Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಶಾಲಾ ಮಕ್ಕಳ ಬೀಚ್ ಪಿಕಿ್ನಿಕ್‌ಗೆ ತಡೆ

ಶಾಲಾ ಮಕ್ಕಳ ಬೀಚ್ ಪಿಕಿ್ನಿಕ್‌ಗೆ ತಡೆ

ವಾರ್ತಾಭಾರತಿವಾರ್ತಾಭಾರತಿ16 Feb 2016 11:22 PM IST
share
ಶಾಲಾ ಮಕ್ಕಳ ಬೀಚ್ ಪಿಕಿ್ನಿಕ್‌ಗೆ ತಡೆ

ಮಹಾರಾಷ್ಟ್ರದ ಮುರುಡ್ ಬೀಚ್ ದುರ್ಘಟನೆಯ ನಂತರ ರಾಜ್ಯ ಸರಕಾರವು ಶಾಲೆಗಳ ಪಿಕ್ನಿಕ್ ಕುರಿತು ಕಠಿಣ ನಿಯಮಗಳನ್ನು ಜಾರಿಗೆ ತರಲು ನಿರ್ಧರಿಸಿದೆ. ಮುರುಡ್‌ಬೀಚ್ ದುರ್ಘಟನೆಯಲ್ಲಿ ಇತ್ತೀಚೆಗೆ 14 ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು.
ಶಾಲಾ ಮಕ್ಕಳ ಪಿಕ್ನಿಕ್ ಆಯೋಜನೆ ಕೈಗೊಳ್ಳುವ ಸಮಯ ಶಾಲಾ ಕಾಲೇಜುಗಳು ನಿಯಮಗಳನ್ನು ಪಾಲಿಸಬೇಕು. ರಾಜ್ಯದ ಶಿಕ್ಷಣ ಉಪಸಂಚಾಲಕರ ವತಿಯಿಂದ ಜಾರಿಗೊಳಿಸಲಾದ ಒಂದು ಆದೇಶದಲ್ಲಿ ಶಾಲಾ ಕಾಲೇಜುಗಳ ಮಕ್ಕಳು ನದಿ, ಸಮುದ್ರ ತೀರ ಮತ್ತು ಎತ್ತರದ ಸ್ಥಳಗಳಿಗೆ ಪಿಕ್ನಿಕ್‌ಗೆ ಇನ್ನು ಮುಂದೆ ತೆರಳುವಂತಿಲ್ಲ. ಈ ನಿಯಮ ಮಹಾರಾಷ್ಟ್ರದ ಎಲ್ಲಾ ಪ್ರಾಥಮಿಕ ಮಾಧ್ಯಮಿಕ ಶಾಲೆ ಮತ್ತು ಜ್ಯೂನಿಯರ್ ಕಾಲೇಜುಗಳಿಗಾಗಿ ಜಾರಿಗೆ ಬರಲಿದೆ.
ಇನ್ನು ಮುಂದೆ ಶಾಲಾ ಮಕ್ಕಳು ಪಿಕ್ನಿಕ್‌ಗೆ ತೆರಳುವ ಮೊದಲು ಪಾಲಕರ ಒಪ್ಪಿಗೆ ಪಡೆಯಲೇಬೇಕು. ಪಿಕ್ನಿಕ್‌ಗಳಲ್ಲಿ ಪ್ರತೀ ಹತ್ತು ವಿದ್ಯಾರ್ಥಿಗಳಿಗಾಗಿ ಒಬ್ಬ ಶಿಕ್ಷಕರು ಇರುವುದು ಇನ್ನು ಮುಂದೆ ಅನಿವಾರ್ಯ. ಅಗತ್ಯಬಿದ್ದರೆ ಪಿಕ್ನಿಕ್‌ನಲ್ಲಿ ಪಾಲಕರ ಒಬ್ಬರು ಪ್ರತಿನಿಧಿ ಕೂಡಾ ಇರಬೇಕು. ಆರ್.ಟಿ.ಓ.ದಿಂದ ಮಾನ್ಯತೆ ಪ್ರಾಪ್ತಿ ವಾಹನಗಳಲ್ಲೇ ಪಿಕ್ನಿಕ್‌ಗೆ ತೆರಳಬೇಕು. ಪ್ರಥಮ ಚಿಕಿತ್ಸೆ ಪೆಟ್ಟಿಗೆ, ಸ್ಥಳೀಯ ಡಾಕ್ಟರ್‌ಗಳ ಅಥವಾ ಪ್ರವಾಸ ಸ್ಥಳದಲ್ಲಿನ ಆಸ್ಪತ್ರೆಗಳ ನಂಬರ್ ಕೂಡಾ ಶಾಲಾ ಕಾಲೇಜುಗಳು ಪಿಕ್ನಿಕ್ ಸಮಯ ಮೊದಲೇ ಇರಿಸಿಕೊಳ್ಳಬೇಕು. ಇಂತಹ ನಿಯಮಗಳನ್ನು ಸರಕಾರ ಮಾಡಿರುತ್ತದೆ.
   
