ತೈಲ ಉತ್ಪಾದನೆ ಸ್ತಂಭನಕ್ಕೆ ಸೌದಿ ಆರೇಬಿಯ, ರಶ್ಯ ಸಮ್ಮತಿ

ವಿಶ್ವದಲ್ಲೇ ಕಚ್ಚಾ ತೈಲದ ಅತಿ ದೊಡ್ಡ ಪೂರೈಕೆದಾರರಾದ ಸೌದಿ ಆರೇಬಿಯ ಹಾಗೂ ರಶ್ಯ, ತಮ್ಮ ತೈಲ ಉತ್ಪಾದನೆಯನ್ನು ಜನವರಿ ಮಟ್ಟದಲ್ಲಿ ಸ್ತಂಭನಗೊಳಿಸಲು ಸಮ್ಮತಿಸಿವೆ. ಅಧಿಕ ತೈಲ ಪೂರೈಕೆಯಿಂದ ತೈಲ ದರದಲ್ಲಿ ಭಾರೀ ಕುಸಿತವುಂಟಾಗಿರುವ ಹಿನ್ನೆಲೆಯಲ್ಲಿ ಅವು ಈ ಒಪ್ಪಂದಕ್ಕೆ ಬಂದಿವೆ. ಕತರ್‌ನಲ್ಲಿ ನಡೆದ ಮಾತುಕತೆಯ ವೇಳೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಕತರ್ ಹಾಗೂ ವೆನೆಝುವೆಲಾ ಕೂಡಾ ತಮ್ಮ ಉತ್ಪಾದನೆಯನ್ನು ಸ್ತಂಭನಗೊಳಿಸಲು ನಿರ್ಧರಿಸಿರುವುದಾಗಿ ಸೌದಿ ತೈಲ ಸಚಿವರು ತಿಳಿಸಿದ್ದಾರೆ. ಈ ಘೋಷಣೆಯ ಬಳಿಕ ಲಂಡನ್ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿ 1.2 ಶೇಕಡ ಏರಿಕೆಯಾಗಿದೆ.
Next Story





