಮಾಮೂಲಿ ರೌಡಿಯ ರೂಪದಲ್ಲಿ ಅಮಾಯಕ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಎಲ್ಲ ಬೆಳವಣಿಗೆಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆ ತಳಮಟ್ಟಕ್ಕೆ ಇಳಿದಿದೆ. ಮೊತ್ತ ಮೊದಲಾಗಿ, ನ್ಯಾಯಾಲಯದ ಆವರಣದಲ್ಲಿ ಗೂಂಡಾಯಿಸಂ ಮೆರೆದ ವಕೀಲರನ್ನು ಗುರುತಿಸಿ ಅವರ ಪದವಿಯನ್ನು ಯಾವ ದಾಕ್ಷಿಣ್ಯವೂ ಇಲ್ಲದೆ ಅಮಾನ್ಯಗೊಳಿಸಬೇಕು. ನ್ಯಾಯಾಲಯದೊಳಗೆ ಯಾವತ್ತೂ ಕಾಲಿಡದಂತೆ ನೋಡಿಕೊಳ್ಳುವುದು ನ್ಯಾಯವ್ಯವಸ್ಥೆಯ ಕರ್ತವ್ಯ. ಇದೇ ಸಂದರ್ಭದಲ್ಲಿ ಕೃತ್ಯವನ್ನು ಮೂಕ ಪ್ರೇಕ್ಷಕರಾಗಿ ವೀಕ್ಷಿಸಿದ ಪೊಲೀಸರ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು. ಪರೋಕ್ಷವಾಗಿ ಅವರ ವೌನವೇ ಆ ದಾಂಧಲೆ, ದಾಳಿಗೆ ಕಾರಣ. ಹಾಗೆಯೇ ರೌಡಿಯಂತೆ ವರ್ತಿಸಿದ ಶಾಸಕ ಮತ್ತು ಅವನ ಹಿಂಬಾಲಕರನ್ನೂ ಜೈಲಿಗೆ ತಳ್ಳಬೇಕಾಗಿದೆ. ಇಷ್ಟು ಮಾಡಿದರೆ ನ್ಯಾಯಾಲಯ ತನ್ನನ್ನು ತಾನೇ ಕಾಪಾಡಿಕೊಂಡಂತೆ. ಸಮಾಜವನ್ನು ತಿದ್ದಿ ಬೆಳೆಸುವ ವಿಶ್ವವಿದ್ಯಾನಿಲಯದ ಅಧ್ಯಾಪಕರ ಮೇಲೆ ನಡೆದಿರುವ ಹಲ್ಲೆ, ‘ಆಚಾರ್ಯ ದೇವೋಭವ’ ಎಂಬ ಭಾರತೀಯ ಸಂಸ್ಕೃತಿಯ ವೌಲ್ಯದ ಮೇಲೆ ನಡೆದ ದಾಳಿಯಾಗಿದೆ. ಬಿಜೆಪಿ ಮತ್ತು ಸಂಘಪರಿವಾರ ಸಾಂಸ್ಕೃತಿಕವಾಗಿ ಸಂಪೂರ್ಣ ದಿವಾಳಿಯೆದ್ದು, ಇದೀಗ ಗೂಂಡಾಯಿಸಂನ್ನೇ ತನ್ನ ತತ್ವ, ಸಿದ್ಧಾಂತವಾಗಿ ಅಳವಡಿಸಿಕೊಳ್ಳಲು ನೋಡುತ್ತಿರುವುದು ಅದರ ಹತಾಶೆ ಮತ್ತು ಪತನದ ಸೂಚನೆಯನ್ನು ನೀಡುತ್ತಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X