ಮಂತ್ರಿಯ ಕಾರಿನ ಫ್ಯಾನ್ಸಿ ನಂಬರ್ ಪ್ಲೇಟ್ ವಿವಾದ
ಮಹಾರಾಷ್ಟ್ರ ಮಂತ್ರಿ ಮಂಡಲದಲ್ಲಿರುವ ಶಿವಸೇನೆ ಮತ್ತು ಬಿಜೆಪಿಯ ಮಂತ್ರಿಗಳು ಒಬ್ಬರು ಇನ್ನೊಬ್ಬರ ವಿರುದ್ಧ ಸೇಡು ತೀರಿಸುವ ದೃಶ್ಯಗಳು ಮುಂದುವರಿಯುತ್ತಲೇ ಇದೆ. ಬಿಜೆಪಿಯ ವರಿಷ್ಠ ನೇತಾ ಮತ್ತು ರಾಜ್ಯದ ಪಿ.ಡಬ್ಲ್ಯು.ಡಿ. ಮಂತ್ರಿ ಚಂದ್ರಕಾಂತ ಪಾಟೀಲ ಅವರು ಫ್ಯಾನ್ಸಿ ನಂಬರ್ ಪ್ಲೇಟ್ ತಮ್ಮ ಕಾರಿಗೆ ತಾಗಿಸಿ ಸುತ್ತಾಡುವುದು ಕಂಡ ಶಿವಸೇನೆಯ ನೇತಾರ ಮತ್ತು ರಾಜ್ಯದ ಸಾರಿಗೆ ಮಂತ್ರಿ ದಿವಾಕರ್ ರಾವ್‌ತೆ ಅವರು ಈ ಕಾರಿನ ವಿರುದ್ಧ ಕ್ರಮ ಕೈಗೊಳ್ಳಲು ಆದೇಶ ಜಾರಿಗೊಳಿಸಿದ್ದಾರೆ.

ಪಿ.ಡಬ್ಯ್ಲೂ.ಡಿ. ಮಂತ್ರಿ ಚಂದ್ರಕಾಂತ ಪಾಟೀಲರು ಇತ್ತೀಚೆಗೆ ಸೋಲಾಪುರಕ್ಕೆ ಭೇಟಿ ನೀಡಿದರು. ಆವಾಗ ಮಂತ್ರಿಯ ಕಾರಿನ ನಂಬರ್ ಪ್ಲೇಟ್ ಫ್ಯಾನ್ಸಿ ಶೈಲಿಯಲ್ಲಿತ್ತು. ಅಲ್ಲಿ ನಂಬರ್ ಸರಿಯಾಗಿ ಕಾಣುತ್ತಿರಲಿಲ್ಲ. ಬಿಜೆಪಿ ಹೆಚ್ಚು ದೊಡ್ಡದಿತ್ತು. ಅಲ್ಲಿ ದೊಡ್ಡ ದೊಡ್ಡ ಅಧಿಕಾರಿಗಳು, ಪೊಲೀಸರು ಇದ್ದರೂ ಯಾರೂ ಈ ಬಗ್ಗೆ ಕ್ರಮ ಕೈಗೊಳ್ಳಲಿಲ್ಲ. ಕೆಲವರು ಈ ಬಗ್ಗೆ ಸಾರಿಗೆ ಮಂತ್ರಿ ದಿವಾಕರ್ ರಾವ್‌ತೆ ಅವರಿಗೆ ಸವಾಲು ಹಾಕಿದರು. ರಾವ್‌ತೆ ಅವರು ಕಾರು ಮಾಲಕರ ವಿರುದ್ಧ ಕ್ರಮ ಕೈಗೊಳ್ಳಲು ಆದೇಶಿಸಿದರು. ಈಗಾಗಲೇ ದ್ವಿಚಕ್ರ ವಾಹನದ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಮಾಡಿದ ಸಾರಿಗೆ ಮಂತ್ರಿಯವರು ವಿವಾದವನ್ನು ಎದುರಿಸುತ್ತಿದ್ದು, ವರಿಷ್ಠ ಮಂತ್ರಿಯವರು ಫ್ಯಾನ್ಸಿ ನಂಬರ್‌ಪ್ಲೇಟ್‌ನಲ್ಲಿ ತಿರುಗುವಾಗ ಯಾಕೆ ಸುಮ್ಮನಿದ್ದೀರಿ? ಎಂದು ಪ್ರಶ್ನೆಗಳ ಸುರಿಮಳೆಯ ನಂತರ ಸಾರಿಗೆ ಮಂತ್ರಿ ಈ ಕ್ರಮಕ್ಕೆ ಆದೇಶಿಸಲೇ ಬೇಕಾಯಿತು.
   
ಆರು ವರ್ಷಗಳ ನಂತರ ಮತ್ತೊಂದು ಎನ್‌ಕೌಂಟರ್
 ತೊಂಭತ್ತರ ದಶಕದಲ್ಲಿ ಮುಂಬೈ ಮಹಾನಗರದಲ್ಲಿ ಎನ್‌ಕೌಂಟರ್ ಪ್ರತೀದಿನದ ಸುದ್ದಿಯಾಗುತ್ತಿತ್ತು. ಇದೀಗ ಸುಮಾರು ಆರು ವರ್ಷಗಳ ನಂತರ ಮುಂಬೈಯಲ್ಲಿ ಮತ್ತೆ ಎನ್‌ಕೌಂಟರ್ ಘಟನೆ ನಡೆದಿದೆ. ಒಂದೂಕಾಲು ಲಕ್ಷ ರೂ. ಇನಾಮು ಘೋಷಿಸಲಾಗಿದ್ದು ಕಳೆದ ಹದಿನೈದು ವರ್ಷಗಳಿಂದ ಅಪರಾಧಿ ಎನಿಸಿದ್ದ ಸಂದೀಪ್ ಗಡೋಲಿ ಎಂಬ ಗುಡ್‌ಗಾಂವ್‌ನ ಆರೋಪಿಯನ್ನು ಮುಂಬೈಯಲ್ಲಿ ಎನ್‌ಕೌಂಟರ್ ನಡೆಸಿ ಕೊಲ್ಲಲಾಗಿದೆ. ಈತನ ವಿರುದ್ಧ 36 ಪ್ರಕರಣಗಳಿದ್ದು ಇದರಲ್ಲಿ 33 ಗುಡ್‌ಗಾಂವ್, 2 ದಿಲ್ಲಿ, 1 ಝಜ್ಜರ್‌ನಲ್ಲಿ ದಾಖಲಾಗಿತ್ತು. ಗುಡ್‌ಗಾಂವ್ ಪೊಲೀಸರಿಗೆ ಈತ ಮುಂಬೈಯಲ್ಲಿ ಅಂಧೇರಿ ಪೂರ್ವದ ಹೊಟೇಲೊಂದರಲ್ಲಿರುವ ಸುದ್ದಿ ಸಿಕ್ಕಿತು. ಅನಂತರ ಗುಡ್‌ಗಾಂವ್ ಪೊಲೀಸರ ಕ್ರೈಂ ಬ್ರ್ಯಾಂಚ್‌ನ ಟೀಮ್ ಮುಂಬೈಯ ಡಿಸಿಪಿ ದೇಶ್‌ಮುಖ್ ಜೊತೆಗೂಡಿ ಒಂದು ಟೀಮ್ ರಚಿಸಿ ಈ ಎನ್‌ಕೌಂಟರ್ ನಡೆಸಿತು. ಮುಂಬೈ ಪೊಲೀಸ್ ಕಮಿಶನರ್ ದತ್ತಾತ್ರೇಯ ಪಡ್‌ಸಲ್ಗೀಕರ್ ಈ ಪ್ರಕರಣದ ತನಿಖೆಯನ್ನು ಮುಂಬೈ ಕ್ರೈಂ ಬ್ರಾಂಚ್‌ಗೆ ಒಪ್ಪಿಸಿದ್ದಾರೆ. ಆದರೆ ಇದು ನಕಲಿ ಎನ್‌ಕೌಂಟರ್ ಎನ್ನುವ ಆರೋಪವನ್ನು ಕಾಣಿಸಿದೆ.
 ಇದು ಮುಂಬೈ ಪೊಲೀಸರದ್ದಲ್ಲ, ಗುಡ್‌ಗಾಂವ್ ಪೊಲೀಸರ ಆಪರೇಶನ್ ಆಗಿತ್ತು. ಮುಂಬೈ ಪೊಲೀಸರ ಕೊನೆಯ ಎನ್‌ಕೌಂಟರ್ 1, ನವೆಂಬರ್ 2010 ರಂದು ಚೆಂಬೂರ್‌ನಲ್ಲಿ ನಡೆದಿತ್ತು. ಅದರಲ್ಲಿ ಡಾನ್ ಅಶ್ವಿನ್ ನಾಯ್ಕಿನ ಜೊತೆಗಾರ ಮಂಗೇಶ್ ನಾರ್ಕರ್ ಎಂಬಾತನನ್ನು ಪೊಲೀಸರು ಕೊಂದಿದ್ದರು.
ನಾರ್ಕರ್‌ನಿಗೆ ಕೊಲೆ ಕೇಸನಲ್ಲಿ ಆಜೀವ ಕಾರಾಗೃಹ ಸಜೆ ವಿಧಿಸಲಾಗಿತ್ತು. ಆತನನ್ನು 6, ಅಕ್ಟೋಬರ್, 2010 ರಂದು ಒಬ್ಬ ಸಹಚರನ ಜೊತೆ ನವಿಮುಂಬೈಯ ತಲೋಜಾ ಜೈಲ್‌ನಿಂದ ನಾಸಿಕ್ ಜೈಲ್‌ಗೆ ಕರೆತರುತ್ತಿದ್ದರು. ಆಗ ಇಬ್ಬರು ಆರೋಪಿಗಳೂ ಮೆಣಸಿನ ಹುಡಿ ಎರಚಿ ಪೊಲೀಸ್ ಕಸ್ಟಡಿಯಿಂದ ಪರಾರಿಯಾಗಿದ್ದರು. ನಾರ್ಕರ್‌ನ ಜೊತೆಗಾರ ಅನಂತರ ಸಿಕ್ಕಿ ಬಿದ್ದಿದ್ದ. ಪರಾರಿಯಾಗಿದ್ದ ನಾರ್ಕರ್ ಹಪ್ತಾ ವಸೂಲಿಗೆ ಬಂದಿದ್ದಾಗ 1 ನವಂಬರ್, 2010 ರಂದು ಚೆಂಬೂರ್‌ನಲ್ಲಿ ಇನ್‌ಸ್ಪೆಕ್ಟರ್ ಅರುಣ್ ಚವ್ಹಾಣ್ ಟೀಮ್‌ನ ಎನ್‌ಕೌಂಟರ್‌ಗೆ ಸತ್ತು ಹೋದ.
ಮುಂಬೈಯ ಮೊದಲ ಎನ್‌ಕೌಂಟರ್ 14, ಅಕ್ಟೋಬರ್ 1980 ರಂದು ನಡೆದಿತ್ತು. ಮಲಾಡ್‌ನಲ್ಲಿ ದರೋಡೆಕೋರ ಲೂಯಿಸ್ ಪೆರ್ನಾಂಡಿಸ್ ಪೊಲೀಸ್ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ್ದ. ಆದರೆ ಅನೇಕ ಜನ ಈಗಲೂ 11 ಜನವರಿ 1982 ರಂದು ಸಾವನ್ನಪ್ಪಿದ ಮಣ್ಯಾ ಸುರ್ವೆಯ ಘಟನೆಯನ್ನೇ ಪ್ರಥಮ ಎನ್‌ಕೌಂಟರ್ ಎನ್ನುತ್ತಿದ್ದಾರೆ. ಮಣ್ಯಾ ಸುರ್ವೆಯ ಎನ್‌ಕೌಂಟರ್ ಮೇಲೆ ಶೂಟ್‌ಔಟ್ ಎಟ್ ವಡಾಲಾ ಹೆಸರಲ್ಲಿ ಫಿಲ್ಮ್‌ಕೂಡಾ ಬಂದಿತ್ತು. ಅದರಲ್ಲಿ ಜಾನ್ ಅಬ್ರಾಹಂ ಮಣ್ಯಾನ ಪಾತ್ರ ನಿರ್ವಹಿಸಿದ್ದ.
   
ಮನಪಾ ಆಸ್ಪತ್ರೆಗಳಲ್ಲಿ ಫೀಸ್ ವೃದ್ಧಿ ವಿವಾದ
 ಮುಂಬೈಯ ಮಹಾನಗರ ಪಾಲಿಕೆ ತನ್ನ ಆಸ್ಪತ್ರೆಗಳಲ್ಲಿ ರೋಗಿಗಳ ಫೀಸ್ ವೃದ್ಧಿಸುವ ಪ್ರಸ್ತಾವ ಇರಿಸಿದ್ದಕ್ಕೆ ನಾಲ್ಕೂ ಕಡೆಗಳಿಂದಲೂ ತೀವ್ರ ವಿರೋಧ ವ್ಯಕ್ತವಾಗಿದೆ. ಇಲ್ಲಿ ಮುಂಬೈ ಸೀಮೆಯ ಹೊರಗಿನಿಂದ ಬರುವ ರೋಗಿಗಳಿಂದ ಇನ್ನೂ ಹೆಚ್ಚು ಫೀಸ್ ವಸೂಲಿ ಮಾಡಲು ನಿರ್ಧರಿಸಲಾಗಿದೆ.

ಮುಂಬೈ ಮನಪಾ ಈ ಬಾರಿ ತನ್ನ ಬಜೆಟ್ ಪ್ರಸ್ತಾವದಲ್ಲಿ ಇಸವಿ 2000 ದ ನಂತರ ಫೀಸ್‌ನಲ್ಲಿ ವೃದ್ಧಿ ಮಾಡಿಲ್ಲ ಎಂದಿದೆ. ವರ್ಷದಿಂದ ವರ್ಷಕ್ಕೆ ಖರ್ಚು ಹೆಚ್ಚಾಗುತ್ತಿದೆ. ಹೀಗಾಗಿ ವೃದ್ಧಿ ಅನಿವಾರ್ಯ ಎಂದಿದೆ. ಮನಪಾ ಆಸ್ಪತ್ರೆಗಳಲ್ಲಿ 45 ಪ್ರತಿಶತ ರೋಗಿಗಳು ಮುಂಬೈ ಸೀಮೆಯ ಹೊರಗಡೆಯಿಂದ ಬರುವವರು. ಹೀಗಾಗಿ ಇವರಿಂದ ಹೆಚ್ಚಿಗೆ ಫೀಸ್ ವಸೂಲಿ ಮಾಡಬೇಕು ಎಂದಿದೆ. ಮುಂಬೈ ಮನಪಾ ತನ್ನ ಪ್ರಮುಖ ಮೂರು ಆಸ್ಪತ್ರೆಗಳಾದ ಕೆ.ಇ.ಎಂ, ನಾಯರ್ ಮತ್ತು ಸಯನ್ ಆಸ್ಪತ್ರೆಗಳ ಹೊರತಾಗಿ ಬಾಂದ್ರಾ ಬಾಬಾ, ಕುರ್ಲಾ ಬಾಬಾ, ವಿ.ಎನ್. ದೇಸಾಯಿ, ಕಸ್ತೂರ್‌ಬಾ, ಕೂಪರ್ ಆಸ್ಪತ್ರೆ, ಭಗವತಿ ಆಸ್ಪತ್ರೆ, ಶತಾಬ್ದಿ ಆಸ್ಪತ್ರೆಗಳ ಸಹಿತ ಅನ್ಯ ಆರೋಗ್ಯ ಕೇಂದ್ರಗಳನ್ನು ಸಂಚಾಲನೆ ಮಾಡುತ್ತದೆ. ಇಲ್ಲಿ ಈಗಲೂ ಹತ್ತು (10) ರೂ. ಫೀಸ್‌ನಲ್ಲಿ ಸುಲಭವಾಗಿ ಪೇಪರ್ ತುಂಬಿಸಬಹುದು. ಮುಂದಿನ ಖರ್ಚು ಬೇರೆ ಇದೆ. ಮನಪಾ ಆಡಳಿತವು ಹೇಳುವಂತೆ ಈ ವರ್ಷ ಆಸ್ಪತ್ರೆಯ ಆದಾಯ 151 ಕೋಟಿ ರೂ. ಇದ್ದರೆ ಪ್ರಸ್ತಾವಿತ ಖರ್ಚು 3,693 ಕೋಟಿ ರೂ.!
ಮನಪಾ ಹೊರತಾಗಿ ರಾಜ್ಯ ಸರಕಾರದ ಸಂಚಾಲನೆಯಲ್ಲಿರುವ ಜೆ.ಜೆ. ಆಸ್ಪತ್ರೆ ಕೂಡಾ ಈಗ ಹೆಚ್ಚಿನ ಖರ್ಚು ಹೊರಬೇಕಾಗಿದೆ. ಮುಂಬೈ ಸೀಮೆಯಿಂದ ಹೊರಗಿರುವ ರೋಗಿಗಳು ಕೂಡಾ ಬಡ ಕುಟುಂಬದಿಂದಲೇ ಬಂದವರಾಗಿದ್ದಾರೆ.
ಮನಪಾ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಯಶೋಧರ ಪಡ್ಸೆ ಅವರು ಹೇಳುತ್ತಾರೆ. ಮುಂಬೈ ಮಹಾರಾಷ್ಟ್ರದ ರಾಜಧಾನಿ, ಹಾಗಾಗಿ ಮಹಾರಾಷ್ಟ್ರದಿಂದ ಬಂದ ಜನರಿಂದ ನಾವು ಹೆಚ್ಚು ಹಣ ವಸೂಲಿ ಮಾಡೋದಿಲ್ಲ ಎಂದು. ಮನಪಾದ ಕೆ.ಇ.ಎಂ.ನಲ್ಲಿ 2,250 ನಾಯರ್‌ನಲ್ಲಿ 1,650, ಸಯನ್ ಆಸ್ಪತ್ರೆಯಲ್ಲಿ 1,422 ಬೆಡ್‌ಗಳಿದ್ದರೆ ಸರಕಾರದ ಜೆ.ಜೆ. ಆಸ್ಪತ್ರೆಯಲ್ಲಿ 1,352 ಬೆಡ್‌ಗಳಿವೆ.
   

ಸ್ವಚ್ಛ ಮುಂಬೈ ಪ್ರಚಾರಕ್ಕಾಗಿ ಮನಪಾ ಮಾಡಲಿದೆ 15 ಕೋಟಿ ರೂ. ಖರ್ಚು
ಮುಂಬೈ ಮನಪಾ ಆಯುಕ್ತ ಅಜೋಯ್ ಮೆಹ್ತಾ ಅವರು 37,052.15 ಕೋಟಿ ರೂ.ಯ ಅಂದಾಜು ಬಜೆಟ್ 2016-17 ಕ್ಕಾಗಿ ವಂಡಿಸಿದ್ದಾರೆ. ನರೀಮನ್ ಪಾಯಿಂಟ್‌ನಿಂದ ಕಾಂದಿವಲಿ ತನಕದ ಬಹು ನಿರೀಕ್ಷಿತ ಕೋಸ್ಟಲ್ ರೋಡ್‌ಗಾಗಿ ಒಂದು ಸಾವಿರ ಕೋಟಿ ರೂ. ಇರಿಸಲಾಗಿದೆ. ಆರೋಗ್ಯ ಮತ್ತು ಚಿಕಿತ್ಸೆಗಾಗಿ 3693.24 ಕೋಟಿ ರೂ., ಶಿಕ್ಷಣಕ್ಕಾಗಿ 2394.10 ಕೋಟಿ ರೂ.ಯನ್ನು ಇರಿಸಲಾಗಿದೆ.

   
ಆದರೆ ಸ್ವಚ್ಛತಾ ಅಭಿಯಾನದಲ್ಲಿ ವಿಭಿನ್ನ ಮಾಧ್ಯಮಗಳಲ್ಲಿ ಪ್ರಚಾರ ನಡೆಸಿ ಜನರನ್ನು ಜಾಗೃತಗೊಳಿಸುವುದಕ್ಕಾಗಿ 15 ಕೋಟಿ ರೂ. ಖರ್ಚು ಮಾಡುವ ಸಂಗತಿ ಮಾತ್ರ ಚರ್ಚೆ ಹುಟ್ಟಿಸಿದೆ. ಕೇವಲ ಪ್ರಚಾರಕ್ಕಾಗಿ ಇಷ್ಟು ಮೊತ್ತ ಹಣ ಬೇಕೇ? ತಜ್ಞರ ಪ್ರಕಾರ ಪ್ರಚಾರಕ್ಕೆ ಖರ್ಚು ಮಾಡುವ ಈ ಹಣದಲ್ಲಿ ಟಾಯ್ಲೆಟ್ ನಿರ್ಮಾಣ ಮತ್ತು ಅದರ ಶುಚಿತ್ವಕ್ಕಾಗಿ ಇರಿಸಿದರೆ ಉತ್ತಮವಿದೆಯಂತೆ. ರಸ್ತೆ ಪಕ್ಕಗಳಲ್ಲಿ ಬೋರ್ಡ್ ಬ್ಯಾನರ್, ಬೀದಿ ನಾಟಕಗಳ ಪ್ರದರ್ಶನ.... ಇತ್ಯಾದಿಗಳ ಮೂಲಕ ಸ್ವಚ್ಛತೆಯತ್ತ ಜನರ ಗಮನ ಸೆಳೆಯಲಾಗುವುದು. ರೇಡಿಯೋ, ಪೇಸ್‌ಬುಕ್, ಟ್ವಿಟರ್.... ಇಂತಹ ಸೋಶಿಯಲ್ ಮೀಡಿಯಾಗಳ ಮೂಲಕವೂ ಯುವಕರನ್ನು ಜಾಗೃತಗೊಳಿಸಲಾಗುವುದು. ಶಾಲೆಗಳಲ್ಲಿ ಸ್ಪರ್ಧೆ ಆಯೋಜಿಸಲಾಗುವುದು. ಹೈವೇ ಬದಿಗಳಲ್ಲಿ ಮಹಿಳೆಂುರಿಗೆ ಶೌಚಾಲಯ ಮತ್ತು ಆಟೋಮ್ಯಾಟಿಕ್ ಟಾಯ್ಲೆಟ್ ನಿರ್ಮಾಣಕ್ಕೆ 5 ಕೋಟಿ ರೂ.ಯ ಮೊತ್ತ ಇರಿಸಲಾಗಿದೆ. ಪೇ ಆ್ಯಂಡ್ ಯೂಸ್ ಮಾದರಿಯಲ್ಲಿ 1070 ಹೊಸ ಟಾಯ್ಲೆಟ್‌ಗಳ ನಿರ್ಮಾಣ ಮಾಡಲಾಗುವುದು. ಸ್ವಚ್ಛ ಮುಂಬೈ - ಸ್ಪಚ್ಛ ಬಾರತ್ ಅಭಿಯಾನಕ್ಕೆ ವಿಶೇಷ ಗಮನ ನೀಡಲಾಗಿದೆ. ಸಾಮೂಹಿಕ ಟಾಯ್ಲೆಟ್‌ಗಳ ಅನುಸಾರ 3,340 ಟಾಯ್ಲೆಟ್ ನಿರ್ಮಿಸಲಾಗುವುದು. ಮನಪಾ 117 ಸ್ಥಳಗಳನ್ನು ಈಗಾಗಲೇ ಆಯ್ಕೆ ಮಾಡಿದೆ. ಮುಂಬೈ ಪೊಲೀಸ್ ನಂಬರ್ ವನ್ ಅಂತೆ!

   
ಮುಂಬೈಯ ನೂತನ ಪೊಲೀಸ್ ಕಮಿಷನರ್ ದತ್ತಾತ್ರೇಯ ಪಡ್‌ಸಲ್ಗೀಕರ್ ಅವರು ಅಧಿಕಾರ ಸ್ವೀಕರಿಸುತ್ತಲೇ ಮುಂಬೈಯ ಎಲ್ಲಾ ಪೊಲೀಸರಿಗೆ ಒಂದು ಸಂದೇಶ ರವಾನಿಸಿದ್ದಾರೆ. ಮುಂಬೈ ಪೊಲೀಸರಿಗೆ ಕಳಂಕ ತರುವಂತಹ ಯಾವುದೇ ಕೆಲಸ ನೀವು ಮಾಡಬಾರದು ಎನ್ನುವುದೇ ಈ ಸಂದೇಶದ ತಾತ್ಪರ್ಯ. ಜೊತೆಗೆ ತನ್ನ ಮೊದಲ ಕ್ರೈಮ್ ಕಾನ್ಫರೆನ್ಸ್‌ನಲ್ಲಿ ಮುಂಬೈ ಪೊಲೀಸ್ ನಂಬರ್ ವನ್ ಇದ್ದಾರೆ. ನಾವು ಈ ಸ್ಟೇಟಸ್‌ನ್ನು ಸದಾ ಕಾಪಾಡಲು ಪ್ರಯತ್ನಿಸುವೆವು ಎಂದಿದ್ದಾರೆ. ಭ್ರಷ್ಟಾಚಾರದಿಂದ ದೂರ ಇರಿ, ಸಾರ್ವಜನಿಕರಲ್ಲಿ ಉತ್ತಮವಾಗಿ ವರ್ತಿಸಿರಿ ಎನ್ನುವ ಹಿತವಚನವನ್ನೂ ಅವರು ಪೊಲೀಸರಿಗೆ ನೀಡಿದ್ದಾರೆ. ಒಂದು ರಾಜ್ಯ, ಒಂದು ಪೊಲೀಸ್ ಠಾಣೆ

ಮುಂಬೈಯಲ್ಲಿ ಎ.ಟಿ.ಎಸ್.ನ ಒಂದೇ ಒಂದು ಪೊಲೀಸ್ ಠಾಣೆ ಇರುವುದು ಅನೇಕರಿಗೆ ತಿಳಿದಿಲ್ಲ. ಡಿಸೆಂಬರ್ 16,2015 ರಲ್ಲಿ ಮುಂಬೈಯ ಮಾಲ್ವಣಿಯಲ್ಲಿ ನಾಪತ್ತೆಯಾದ ಮೂವರು ಯುವಕರ ಪ್ರಕರಣ ತೀವ್ರ ಚರ್ಚೆಯಾಗಿತ್ತು. ಎರಡು ವಾರಗಳ ನಂತರ ಈ ಕೇಸ್‌ನ ಎಪ್.ಐ.ಆರ್ ದಕ್ಷಿಣ ಮುಂಬೈಯ ಕಾಲಾಚೌಕಿ ಎ.ಟಿ.ಎಸ್.ನಲ್ಲಿ ದಾಖಲಿಸಲಾಯಿತು. ಎ.ಟಿ.ಎಸ್.ನ ಒಂದು ಯುನಿಟ್ ಮಾಲ್ವಣಿ ಸಮೀಪದ ಚಾರ್‌ಕೋಪ್‌ನಲ್ಲೂ ಇದೆ. ಮಾಲ್ವಣಿ ಚಾರ್‌ಕೋಪ್ ಎ.ಟಿ.ಎಸ್.ನ ವ್ಯಾಪ್ತಿಯಡಿಯೇ ಬರುತ್ತದೆ. ಹೀಗಾಗಿ ಮಾಲ್ವಣಿ ಕೇಸ್‌ನಲ್ಲಿ ಕಾಲಾಚೌಕಿಯಲ್ಲಿ ಯಾಕೆ ಎಪ್.ಐ.ಆರ್ ದಾಖಲಿಸಿದರೆಂದು ಅನೇಕರಿಗೆ ಆಶ್ಚರ್ಯವಾಗಿತ್ತು. ನಂತರ ತಿಳಿದು ಬಂದ ಸಂಗತಿ ಎಂದರೆ ಮಹಾರಾಷ್ಟ್ರದಲ್ಲಿ ಎಟಿಎಸ್‌ನ ಕೇವಲ ಒಂದೇ ಒಂದು ಪೊಲೀಸ್ ಠಾಣೆ ಇದೆ. ಅದು ಕಾಲಾಚೌಕಿಯಲ್ಲಿ ಎಂದು! ಎಟಿಎಸ್ ಮಹಾರಾಷ್ಟ್ರದಲ್ಲಿ ಎಲ್ಲೇ ಆರೋಪಿಗಳನ್ನು ಬಂಧಿಸಲಿ, ಅವರ ವಿರುದ್ಧ ಎಪ್.ಐ.ಆರ್. ಕೇವಲ ದಕ್ಷಿಣ ಮುಂಬೈಯ ಕಾಲಾಚೌಕಿ ಎಟಿಎಸ್ ಪೊಲೀಸ್ ಠಾಣೆಯಲ್ಲೇ ದಾಖಲಿಸಬೇಕಾಗುವುದು.
ಮಹಾರಾಷ್ಟ್ರದಲ್ಲಿ ಮೊದಲ ಎಟಿಎಸ್‌ನ್ನು ಎ.ಎ.ಖಾನ್ ಅವರ ನೇತೃತ್ವದಲ್ಲಿ ಎಂಭತ್ತರ ದಶಕದಲ್ಲಿ ಸ್ಥಾಪಿಸಲಾಗಿತ್ತು. ಆವಾಗ ಮುಂಬೈಯಲ್ಲಿ ಸಿಖ್ ಉಗ್ರಗಾಮಿಗಳು ಕಿತಾಪತಿಗೆ ಮುಂದಾಗಿದ್ದರು. ಎರಡನೇ ಎಟಿಎಸ್ 2004 ರಲ್ಲಿ ಕೆ.ಪಿ.ರಘುವಂಶೀ ಅವರ ನೇತೃತ್ವದಲ್ಲಿ ಸ್ಥಾಪಿಸಲಾಗಿತ್ತು. ಆರಂಭದಲ್ಲಿ ಎಟಿಎಸ್‌ಗೆ ಮುಂಬೈಯಲ್ಲಿ ಮೂರು ಯುನಿಟ್ಸ್‌ಗಳಿದ್ದುವು. ಕಾಲಾಚೌಕಿ, ವಿಕ್ರೋಲಿ ಮತ್ತು ಜುಹು ಚಂದನ್ ಚೌಕಿಯಲ್ಲಿ ನಂತರ ಮುಂಬೈಯ ನಾಗ್‌ಪಾಡಾ ಮತ್ತು ಚಾರ್‌ಕೋಪ್‌ನಲ್ಲಿ ಇನ್ನೆರಡು ಯೂನಿಟ್ಸ್ ತೆರೆಯಲಾಯಿತು. ಮುಂಬೈಯ ಹೊರಗಡೆ ಎ.ಟಿ.ಎಸ್‌ಗೆ ಥಾಣೆ, ಪುಣೆ, ನಾಶಿಕ್, ನಾಗ್‌ಪುರ್, ನಾಂದೆಡ್ ಔರಂಗಾಬಾದ್‌ಗಳಲ್ಲೂ ಯೂನಿಟ್ಸ್‌ಗಳಿವೆ. ಆದರೆ ಎಲ್ಲಾ ಯುನಿಟ್ಸ್‌ಗಳ ಪೊಲೀಸ್ ಠಾಣೆ ಕಾಲಾಚೌಕಿಯಲ್ಲೇ ಇರುವುದು.
 ಕಾಲಾಚೌಕಿ ಪೊಲೀಸ್ ಠಾಣೆಯಂತೆ ಇಷ್ಟೊಂದು ಪವರ್ ಇರುವ ಇನ್ನೊಂದು ಪೊಲೀಸ್ ಠಾಣೆ ದಕ್ಷಿಣ ಮುಂಬೈಯ ಎಲ್ಲೋಗೇಟ್ ಪೊಲೀಸ್ ಠಾಣೆ. ಭಾರತದಲ್ಲಿ ಮುಂಬೈಯಿಂದ ಕನ್ಯಾಕುಮಾರಿ ತನಕ ಎಲ್ಲೇ ಸಮುದ್ರ ತೀರದಲ್ಲಿ ಅಪರಾಧಗಳು ನಡೆಯಲಿ, ಅದರ ಎಪ್.ಐ.ಆರ್. ಮುಂಬೈಯ ಎಲ್ಲೋಗೇಟ್ ಪೊಲೀಸ್ ಠಾಣೆಯಲ್ಲೇ ದಾಖಲಾಗುವುದು. ಇಂಗ್ಲಿಷರ ಕಾಲದಲ್ಲ್ಲಿ ಇದರ ನೋಟಿಫಿಕೇಶನ್ ಆಗಿದ್ದು ಈಗಲೂ ಆ ಆದೇಶ ಜಾರಿಯಲ್ಲಿದೆ.


ಆರ್.ಪಿ.ಐನ ಆಠವಲೆ
ಒಂದು ದಿನದ ಮುಖ್ಯಮಂತ್ರಿ

ಪ್ರತೀ ರಾಜಕಾರಣಿಗೂ ತಾನು ಬದುಕಿನಲ್ಲಿ ಒಂದು ದಿನ ಮುಖ್ಯಮಂತ್ರಿಯಾಗುವ ಕನಸು ಇರುತ್ತದೆ. ಇದೀಗ ರಿಪಬ್ಲಿಕ್‌ಪಾರ್ಟಿ ಆಫ್ ಇಂಡಿಯಾ ಆಠವಲೆ ಇದರ ರಾಷ್ಟ್ರೀಯ ಅಧ್ಯಕ್ಷ, ಸಂಸದ ರಾಮದಾಸ ಆಠವಲೆ ಅವರಿಗೆ ಮುಖ್ಯಮಂತ್ರಿ ಆಗುವ ಅವಕಾಶ ಸಿಕ್ಕಿದೆ. ಆದರೆ ಇದು ಸಿನೆಮಾದಲ್ಲಿ! ಶಿವಾಜಿ ದೋಲ್ತಾಡೆ ನಿರ್ದೇಶನದಲ್ಲಿ ನಿರ್ಮಾಣವಾಗುತ್ತಿಗುವ ಫಿಲ್ಮ್ ಕನ್ಯಾರತ್ನಕ್ಕಾಗಿ ಫಿಲ್ಮ್‌ಸಿಟಿಯ ಅಂಗಣದಲ್ಲಿನ ವೇದಿಕೆಯಲ್ಲಿ ಮುಖ್ಯಮಂತ್ರಿಯ ರೂಪದಲ್ಲಿ ಅವರು ಭಾವನಾತ್ಮಕ ಭಾಷಣ ಇತ್ತೀಚೆಗೆ ನೀಡಿದರು. ವಿಶೇಷ ಅಂದರೆ ಮೊದಲನೆ ಶಾಟ್ ಓಕೆ ಎನಿಸಿಕೊಂಡದ್ದು! ಈ ಫಿಲ್ಮ್ ಕನ್ಯಾ ಭ್ರೂಣಹತ್ಯೆಯ ವಿರುದ್ಧ ವಿದೆ. ಹೀಗಾಗಿ ನಾನು ಅಭಿನಯವನ್ನು ಒಪ್ಪಿಕೊಂಡೆ ಎಂದರು ಆಠವಲೆ. ಬಾಲ್ಯದಿಂದಲೂ ಆಠವಲೆಯವರಿಗೆ ದೇಶಭಕ್ತಿ ಸಿನೆಮಾಗಳು, ದೇಶಭಕ್ತಿ ಹಾಡುಗಳು ಇಷ್ಟವಂತೆ.


*ನರೀಮನ್ ಪಾಯಿಂಟ್‌ನಲ್ಲಿರುವ ಬಿಜೆಪಿ ಮುಖ್ಯಾಲಯದಲ್ಲಿ ಅಕ್ರಮ ನಿರ್ಮಾಣ!

 ಮುಂಬೈಯಲ್ಲಿ ಸರಕಾರಿ ಜಮೀನಿನಲ್ಲಿ ನೇತಾರರು ಮತ್ತು ರಾಜಕೀಯ ಪಕ್ಷಗಳು ಅನಧಿಕೃತ ನಿರ್ಮಾಣಗಳನ್ನು ಕೈಗೊಳ್ಳುತ್ತಿ ರುವುದು ಹೊಸತೇನಲ್ಲ. ಒಂದರ ಹಿಂದೆ ಒಂದರಂತೆ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಇದೀಗ ತಾಜಾ ಪ್ರಕರಣದಲ್ಲಿ ರಾಜ್ಯದ ಆಡಳಿತದಲ್ಲಿರುವ ಬಿಜೆಪಿಯ ಪಾರ್ಟಿ ಮುಖ್ಯಾಲಯದಲ್ಲಿ ಅನಧಿಕೃತ ನಿರ್ಮಾಣ ಕಂಡು ಬಂದಿರುವ ಬಗ್ಗೆ ಕೋರ್ಟ್‌ಗೆ ದೂರು ನೀಡಲಾಗಿದೆ. ಬಾಂಬೆ ಹೈಕೋರ್ಟ್ ಈ ಪ್ರಕರಣದಲ್ಲಿ ಬಂದ ಜನಹಿತ ಅರ್ಜಿಯ ವಿಚಾರಣೆ ನಡೆಸಿದ್ದು ಬಿಜೆಪಿ ಮುಖ್ಯಾಲಯದಲ್ಲಿನ ಅನಧಿಕೃತ ನಿರ್ಮಾಣದ ವಿಷಯವಾಗಿ ಅಲ್ಲಿನ ಜಮೀನಿನ ಮಾಲಕತ್ವದ ದಾಖಲೆ ಪತ್ರಗಳನ್ನು ಕೋರ್ಟ್‌ನ ಮುಂದಿರಿಸಲು ಸೂಚಿಸಿದೆ. ಜಸ್ಟೀಸ್ ಅಭಯ್ ಓಕ್ ಅವರ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ.
ಈ ಪ್ರಕರಣದಲ್ಲಿ ಜನಹಿತ ಅರ್ಜಿ ದಾಖಲಿಸಿರುವ ಸಂಸ್ಥೆ ಚರ್ಚ್ ಗೇಟ್ ಸಿಟಿಜನ್ಸ್ ವೆಲ್ಫೆರ್ ಟ್ರಸ್ಟ್ ಆರೋಪಿಸುವಂತೆ ನರೀಮನ್ ಪಾಯಿಂಟ್ ಬಿಜೆಪಿಯ ಮುಖ್ಯಾಲಯಕ್ಕಾಗಿ ಸರಕಾರವು ಜಮೀನು ವಿತರಿಸಿದೆ. ಈ ಜಮೀನಿನಲ್ಲಿ ಬಿಜೆಪಿಗೆ ಕೇವಲ 2,682 ವರ್ಗ ಅಡಿಯಲ್ಲಿ ಮಾತ್ರ ನಿರ್ಮಾಣ ಕಾರ್ಯಕ್ಕೆ ಅನುಮತಿ ನೀಡಿತ್ತು. ಆದರೆ ಬಿಜೆಪಿ 9 ಸಾವಿರ ವರ್ಗ ಅಡಿಯಲ್ಲಿ ನಿರ್ಮಾಣ ಕೈಗೊಂಡು 14 ಚೆಂಬರ್‌ಗಳನ್ನು ಕಟ್ಟಿಸಿದೆಯಂತೆ.
ಮುಂಬೈ ಮಹಾನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಪತ್ರಿಕೆ ನೇಷನಲ್ ಹೆರಾಲ್ಡ್‌ನ ಬಾಂದ್ರಾದಲ್ಲಿನ ಜಮೀನು, ಬಿಜೆಪಿ ಸಂಸದೆ ಹೇಮಾಮಾಲಿನಿಯ ಜಮೀನು ಸಹಿತ ಬಿಜೆಪಿ - ಶಿವಸೇನಾ ನಾಯಕರ ಕೆಲವು ಜಮೀನು ವಿವಾದಗಳು, ಗಾಯಕ ಸುರೇಶ್ ವಾಡ್ಕರ್, ಹರಿಪ್ರಸಾದ್ ಚೌರಾಸಿಯಾ ಅವರ ಸಂಸ್ಥೆಗಳಿಗೆ ನೀಡಿದ ಜಮೀನು ಸಾಕಷ್ಟು ವಿವಾದ ಸೃಷ್ಟಿಸಿರುವುದನ್ನು ಇಲ್ಲಿ ಗಮನಿಸಬಹುದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X